ಚಿತ್ರರಂಗದಲ್ಲಿ ಜೀವನ ಕoಡುಕೊoಡಿರುವ ಬಹಳಷ್ಟು ಜನರು ಚಿತ್ರ ಚಟುವಟಿಕೆಗಳು ಇಲ್ಲದೆ ತೊಂದರೆಗೆ ಸಿಲುಕಿದ್ದಾರೆ. ಕರೋನಾ ಹಾವಳಿಯಿಂದ ಸದ್ಯ ಲಾಕ್ ಡೌನ್ ಆಗಿದ್ದು , ಚಿತ್ರರಂಗದ ಹಲವು ವಿಭಾಗದ ತಂತ್ರಜ್ಞಾನ , ಕಲಾವಿದರು ಕೆಲಸ ಕಾರ್ಯವಿಲ್ಲದೆ ಮನೆಯಲ್ಲಿ ಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ.
ಇದನ್ನು ಗಮನಿಸಿ ಸಿನಿಮಾ ಸದಸ್ಯರುಗಳಿಗೆ ಹಾಗೂ ಸಿನಿಮಾ PROಗಳು ಹಾಗೂ ಪತ್ರಕರ್ತ ಛಾಯಾಗ್ರಾಹಕರಿಗೆ ದಿನಸಿ ಕಿಟ್ ವಿತರಿಸುವ ಕಾರ್ಯಕ್ರಮಗಳನ್ನು ಇಂಡಿಯನ್ ಫಿಲಂ ಮೇಕರ್ ಅಸೋಸಿಯೇಷನ್ ಮತ್ತು ಇಂಗ್ಲಿಷ್ ಮಂಜ ಚಿತ್ರತಂಡ ಹಾಗೂ ಕೆಲವು ದಾನಿಗಳು ಸಹ ಕೈಜೋಡಿಸಿ ಈ ಮಹಾನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.
ಈ ಸುಸಂದರ್ಭದಲ್ಲಿ ಇಂಗ್ಲಿಷ್ ಮಂಜ ಚಿತ್ರದ ನಿರ್ದೇಶಕರಾದ ಆರ್ಯ .ಎಂ. ಮಹೇಶ್, ಇಂಡಿಯನ್ ಫಿಲಂ ಮೇಕರ್ ಅಸೋಸಿಯೇಷನ್ ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾದ ದಿಲೀಪ್ ಕುಮಾರ್. ಹೆಚ್.ಆರ್, ಇಂಗ್ಲಿಷ್ ಮಂಜ ಚಿತ್ರದ ನಿರ್ಮಾಪಕರಾದ ಡೇವಿಡ್ .ಆರ್ , ಇಂಗ್ಲಿಷ್ ಮಂಜ ಚಿತ್ರದಲ್ಲಿ ಮುಖ್ಯಪಾತ್ರದಲ್ಲಿ ನಟಿಸಿರುವ ಮುರಳಿ ವಿಲಿಯಮ್ಸ್ ( ಕರ್ನೂಲ್) , ಹಾಗೂ ಶಿವರಾಜ್ ಮುತ್ತಣ್ಣನವರು(ಹುಬ್ಬಳ್ಳಿ) ,
ವಿಜಯ್ ಕುಮಾರ್ (ಹುಬ್ಬಳ್ಳಿ) , ಇಂಗ್ಲಿಷ್ ಮಂಜ ಚಿತ್ರದ ಸಹ ನಿರ್ದೇಶಕರಾದ ವಿಜಯ್. ಟಿ ಪಿ ,ನಟ ನಿರ್ದೇಶಕರಾದ ಮಂಜುನಾಥ ದೈವಜ್ಞ , ಸ್ಕೈಲೈನ್ ಸೀನು, ಸಹ ನಿರ್ದೇಶಕರಾದ ಜೈ ವರ್ಧನ್, ಕಲಾವಿದರಾದ ದೀಪು ಗೌಡ, ದೀಪಕ್ ಯಲಹಂಕ , ಹಾಗೂ ಮೇಲ್ವಿಚಾರಕರಾದ ಅನಿಲ್ ಕುಮಾರ್ ಹಾಗೂ ಸಂಸ್ಥೆಯ ಸದಸ್ಯರುಗಳು ಭಾಗಿಯಾಗಿದ್ದರು .
ಸ್ನೇಹಿತರೆ ಇದೆ ರೀತಿ ನಿಮ್ಮೆಲ್ಲರ ಪ್ರೀತಿ ಪ್ರೋತ್ಸಾಹ ಸಹಕಾರ ನಮ್ಮ ಇಂಗ್ಲಿಷ್ ಮಂಜ ಚಿತ್ರತಂಡ ಹಾಗೂ ಐಎಫ್ಎಂಎ ಸಂಸ್ಥೆಯ ಮೇಲಿರಲಿ ,ಕನ್ನಡ ಚಿತ್ರರಂಗದ ಪ್ರತಿಯೊಬ್ಬ ಸದಸ್ಯರಿಗೂ ಧೈರ್ಯ ತುಂಬುವ ಕಾರ್ಯವನ್ನು ಮಾಡೋಣ ಎಲ್ಲರು ಒಟ್ಟಾಗಿ ಕೈ ಜೋಡಿಸೋಣ ಎಂದು ದಾನಿಗಳು ಮನವಿ ಮಾಡಿದರು.
Really hat’s off to you all you are doing wonderful job by giving food kits to artists really they are struggling lot without shootings due to this covid atleast you are making them very happily buy distributing a food kits I wish you all good luck and all the very best we all will be with you I will keep supporting you all atleast we can see them by happy faces really great
Suresh
good