ಭಾರತದ ಮೊಟ್ಟ ಮೊದಲ ಶಿಕ್ಷಕಿ, ದಮನಿತರ ಮೊದಲ ಧ್ವನಿ ‘ಸಾವಿತ್ರಿಬಾಯಿ ಫುಲೆ’ ಅವರ ಜೀವನ ಆಧಾರಿತ ಚಿತ್ರ ಇದಾಗಿದ್ದು, ವಿಶಾಲ್ ರಾಜ್ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಡಾ, ಸರಾಜೂ ಕಾಟ್ಕರ್ ಅವರ ಕಾದಂಬರಿ ಆಧರಿಸಿ ಚಿತ್ರಕ್ಕೆ ಕಥೆಯನ್ನು ಬರೆಯಲಾಗಿದೆ. ಬಸವರಾಜು ‘ಸಾವಿತ್ರಿಬಾಯಿ ಫುಲೆ’ ಚಿತ್ರದ ನಿಮಾಪಕರಾಗಿದ್ದಾರೆ.’
ಹೆಬ್ಬೆಟ್ ರಾಮಕ್ಕ’ ಸಿನಿಮಾ ಮೂಲಕ ಅದ್ಬುತ ನಟನೆ ಮಾಡಿ ಎಲ್ಲರ ಗಮನ ಸೆಳೆದಿದ್ದ ನಟಿ ತಾರಾ ಮತ್ತೊಂದು ವಿಶೇಷ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ತಾರಾ ಅನುರಾಧ ಅಭಿನಯದ ಹೊಸ ಸಿನಿಮಾ ‘ಸಾವಿತ್ರಿಬಾಯಿ ಫುಲೆ’ ತೆರೆಗೆ ಬರಲು ಸಿದ್ದವಾಗಿದೆ. ಚಿತ್ರ ಆಗಸ್ಟ್ 10 ರಂದು ಬಿಡುಗಡೆಯಾಗುತ್ತಿದೆ. ಈಗಾಗಲೇ ಸಮಾಜದ ಮೇಲೆ ಪ್ರಭಾವ ಬೀರುವಂತಹ ಪಾತ್ರಗಳಿಗೆ ಜೀವ ತುಂಬಿರುವ ನಟಿ ತಾರಾ ಅಭಿನಯದ ‘ಸಾವಿತ್ರಿಬಾಯಿ ಫುಲೆ’ ಕೂಡ ಜನರ ಮನಸ್ಸು ಗೆಲ್ಲುವ ಸೂಚನೆ ಕೊಟ್ಟಿದೆ.
ನಟಿ ತಾರಾ ಜೊತೆಯಲ್ಲಿ ಸುಚೇಂದ್ರ ಪ್ರಸಾದ್ ಕೂಡ ಸಿನಿಮಾದ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರ ವಿಭಿನ್ನವಾಗಿರುವ ಪೋಸ್ಟರ್ ಬಿಡುಗಡೆ ಆಗಿದ್ದು ಇನ್ನು ಕೆಲವೇ ದಿನಗಳಲ್ಲಿ ಟ್ರೇಲರ್ ಕೂಡ ರಿಲೀಸ್ ಆಗಲಿದೆ.

Be the first to comment