ವಿಭಿನ್ನ ಕಥಾಹಂದರದ ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದು , ಛಾಯಾಗ್ರಹಣವನ್ನು ಮನೋಹರ್ ಜೋಷಿ , ಸಂಕಲನವನ್ನ ಅಕ್ಷಯ್. ಪಿ .ರಾವ್ ಹಾಗೂ ಹಿನ್ನೆಲೆ ಸಂಗೀತವನ್ನು ಆನಂದ್ ರಾಜ್ ವಿಕ್ರಮ್ ನೀಡಿದ್ದಾರೆ.

ಇನ್ನು ಈ ಚಿತ್ರದ ತಾಂತ್ರಿಕ ವರ್ಗ ಎಷ್ಟು ಉತ್ತಮವಾಗಿದೆಯೋ… ಅಷ್ಟೇ ಸೊಗಸಾದ ಪಾತ್ರಧಾರಿಗಳಾದ ನಟ ತಿಲಕ್ , ನಟಿ ಯಜ್ಞಾ ಶೆಟ್ಟಿ , ಅಚ್ಯುತ್ ಕುಮಾರ್ , ಸುಧಾ ಬೆಳವಾಡಿ , ಪದ್ಮಜಾ ರಾವ್, ಸುಚೇಂದ್ರ ಪ್ರಸಾದ್ , ಅವಿನಾಶ್, ಕುರಿ ಪ್ರತಾಪ್, ತರಂಗ ವಿಶ್ವ , ಅಮೃತಾ ರಾಮಮೂರ್ತಿ , ಅಜಯ್ ರಾಜ್ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ.

ಇದೊಂದು ಸಸ್ಪೆನ್ಸ್ , ಥ್ರಿಲ್ಲರ್ ಕಥೆಯಾಗಿದ್ದು , ತಿಲಕ್ ಶೇಖರ್ ಒಬ್ಬ ದಕ್ಷ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನೂ ಈ ಚಿತ್ರ ಪ್ಯಾರನಾರ್ಮಲ್ ಆಕ್ಟಿವಿಟಿಗಳ ಕಥೆಯಾಗಿದ್ದು , ಆತ್ಮದ ಸುತ್ತ ಕುತೂಹಲ ಹಾಗೂ ಏರುಪೇರುಗಳು ಚಿತ್ರದಲ್ಲೂ ತೆರೆದುಕೊಳ್ಳಲಿದೆಯಂತೆ.

ನೋಡುವ ಪ್ರೇಕ್ಷಕ ನಲ್ಲಿ ಪ್ರತಿ ಹಂತದಲ್ಲೂ ಚಕಿತಗೊಳಿಸುವ ಈ ಚಿತ್ರದ ಕಥಾಹಂದರ ವಿಭಿನ್ನವಾಗಿದ್ದು , ಬಿಡುಗಡೆಗೆ ಸಿದ್ಧವಾಗಿದೆ. ಸದ್ಯ ಚಿತ್ರವನ್ನ “ಓಟಿಟಿ” ಫ್ಲ್ಯಾಟ್ ಫಾರಂನಲ್ಲಿ ಬಿಡುಗಡೆ ಮಾಡಲು ಚಿತ್ರ ತಂಡ ಸನ್ನದ್ಧವಾಗಿದೆ. ಲಾಕ್ ಡೌನ್ ತೆರವುಗೊಂಡು ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳುವ ಅವಕಾಶ ಸಿಕ್ಕ ನಂತರ ಈ “ಪಲ್ಲವಿ ಟಾಕೀಸ್” ಚಿತ್ರವನ್ನ ತೆರೆಮೇಲೆ ತರಲು ತಂಡ ಸಿದ್ಧವಾಗಿದೆ.