ಚಿತ್ರೋದ್ಯಮದ ಸದಸ್ಯರಿಗೆ ವಿಶೇಷ ಪ್ಯಾಕೇಜ್ ಘೋಷಿಸಿವಂತೆ ಸಿಎಂಗೆ ಮನವಿ

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಕಾರ್ಯದರ್ಶಿಗಳು ಹಾಗೂ ನಿರ್ಮಾಪಕರಾದ ಭಾ .ಮಾ. ಹರೀಶ್ , ನಟ ,ನಿರ್ಮಾಪಕ ಆಸ್ಕರ್ ಕೃಷ್ಣ ಹಾಗೂ ನಟ ಜೆ.ಕೆ.(ಜಯರಾಂ ಕಾರ್ತಿಕ್) ರವರು ಸನ್ಮಾನ್ಯ ಮುಖ್ಯಮಂತ್ರಿಗಳಾದ ಬಿ. ಎಸ್. ಯಡಿಯೂರಪ್ಪನವರನ್ನು ಭೇಟಿ ಮಾಡಿ ಚಿತ್ರೋದ್ಯಮದ ಸದಸ್ಯರಿಗೆ ವಿಶೇಷ ಪ್ಯಾಕೇಜ್ ಘೋಷಿಸಿ ಎಂದು ಮನವಿ ಸಲ್ಲಿಸಿದ್ದಾರೆ.

ಇದಕ್ಕೆ ಪೂರಕವಾಗಿ ಸಿ.ಎಂ. ಕೂಡ ಸ್ಪಂದಿಸಿದ್ದು , ಇದರ ಬಗ್ಗೆ ಚರ್ಚಿಸಿ ಸಕಲ ರೀತಿಯ ವ್ಯವಸ್ಥೆ ಮಾಡುವ ಭರವಸೆಯನ್ನು ನೀಡಿದ್ದಾರoತೆ. ಇಂದು ರಾಜ್ಯ ಸರ್ಕಾರ ವಿವಿಧ ವೃತ್ತಿಪರ ಕಾರ್ಮಿಕರು , ಬಡವರು ಬೀದಿ ಬದಿಯ ವ್ಯಾಪಾರಿಗಳು , ಸ್ವಂತ ಉದ್ಯೋಗಿಗಳಿಗೆ ವಿಶೇಷ ಪ್ಯಾಕೇಜನ್ನು ಘೋಷಿಸಿದೆ.

ಕರೋನಾ ಹಾವಳಿಯ ನಡುವೆ ಲಾಕ್ ಡೌನ್ ಆಗಿರುವುದರಿಂದ ಜನಸಾಮಾನ್ಯರು ಜೀವನ ನಡೆಸುವುದೇ ಕಷ್ಟವಾಗಿದ್ದು , ಅವರಿಗೂ ಕೂಡ ಅನುಕೂಲವಾಗುವಂಥ ವ್ಯವಸ್ಥೆಯನ್ನು ಸರಕಾರ ಮಾಡಿದೆ. ಆದರೆ ಚಿತ್ರೋದ್ಯಮವನ್ನು ಮಾತ್ರ ಗಮನಿಸಿರಲಿಲ್ಲ.

ಚಿತ್ರೋದ್ಯಮವನ್ನು ಕೂಡ ಒoದು ಉದ್ಯಮವಾಗಿ ಪರಿಗಣಿಸಬೇಕು. ಯಾಕೆಂದರೆ ಇದನ್ನು ನಂಬಿ ಸಾವಿರಾರು ಕುಟುಂಬಗಳು ಜೀವನ ನಡೆಸುತ್ತಿವೆ. ಲಾಕ್ ಡೌನ್ ಹಿನ್ನೆಲೆ ಚಿತ್ರೋದ್ಯಮದಲ್ಲಿ ಕೆಲಸ ಮಾಡುವ ಬಹಳಷ್ಟು ಮಂದಿಯ ಕಷ್ಟಗಳು ಹೇಳತೀರದಾಗಿದೆ. ಮನರಂಜನೆಯ ಕ್ಷೇತ್ರವಾದ ಈ ಚಿತ್ರೋದ್ಯಮವನ್ನು ಸರ್ಕಾರ ಗಮನಕ್ಕೆ ತೆಗೆದುಕೊಳ್ಳಬೇಕಾಗಿದೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ , ನಿರ್ಮಾಪಕರ ಸಂಘ, ನಿರ್ದೇಶಕರ ಸಂಘ , ಕಲಾವಿದರ ಸಂಘ , ವಿತರಕರ ಸಂಘ, ಪ್ರದರ್ಶಕರ ಸಂಘ, ಕಾರ್ಮಿಕರ ಒಕ್ಕೂಟ ಹಾಗೂ ಉಳಿದ ಅಂಗ ಸಂಸ್ಥೆಗಳು ಎಲ್ಲವೂ ಒಗ್ಗೂಡಿ ಸರಕಾರಕ್ಕೆ ಮನವಿ ಸಲ್ಲಿಸುವ ಕೆಲಸ ಮಾಡುವುದು ಅತ್ಯಗತ್ಯವಾಗಿದೆ.

ಈಗಾಗಲೇ ಕಳೆದ ವರ್ಷವೂ ಕೂಡ ಮನವಿ ಸಲ್ಲಿಸಲಾಗಿತ್ತು. ಇನ್ನು ಸರ್ಕಾರ ಮುಂದಿನ ದಿನಗಳಲ್ಲಿ ಚಿತ್ರೋದ್ಯಮಕ್ಕೆ ಯಾವ ರೀತಿಯ ಸಹಕಾರವನ್ನು ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!