ಈಗಾಗಲೇ ನಟಿ ರಾಗಿಣಿ ಬಹಳಷ್ಟು ಸಂಕಷ್ಟದಲ್ಲಿ ಇದ್ದಂಥ ಬಡವರಿಗೆ ಸಹಾಯ ಹಸ್ತವನ್ನು ಚಾಚಿದ್ದಾರೆ. ಕಳೆದ ವರ್ಷವೂ ಕೂಡ ನಟಿ ರಾಗಿಣಿ ನೊಂದವರ ಸಂಕಷ್ಟಕ್ಕೆ ಸ್ಪಂದಿಸಿದ್ದು , ಈ ವರ್ಷವೂ ಕೂಡ ಫುಡ್ ಕಿಟ್ಟ ನೀಡುವ ಮೂಲಕ ಗಮನ ಸೆಳೆದಿದ್ದಾರೆ. ಪೋಲಿಸ್ ಸಿಬ್ಬಂದಿ , ಅನಾಥಾಶ್ರಮ , ಮಂಗಳಮುಖಿಯರು , ಸ್ಮಶಾನ ಕಾಯುವ ಕುಟುಂಬಗಳಿಗೆ ಹಾಗೂ ಬೀದಿ ಬದಿಯ ನಿರ್ಗತಿಕರಿಗೆ ಫುಡ್ ಕಿಟ್ಟ ನೀಡಿದ್ದಾರೆ.
ಅದೇ ರೀತಿ ಅವರದೇ ಒಂದು ತಂಡದ ಮೂಲಕ ಅಡುಗೆಗಳನ್ನು ಮಾಡಿ ಅವರ ಇದ್ದ ಸ್ಥಳಕ್ಕೆ ಹೋಗಿ ಅವರ ಕಷ್ಟಕ್ಕೆ ಸ್ಪಂದಿಸುತ್ತಿದ್ದಾರೆ. ಇದಲ್ಲದೆ ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ ರಕ್ತದಾನ ಮಾಡುವ ಮೂಲಕ ಆರೋಗ್ಯವಾಗಿರುವ ಸ್ಥಿತಿವಂತರು ರಕ್ತದಾನವನ್ನು ಮಾಡಿ ಎಂದು ಜಾಗೃತಿ ಮೂಡಿಸಿದ್ದಾರೆ.
ಅದಲ್ಲದೆ ಕರೋನಾ ಗೆದ್ದಂಥ ವ್ಯಕ್ತಿಗಳ ಕೂಡ (ಪ್ಲಾಸ್ಮಾ) ರಕ್ತದಾನ ಮಾಡಿದರೆ ಬಹಳಷ್ಟು ಅನುಕೂಲವಾಗುತ್ತಿದೆ ಎಂಬ ಸಂದೇಶವನ್ನು ಕೂಡ ಹೇಳಿದ್ದಾರೆ. ಕಳೆದ ವಾರವಷ್ಟೇ ನಟ ವಸಿಷ್ಠ .ಎನ್. ಸಿಂಹ ರಕ್ತದಾನ ಮಾಡಿ ಮಾತನಾಡುತ್ತಾ ಬ್ಲಡ್ ಬ್ಯಾಂಕ್ ನಲ್ಲಿ ರಕ್ತದ ಶೇಖರಣೆ ಕಮ್ಮಿಯಾಗಿದೆ. ದಯವಿಟ್ಟು ರಕ್ತದಾನವನ್ನು ಮಾಡಿ ಅವಶ್ಯಕತೆಯಿರುವವರಿಗೆ ಸಹಾಯವಾಗುತ್ತದೆ ಎಂದು ಹೇಳಿದ್ದರು.
ಅದೇ ರೀತಿ ನಟಿ ರಾಗಿಣಿ ಕೂಡ ಬೆಂಗಳೂರಿನ ವಿ.ವಿ. ಪುರಂ ನಲ್ಲಿರುವ ಲಯನ್ಸ್ ಬ್ಲಡ್ ಬ್ಯಾಂಕ್ ನಲ್ಲಿ ರಕ್ತದಾನ ಮಾಡಿ ಎಲ್ಲರಲ್ಲೂ ಜಾಗೃತಿ ಮೂಡಿಸಿ ರಕ್ತದಾನ ಮಾಡಿ ಬ್ಲಡ್ ಬ್ಯಾಂಕ್ ಗೆ ಸಾಥ್ ನೀಡಿ ಎನ್ನುವ ಮೂಲಕ ಸಂಕಷ್ಟದಲ್ಲಿರುವವರ ಜೀವ ಉಳಿಸಿ ಎಂದು ಕೇಳಿಕೊಂಡಿದ್ದಾರೆ.
ಅದೇ ರೀತಿ ಬೆಂಗಳೂರಿನ ಬೇರೆ ಬೇರೆ ಕಡೆ ಕೂಡ ಸಾಗಿ ರಕ್ತದಾನ ಮಾಡಿ ಎಂಬ ಅಭಿಯಾನ ಮಾಡುವ ಆಲೋಚನೆ ಹೊಂದಿದ್ದಾರoತೆ. ಆತ್ಮೀಯತೆಯಿಂದ ಬೆರೆಯುವ ನಟಿ ರಾಗಿಣಿ ಕರೋನಾ ಬಂದ ವ್ಯಕ್ತಿಗಳಿಗೆ ಬೆಡ್ ವ್ಯವಸ್ಥೆಗೂ ಕೂಡ ಸಾಥ್ ನೀಡುತ್ತಿರುವುದು ಮೆಚ್ಚುಗೆಯ ವಿಚಾರವೇ ಆಗಿದೆ. ಒಟ್ಟಾರೇ ನಟಿ ರಾಗಿಣಿ ಕರೋನಾ ಸಂಕಷ್ಟದ ಈ ಸಮಯದಲ್ಲಿ ಸ್ಪಂದಿಸುತ್ತಿರುವ ರೀತಿ ಶ್ಲಾಘನೀಯವಾಗಿದೆ.
Be the first to comment