ಬದನವಾಳು ಚಿತ್ರ ಫಸ್ಟ್ ಲುಕ್: ಪ್ರೀತಿಗೆ ಮೀರಿದ ಜಾತಿಯನ್ನು ಬಿಂಬಿಸುವ ಸತ್ಯಕತೆ.! “ಮೆಳೇಕೋಟೆ ಟೂರಿಂಗ್ ಟಾಕೀಸ್” ಹಾಗು
“ಸಿನಿಮಾ ಮಾರ್ಕೆಟ್ ಬ್ಯಾನರ್” ನ ಅಡಿಯಲ್ಲಿ ನೈಜ ಘಟನೆ ಆಧಾರಿತ ಚಿತ್ರ ತೆರೆ ಕಾಣಲು ತಾಲೀಮು ನಡೆಸುತ್ತಿದೆ. “ಬದನವಾಳು” ಶೀರ್ಷಿಕೆಯೊಂದಿಗೆ ಹಳೆ ಮೈಸೂರು ಪ್ರಾಂತ್ಯಕ್ಕೆ ಅಂಟಿಕೊಂಡಿರುವ “ಬದನವಾಳು” ಗ್ರಾಮದ ಒಟ್ಟು ವ್ಯವಸ್ಥೆಯನ್ನು ಯತಾವತ್ತಾಗಿ ಸಿನಿರಸಿಕರಿಗೆ ನೀಡುವ ಜವಾಬ್ದಾರಿಯನ್ನು ನಿರ್ದೇಶಕರಾಗಿ ಉದಯ್ ಪ್ರಸನ್ನ ಅವರು ಹೆಗಲು ನೀಡಿದ್ದಾರೆ. ಚಿತ್ರಕ್ಕೆ ಸಂಬಂಧಿಸಿದಂತೆ ಪಾಲನಾ-ಪೋಷಣೆಯನ್ನು ನಿರ್ಮಾಪಕರಾಗಿ ಶ್ರೀಮತಿ ಪಾರ್ವತಿ ಚಂದ್ರಶೇಖರ್, ಶ್ರೀಮತಿ ಲೀಲಾವತಿ ಸುರೇಶ ಕುಮಾರ್ ಮತ್ತು ಶ್ರೀಮತಿ ಪ್ರೇಮ ಚಂದ್ರಯ್ಯ (ನಾಗಸಂದ್ರ) ನಿರ್ವಹಿಸಿದ್ದಾರೆ. ಮುಖ್ಯ ತಾರಾಗಣದಲ್ಲಿ ಉದಯೋನ್ಮುಖ ನಟರಾದ ರಾಜ್ ಮಂಜು ನಾಯಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದು. ಚಿತ್ರದ ನಾಯಕಿಯಾಗಿ ಬಿಂದುಶ್ರೀ ಮಿಂಚಲಿದ್ದಾರೆ.
ಮೂಲತಃ ಈ ಚಿತ್ರಕತೆ ಸಾಮಾಜಿಕ ವ್ಯವಸ್ಥೆಯ ದಾರಿದ್ರ್ಯವನ್ನು ಬಿಂಬಿಸುವಲ್ಲಿ ತಯಾರಿ ನಡೆಯುತ್ತಿದೆ. ಜಾತಿ ವ್ಯವಸ್ಥೆಯಲ್ಲಿ ಮೇಲು-ಕೀಳು,ಅಸ್ಪೃಶ್ಯತೆಯಲ್ಲಿ ಅರಳುವ ಪ್ರೀತಿ, ಮಾನಸಿಕ ದಾರಿದ್ರ್ಯಕ್ಕೆ ಅಂಟಿಕೊಂಡಿರುವ ಪ್ರೇಮ ವೈಫಲ್ಯ, ನೀಚಾ ರಾಜಕಾರಣಿಗಳು ಯಾವ ರೀತಿ ಯುವ ಪಿಳಿಗೆಯನ್ನು ಅವರ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವುದು. ಹಾಗು ದೇವರ ಹೆಸರಿನಲ್ಲಿ ನಡೆಯುತ್ತಿರುವ ಮೋಸ, ಹೀಗೆ ಹಲವಾರು ಪ್ರಮುಖ ಅಂಶಗಳನ್ನು ವಾಸ್ತವವಾಗಿ ಕಟ್ಟಿಕೊಡುವ ಕೆಲಸವನ್ನು ನಿರ್ದೇಶಕರು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದಾರೆ. ಈ ಮೇಲ್ಕಂಡ ಅಂಶಗಳನ್ನು ಯಾವ ರೀತಿ ತೆರೆ ಮೇಲೆ ಬಿಂಬಿತವಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಸದ್ಯಕ್ಕೆ ಇದೇ ಏಪ್ರಿಲ್ 15 ಕ್ಕೆ ಚಿತ್ರದ ಮೊದಲ ನೋಟ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಗೊಳ್ಳಲಿದೆ. ನಮ್ಮ ಪ್ರಕಾರ ಸಮಸ್ತ ಕನ್ನಡ ಸಿನಿರಸಿಕರ ಅಂತರಂಗವನ್ನು ಈ ಚಿತ್ರ ಪ್ರಶ್ನಿಸುವುದರ ಮೂಲಕ ಸಮ ಸಮಾಜವನ್ನು ನಿರ್ಮಿಸುವ ಕಡೆಗೆ ನಿಮ್ಮ ಯಶಸ್ಸು ಸಾಗಲಿ ಎಂದು ಆಶಿಸುತ್ತೇವೆ.
ಈಗಾಗಲೇ ಚಿತ್ರ ಎಲ್ಲ ಕಾರ್ಯಗಳು ಭರದಿಂದ ಸಾಗುತ್ತಿದ್ದು. ಸಿನಿಮಾಗೆ ಸಂಬಂದಿಸಿದ ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ ಮುಂದೆ ಇದೇ ರೀತಿ ಪ್ರಸ್ತುತ ಪಡಿಸಲಿದ್ದೇವೆ.
ಧನ್ಯವಾದಗಳು
Be the first to comment