ಇತ್ತೀಚೆನ ಅಂಶಗಳನ್ನು ಗಮನಿಸಿದಾಗ ಕನ್ನಡ ಚಿತ್ರಗಳು ಪ್ಯಾನ್ ಇಂಡಿಯಾ ಮಾದರಿಯಲ್ಲಿ ಸಿದ್ದಗೊಳ್ಳುತ್ತಿರುವುದು ಆರೋಗ್ಯಕರ ಬೆಳವಣಿಗೆ ಎನ್ನಬಹುದಾಗಿದೆ. ಆ ಸಾಲಿಗೆ ಕೊಂಡಿಯಾಗಿ ’ದಿ ಬರ್ತ್’ ಚಿತ್ರವೊಂದು ತಯಾರಾಗಿದೆ. 10000 ಬಿಸಿ ಅಂತ ಅಡಿಬಹರದಲ್ಲಿ ಹೇಳಿಕೊಂಡಿದೆ.
ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು, ಮಲೆಯಾಳಂ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಮೂಡಿ ಬಂದಿರುವುದು ವಿಶೇಷ. ವೃತ್ತಿಯಲ್ಲಿ ವೈದ್ಯರಾಗಿರುವ ಡಾ.ವಿಕ್ರಂ ಕತೆ,ಸಂಭಾಷಣೆ ಬರೆದು ನಿರ್ದೇಶನ ಮಾಡಿರುವುದು ಹೊಸ ಅನುಭವ. ಸೋದರನ ಸಿನಿಮಾಕ್ಕೆ ಪ್ರದೀಪ್ಜೈನ್ ನಿರ್ಮಾಣ ಮಾಡಿರುವುದು ಎರಡನೇ ಪ್ರಯತ್ನ. ಶ್ರೀ ವಿನಾಯಕ ಮಾರುತಿ ಕ್ರಿಯೇಶನ್ಸ್ ಮತ್ತು ಲಕ್ಷ್ಯ ಪ್ರೊಡಕ್ಷನ್ಸ್ ಮೂಲಕ ಚಿತ್ರವು ಸಿದ್ದಗೊಂಡಿದ್ದು, ಸೆನ್ಸಾರ್ ಅಂಗಳಕ್ಕೆ ಹೋಗಲು ತಯಾರಿ ನಡೆಸುತ್ತಿದೆ.
ಚಿತ್ರದ ಕುರಿತು ಹೇಳುವುದಾದರೆ, ಹತ್ತು ಸಾವಿರ ವರ್ಷಗಳ ಹಿಂದೆ ಮನುಷ್ಯ ಯಾವ ರೀತಿ ಜೀವನ ನಡೆಸುತ್ತಿದ್ದ. ವ್ಯಕ್ತಿ ವಿಕಸನದ ಚಿತ್ರಣವನ್ನು ಹೇಳಲಿದೆ. ಪೂರ್ವ ಇತಿಹಾಸ, ಸಾಹಸ ಹೊಂದಿರುವ ಅಪರಿಚಿತ ವ್ಯಕ್ತಿಯ ಪುರಾಣಕತೆ.
ಆತನ ಅನನ್ಯ ಪಯಣ, ಜೊತೆಗೆ ಅವನ ಬದುಕು ಮತ್ತು ಜೀವನದ ಶೋಧ ಹಾಗೂ ನಮ್ಮಗಳ ಹಣೆಬರಹ ಹೇಗೆ ಹೊಂದಿಕೊಳ್ಳುತ್ತದೆ ಎಂಬುದು ಒಂದು ಏಳಯ ಸಾರಾಂಶವಾಗಿದೆ. ಮೊದಲ ಹತ್ತು ನಿಮಿಷ ಪ್ರಸಕ್ತ ಕಾಲಘಟ್ಟದ ಮೂಲಕ ಪರಿಚಯಿಸಿ, ನಂತರ ಗತಕಾಲಕ್ಕೆ ಕರೆದುಕೊಂಡು ಹೋಗುತ್ತದೆ.
ಬದ್ರಿ ವರ್ಸಸ್ ಮಧುಮತಿ ಚಿತ್ರದಲ್ಲಿ ನಟಿಸಿದ್ದ ಪ್ರತಾಪ್ರಾಣ ನಾಯಕ. ಜೀವವನ್ನು ಪಣಕ್ಕೆ ಇಟ್ಟಂತೆ ಕಷ್ಟದ ಜಾಗಗಳಲ್ಲಿ ರಕ್ತ ಬರುವುದನ್ನು ಲೆಕ್ಕಿಸದೆ ಮಾತಿಲ್ಲದ ಅಸಂಸ್ಕ್ರತ ಮನುಷ್ಯನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಪತ್ನಿಯಾಗಿ ಅನುಷಾರಮೇಶ್ ಹಾಗೂ ನಾಲ್ಕು ವರ್ಷದ ಮಗು ಪಾತ್ರಗಳು ಕಡಿಮೆ ಅವಧಿಯಲ್ಲಿ ಕಾಣಿಸಿಕೊಳ್ಳುತದೆ.
ಸಂಗೀತ ಜ್ಯುಡಸ್ಯಾಂಡಿ, ಛಾಯಾಗ್ರಹಣ ಆನಂದಸುಂದರೇಶ, ಸಂಕಲನ ಮಹೇಶ್ತೋಗಟ, ಸಾಹಸ ರಮೇಶ್, ಸೌಂಡ್ ಡಿಸೈನ್ ರಾಷ್ಟ್ರ ಪ್ರಶಸ್ತಿ ವಿಜೇತ ಮಹಾವೀರ್ ಸಬಣ್ಣನವರ್ ಅವರದಾಗಿದೆ. ಆಗುಂಬೆ, ಸಕಲೇಶಪುರ, ಹೊನ್ನಾವರ, ಯಾಣ, ಅಂಡಮಾನ್ ಹಾಗೂ ಮೇಘಾಲಯದ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆದಿದೆ. ಪ್ರಚಾರದ ಮೊದಲ ಹಂತವಾಗಿ ಟೀಸರ್ನ್ನು ಮಾದ್ಯಮದವರಿಗೆ ತೋರಿಸಲಾಗಿ, ತಂಡವು ಮಾಹಿತಿಯನ್ನು ಹಂಚಿಕೊಂಡಿತು.
Be the first to comment