ಕೊರೋನಾದಿಂದ ಸತ್ತವರು ವೇಸ್ಟ್ ಬಾಡಿಗಳಾ!? ಕಿಚ್ಚನ ಹೆಸ್ರಲ್ಲಿ ಚಂದ ಎತ್ತಲಿರುವ ನಟ ಶಿವರಾಂ ಎಡವಿದ್ದೆಲ್ಲಿ?

ಕನ್ನಡ ಸಿನಿಮಾರಂಗದಲ್ಲಿ ನಟ ‘ಕಿಚ್ಚ’ ಸುದೀಪ್ ಸುದೀರ್ಘ 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಆ ಸಾಧನೆಯನ್ನು ಎನಕ್ಯಾಶ್ ಮಾಡಿಕೊಳ್ಳಲು ‘ಸಮರ್ಥನಂ ಅಂಗವಿಕಲರ ಸಂಸ್ಥೆ’ ಮುಂದಾಗಿದ್ದು ನಿಮಗೆ ಗೊತ್ತಿರುವ ಸಂಗತಿ. ಇದರ ಪೂರ್ವಭಾವಿಯಾಗಿ ‘ಸುದೀಪ್ 25’ ಕಾರ್ಯಕ್ರಮದ ಲೋಗೋ ಅನಾವರಣವನ್ನು ಇತ್ತೀಚಿಗೆ ಎಂ.ಜಿ. ರಸ್ತೆಯ ಖಾಸಗಿ ಹೊಟೇಲ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ಡಾ. ಜಿ.ಕೆ ಮಹಾಂತೇಶ್ ಮತ್ತು ಚಿತ್ರರಂಗದ ಹಲವು ಗಣ್ಯರ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಸಮರ್ಥನಂ ಅಂಗವಿಕಲ ಸಂಸ್ಥೆ ಆರಂಭದ ದಿನಗಳಿಂದಲೂ ಸಮರ್ಥನಂಗಾಗಿ ತಮ್ಮನ್ನು ತಾವು ಸಮರ್ಥವಾಗಿ ತೊಡಗಿಸಿಕೊಂಡಿರುವ, ಹಿರಿಯ ನಟ ಶಿವರಾಂ ಈ ವಿಶೇಷ ಕಾರ್ಯಕ್ರಮದ ಬಗ್ಗೆ.. ‘ಅಂಗವಿಕಲರ ಮತ್ತು ಅಂಧರ ಶ್ರೇಯೋಭಿವೃದ್ಧಿಗಾಗಿಯೇ ಸಮರ್ಥನಂ ಟ್ರಸ್ಟ್ ಶುರುವಾಗಿದೆ. ಸಾಕಷ್ಟು ನಿಧಿ ಸಂಗ್ರಹಣಾ ಕಾರ್ಯಕ್ರಮವನ್ನೂ ಹಮ್ಮಿಕೊಂಡಿದ್ದೇವೆ. ಎಸ್‌ಪಿಬಿ, ಯೇಸುದಾಸ್ ಸೇರಿ ಹಲವಾರು ಗಣ್ಯರು ಸಂಸ್ಥೆಗಾಗಿ ಸ್ಪಂದಿಸಿದ್ದಾರೆ. ಅದೇ ರೀತಿ ಈ ಸಲ ಸುದೀಪ್ ಅವರ 25 ವರ್ಷದ ಸಿನಿಯಾನವನ್ನೇ ಪ್ರಧಾನವಾಗಿಸಿ ಕಾರ್ಯಕ್ರಮ ಆಯೋಜಿಸಿದ್ದೇವೆ. ಸಂಗೀತ ಸೇರಿ ನೃತ್ಯ ರೂಪಕಗಳೂ ಈ ಸಲದ ಹೈಲೈಟ್. ವಿಜಯ್ ಪ್ರಕಾಶ್ ಸೇರಿ ಹಲವು ಗಾಯಕರು ತಮ್ಮ ಕಂಠಸಿರಿ ಮೂಲಕ ವೇದಿಕೆ ಮೇಲಿರಲಿದ್ದಾರೆ. ಮೂರು ಗಂಟೆ ಕಾರ್ಯಕ್ರಮ ನಡೆಯಲಿದೆ’ ಎಂದು ಕಾರ್ಯಕ್ರಮದ ರೂಪುರೇಶೆಯ ಬಗ್ಗೆ ಬಹಳ ಆಸ್ಥೆಯಿಂದ ಮಾತನಾಡಿದರು. ಆದರೆ ಅವರು ತಮ್ಮ ಮಾತನ್ನು ಇಷ್ಟಕ್ಕೇ ಸೀಮಿತವಾಗಿಸಿದರೆ ಚೆನ್ನಾಗಿತ್ತು. ಏಕೆಂದರೆ ನಂತರದಲ್ಲಿ ಹಳಿತಪ್ಪಿದ ಅವರು.. ‘ಕೊರೋನಾಕ್ಕೆ ಹೆದರಬೇಕಿಲ್ಲ.. ಅದು ಎಲ್ಲ ರೋಗಗಳಂತೆ ಸಾಮಾನ್ಯ ರೋಗವೆಂದೇ ಪರಿಗಣಿಸಬೇಕು.. ಒಂದರ್ಥದಲ್ಲಿ ಪ್ರಕೃತಿಯೇ ಈ ರೋಗದ ಮೂಲಕ ಜನಸಂಖ್ಯಾನಿಯಂತ್ರಣಕ್ಕೆ ಇಳಿದಂತಿದೆ. ಅದರಲ್ಲೂ ಭಾರತದಲ್ಲಿ ಈ ರೋಗದಿಂದಾಗಿ ಸಾಕಷ್ಟು ಜನ ಸಾವನ್ನಪ್ಪುತ್ತಿದ್ದಾರೆ.. ಈ ಸಾವಿನ ಬಗ್ಗೆ ಬೇಸರಿಸುವ ಅಗತ್ಯವಿಲ್ಲ. ಏಕೆಂದರೆ, ಜೊಳ್ಳು ಹೊರೊಟೋಗಿ.. ಗಟ್ಟಿ ಮಾತ್ರ ಉಳಿಯುತ್ತದೆ..’ ಎಂಬರ್ಥದಲ್ಲಿ ಪುಂಕಾನುಪುಂಕವಾಗಿ ಮಾತನಾಡಿದರು. ಆದರೆ, ಅವರಿಗೆ ಅವರಾಡಿದ ಮಾತಿನ ತಪ್ಪು ಕೊನೆಗೂ ಅರಿವಾಗಲೇ ಇಲ್ಲ. ಇವರ ಪ್ರಕಾರ ಕೊರೋನಾದಿಂದ ಸಾವನ್ನಪ್ಪಿದವರು ಜೊಳ್ಳುಗಳು ಅಂದರೆ.. ವೇಸ್ಟ್ ಬಾಡಿಗಳೇ…

ಕೊರೋನಾದಿಂದ ನಮ್ಮನ್ನಗಲಿದ ಗಾನಗಾರುಡಿಗ ಎಸ್.ಪಿ.ಬಿ ಅಂತಹ ಎಲ್ಲರೂ ವೇಸ್ಟ್ ಬಾಡಿಗಳೇ? ಇನ್ನು, ಜನರ ರಕ್ತಹೀರಿ ಐಶಾರಾಮಿಯಾಗಿ ಮೆರೆಯುತ್ತಿರುವ, ಕೊರೋನಾ ಬಾಧಿಸದ ರಾಜಕಾರಣಿಗಳು ಶಿವರಾಂ ಪ್ರಕಾರ ಗಟ್ಟಿಪಿಂಡಗಳೇ? ‘ಇದ್ದದ್ದನ್ನು ಇದ್ದ ಹಾಗೆ ಹೇಳುತ್ತೇನೆ.. ನಾನು ಪ್ರಾಮಾಣಿಕ.. ಸಮಾಜ ಸೇವಕ..’ ಎಂಬ ಗುಂಗಿನಲ್ಲಿ ಮಾತು ದಾರಿ ತಪ್ಪಬಾರದಲ್ಲವೇ? ಹಿರಿಯರೆ, ಬಿಸಿನಿಮಾಸ್ ಕಳಕಳಿ ಇಷ್ಟೇ ಮುಂದಿನಬಾರಿ ಮಾತಿಗಿಂತ ಮೊದಲು ಯೋಚಿಸಿ. ಏಕೆಂದರೆ.. ದೇಣಿಗೆ ಹೆಸ್ರಲ್ಲಿ, ಕಿಚ್ಚನ ನೇಮ್‌ಪ್ಲೇಟ್ ಇಟ್ಟುಕೊಂಡು ಕೋಟಿಗಟ್ಟಲೆ ಹಣ ಸಂಗ್ರಹಿಸುವ ಭರದಲ್ಲಿ .. ನಿಮ್ಮ ಅಸಂಬದ್ಧ ಮಾತುಗಳು ಸುದೀಪ್‌ಗೂ ಒಂದು ರೀತಿಯಲ್ಲಿ ಅವಮಾನವಲ್ಲವೇ? ಮುಂದಿನ ದಿನಗಳಲ್ಲಿ ಕೊರೋನಾದಿಂದ ಯಾರೇ ಸತ್ತರೂ ನಾವು ಅವರನ್ನು ಜೊಳ್ಳು.. ವೇಸ್ಟ್ ಬಾಡಿಗಳಾ ಅಂದುಕೊಳ್ಳಬೇಕೇ

Be the first to comment

Leave a Reply

Your email address will not be published. Required fields are marked *

Translate »
error: Content is protected !!