ಕಮರ್ಷಿಯಲ್ ಸಿನಿಮಾ ಬಗ್ಗೆ ಮಾತನಾಡಲು ಬಂದ ದಾಸ ದರ್ಶನ್ .. ರೈತರ ಬಗ್ಗೆ ಮಾತನಾಡಿದ್ದು ಏಕೆ? ವಿಭಿನ್ನವಾದ ಆಲೋಚನೆ ಡಿ ಬಾಸ್ ತಲೆಯಲ್ಲಿ ಹೇಗೆ ಬಂತು? ರೈತರಿಗೂ ಹಾಗು ಸಿನಿಮಾ ಗು ದಾಸ ಕನೆಕ್ಷನ್ ಕೊಟ್ಟಿದ್ದು ಹೇಗೆ ಅಂತ ಹೇಳ್ತಿವಿ ಈ ಸ್ಟೋರಿ ಓದಿ
ಅನೇಕ ಸಿನಿಮಾ ಕಲಾವಿದರು ರೈತ ಕುಟುಂಬ ಹಿನ್ನಲೆಯಿಂದ ಬಂದವರಾಗಿದ್ದಾರೆ. ಇನ್ನು ಕೆಲವರು ರೈತ ಕುಟುಂಬದಿಂದ ಬಂದಿಲ್ಲವಾದರೂ ರೈತರ ಬಗ್ಗೆ ಒಳ್ಳೆಯ ಅಭಿಪ್ರಾಯ ಹಾಗೂ ಅವರ ಹೋರಾಟಕ್ಕೆ ಬೆಂಬಲವಾಗಿ ನಿಲ್ಲುವ ಮನಸ್ಸು ಮಾಡುತ್ತಾರೆ.
ಅವರುಗಳಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಒಬ್ಬರು. ಸದಾ ರೈತರ ಬಗ್ಗೆ ಕಾಳಜಿ ಹೊಂದಿರುವ ಡಿ ಬಾಸ್ ಇತ್ತೀಚಿಗೆ ಕಾರ್ಯಕ್ರಮವೊಂದರಲ್ಲಿ ರೈತರ ಬಗ್ಗೆ ಮಾತನಾಡಿದ್ದಾರೆ. ಇಷ್ಟು ದಿನಗಳಲ್ಲಿ ಯಾರೋಬ್ಬರು ಯೋಚನೆ ಮಾಡದ ಹಾದಿಯಲ್ಲಿ ದಾಸ ಆಲೋಚನೆ ಮಾಡಿದ್ದಾರೆ.
ಒಂದು ಸಿನಿಮಾ ನಿರ್ಮಾಣ ಸಂಸ್ಥೆ ಆರಂಭ ಮಾಡುವಾಗ ಸಾಕಷ್ಟು ಕಷ್ಟಗಳಿರುತ್ತೆ. ಆದರೆ ನಿರ್ಮಾಣ ಸಂಸ್ಥೆಯಿಂದ ರೈತರಿಗೆ ಉಪಯೋಗ ಆಗುತ್ತೆ. ಸಿನಿಮಾ ಆರಂಭದಿಂದ ಹೊಲದಲ್ಲಿ ದುಡಿಯುವ ರೈತರಿಗೆ ಉಪಯೋಗ ಆಗುತ್ತೆ ಎನ್ನುವುದನ್ನು ದರ್ಶನ್ ತಿಳಿಸಿದ್ದಾರೆ.
ಸಿನಿಮಾ ನಿರ್ಮಾಣ ಸಂಸ್ಥೆ ಆರಂಭ ಮಾಡಿದ್ರೆ ಪ್ರತಿ ಸಿನಿಮಾ ಶೂಟಿಂಗ್ ನಲ್ಲಿ ನೂರಾರು ಜನ ಬೆಳಗ್ಗೆ, ಮಧ್ಯಾಹ್ನ ಮತ್ತು ಸಂಜೆ ಊಟ ಮಾಡುತ್ತಾರೆ. ಹೀಗಾಗಿ ರೈತರಿಗೂ ಪ್ರೋಡಕ್ಷನ್ ಕಂಪನಿಗೂ ಸಂಬಂಧ ಇದೆ. ಎನ್ನುವ ವಿಚಾರವನ್ನು ಜನರಿಗೆ ಮನವರಿಕೆ ಮಾಡಿದ್ದಾರೆ ದರ್ಶನ್.
ದರ್ಶನ್ ಯಾಕೆ ಈ ಮಾತನ್ನ ಹೇಳಿದ್ರು ಅನ್ನೋದಕ್ಕೆ ಉತ್ತರ . ಅನಿಶ್ ತೇಜೇಶ್ವರ್ ಅಭಿನಯದ ವಾಸು ನಾನ್ ಪಕ್ಕಾ ಕಮರ್ಷಿಯಲ್ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿ ಆಗಿ ಆಗಮಿಸಿದ್ದರು ದರ್ಶನ್ . ಇದು ಅನಿಶ್ ನಿರ್ಮಾಣ ಸಂಸ್ಥೆಯಲ್ಲಿ ಆರಂಭ ಆಗುತ್ತಿರುವ ಮೊದಲ ಚಿತ್ರವಾಗಿದೆ ಆದ್ದರಿಂದ ಡಿ ಬಾಸ್ ಈ ಮಾತನ್ನು ಅಭಿಮಾನಿಗಳ ಮುಂದೆ ಹೇಳಿದರು.
ದರ್ಶನ್ ಚಾಲೆಂಜಿಂಗ್ ಸ್ಟಾರ್ ಆಗಿ ಸಿನಿಮಾರಂಗದಲ್ಲಿ ಗುರುತಿಸಿಕೊಂಡಿದ್ದರೂ ಕೂಡ ಅವರೊಳಗೆ ಒಬ್ಬ ರೈತನಿದ್ದಾನೆ. ಅದಕ್ಕಾಗಿಯೇ ಫಾರ್ಮ್ ಹೌಸ್ ನಲ್ಲಿ ಸಾಕಷ್ಟು ಪ್ರಾಣಿಗಳ ಜೊತೆಗೆ ಸಾವಿರಾರು ಸಸಿಗಳನ್ನು ನೆಟ್ಟು ಬೆಳೆಸುತ್ತಿದ್ದಾರೆ.
Be the first to comment