೧೮ವರ್ಷಗಳ ನಂತ್ರ ಭರ್ಜರಿ ಎಂಟ್ರಿ! ತೇಜ್’ಸ್ಸಿನ ಸಿನಿಪಯಣದ ‘ರಿವೈಂಡ್’

ಕನ್ನಡ ಚಿತ್ರರಂಗದಲ್ಲಿ ಈಗ ಬಿಡುಗಡೆಗೆ ಸಾಲು ನಿಂತಿರುವ ಚಿತ್ರಗಳ ಪಟ್ಟಿ ದೊಡ್ಡದ್ದೇ ಇದೆ. ಆ ಸಾಲಿಗೆ ‘ರಿವೈಂಡ್’ ಸಿನಿಮಾವೂ ಸೇರಿದೆ. ಇದು ಬಹುತೇಕ ಹೊಸಬರ ಚಿತ್ರ. ಈ ಚಿತ್ರ ಕಥೆ ಬಗ್ಗೆ ಹೇಳೋದಾದರೆ, ಹೀರೋ ಇಲ್ಲಿ ಒಬ್ಬ ರಿಪೋರ್ಟರ್. ಒಂದಷ್ಟು ಸಮಸ್ಯೆಗಳು ಅವನಿಗೂ ಎದುರಾಗುತ್ತವೆ. ಅದರಿಂದ ಅವನ ಫ್ಯಾಮಿಲಿಯೂ ಸಿಲುಕುತ್ತದೆ. ನಂತರ ಹೇಗೆ ಅವನು ತನ್ನ ಫ್ಯಾಮಿಲಿಯನ್ನು ಕಷ್ಟಗಳಿಂದ ಪಾರು ಮಾಡ್ತಾನೆ ಅನ್ನೋದು ಕಥೆ. ಇದೊಂದು ಥ್ರಿಲ್ಲರ್ ಸಿನಿಮಾ. ಈ ಪ್ರಯತ್ನಕ್ಕೆ ಎಲ್ಲರ ಸಹಕಾರವಿತ್ತು ಚೆನ್ನಾಗಿತ್ತು ಎಂದು ನಟ ಧರ್ಮ ಹೇಳಿಕೊಂಡರು. ಇನ್ನು, ಚಿತ್ರದ ಹೀರೋ ತೇಜ್ ತಮ್ಮ ಸಿನಿಮಾ ಬಗ್ಗೆ ಹೇಳಿದ್ದು ಹೀಗೆ. ‘ಯಂಗ್ ಸ್ಟಾರ್ಸ್ ಸೇರಿ ಈ ಪ್ರಯತ್ನ ಮಾಡಿದ್ದೇವೆ, ಕನ್ನಡ, ತಮಿಳು ಭಾಷೆಗಳಲ್ಲಿಯೂ ಈ ಚಿತ್ರ ಬಿಡುಗಡೆಯಾಗಲಿದೆ ಎಂಬ ವಿವರ ಕೊಟ್ಟರು. ಅಂದಹಾಗೆ, ಈ ಚಿತ್ರಕ್ಕೆ ತೇಜ್ ಅವರದೇ ನಿರ್ದೇಶನವಿದೆ. ವಿನೋದ್ ನಿರ್ಮಾಪಕರು. ಸದ್ಯ ಟೀಸರ್ ಬಿಡುಗಡೆಯಾಗಿದ್ದು, ಏಪ್ರಿಲ್ 16 ರಂದು ರಿಲೀಸ್ ಆಗಲಿದೆ. ಚಿತ್ರದಲ್ಲಿ ಚಂದನ, ಹಿರಿಯ ನಟ ಸುಂದರ್ ರಾಜ್, ಸಂದೀಪ್ , ಮಲಾನಿ ಇತರರು ಇದ್ದಾರೆ.

ಇಂಟ್ರೆಸ್ಟಿಗ್ ವಿಷ್ಯ ಅಂದರೆ, ಈ ತೇಜ್ ಅವರ ಸಿನಿಮಾ ಪಯಣವನ್ನು ರಿವೈಂಡ್ ಮಾಡಿ ನೋಡಿದರೆ ಅಚ್ಚರಿಯಾಗುತ್ತದೆ. ಯಾಕೆಂದರೆ ಹದಿನೆಂಟು ವರ್ಷಗಳ ಹಿಂದೆಯೇ, ಅಂದರೆ 2003 ರಲ್ಲಿ ತೇಜ್ ಹಿರೋ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ರು. ಆ ಚಿತ್ರವೇ ‘ಮೀಸೆ ಚಿಗುರಿದಾಗ’.

‘ಬೆಸ್ಟ್ ಮೂವೀಸ್’ ಲಾಂಛನದಲ್ಲಿ ತಯಾರಾದ ಈ ಚಿತ್ರಕ್ಕೆ ದುರ್ಗಾ ಶೆಟ್ಟಿ ನಾಯಕಿ ಆಗಿದ್ದರು. ಕೆ. ಪ್ರವೀಣ್ ನಾಯಕ್ ಅವರು ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ದೇಶಿಸಿದ್ದ ‘ಮೀಸೆ ಚಿಗುರಿದಾಗ’ ಚಿತ್ರವನ್ನು ಕೆ. ರಾಜೇಂದ್ರ ಪ್ರಸಾದ್ ಮತ್ತು ಎಚ್. ನಾರಾಯಣಸ್ವಾಮಿ ನಿರ್ಮಿಸಿದ್ದರು. ಪ್ರಸಾದ್ ನೃತ್ಯ ಸಂಯೋಜನೆ, ಕೃಪಾಕರ್ ಸಂಗೀತ, ಏಳುಕೋಟೆ ಚಂದ್ರು ಅವರ ಛಾಯಾಗ್ರಹಣ, ಕೌರವ ವೆಂಕಟೇಶ ಅವರ ಸಾಹಸ, ದಿನೇಶ ಮಂಗಳೂರ್ ಅವರ ಕಲಾ ನಿರ್ದೇಶನವಿರುವ ಈ ಚಿತ್ರದಲ್ಲಿ ಅಶೋಕ್, ಸಾಧು ಕೋಕಿಲ, ಸಿಹಿಕಹಿ ಚಂದ್ರು, ಗಿರಿಜಾ ಲೋಕೇಶ, ಬೇಬಿ ಸುಶ್ಮಿತಾ, ಚಿತ್ರಾ ಶೆಣೈ ಮೊದಲಾದವರು ಚಿತ್ರದಲ್ಲಿ ಅಭಿನಯಿಸುವುದರ ಮೂಲಕ ಆ ಕಾಲಕ್ಕೆ ಸಾಕಷ್ಟು ಸೌಂಡ್ ಮಾಡಿತ್ತು. ಒಟ್ಟಿನಲ್ಲಿ ಮೀಸೆ ಚಿಗುರುವಾಗಲೇ ಹಿರೋ ಆಗಿದ್ದ ತೇಜ್ ಈಗ ‘ರಿವೈಂಡ್’ ಮೂಲಕ ಹೀರೋ ಕಮ್ ಡೈರೆಕ್ಟರ್ ಆಗಿ ತಮ್ಮ ಎರಡನೇ ಇನ್ನಿಂಗ್ಸ್ ಅನ್ನು ಆರಂಭಿಸಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!