‘ನಗಾರಿ”ಆ ಕರಾಳ ರಾತ್ರಿ’ ‘ತ್ರಯಂಬಕಂ’ನ ನಾಯಕಿ ಮತ್ತು ಬಿಗ್ ಬಾಸ್ ಚೆಲುವೆ ಮೂಗುತಿ ಸುಂದರಿ ಎಂದೇ ಹೆಸರಾಗಿರುವ ಅನುಪಮಾ ಗೌಡ ಅವರ ನೇರ ಸಂದರ್ಶನ :
ಸದ್ಯದ ನಿಮ್ಮ ಯೋಜನೆಗಳು ಏನು? ಯಾವ ಸಿನಿಮಾದಲ್ಲಿ ಅಭಿನಯಿಸುತ್ತಿದ್ದೀರಿ?
ನಾನು ಯಾವುದನ್ನು ಈವರೆಗೂ ಯೋಜನೆ ಮಾಡಿಕೊಂಡಿಲ್ಲ. ಅದು ಮಾಡಬೇಕು, ಇದು ಮಾಡಬೇಕು ಅಂತ ಏನೂ ಇಲ್ಲ. ಅವಕಾಶಗಳು ಬರುತ್ತಿರುವ ಅದರಲ್ಲೂ ಒಳ್ಳೆಯ ಪ್ರೊಜೆಕ್ಟ್ಗಳು ಒಪ್ಪಿಕೊಂಡು ಆ ದಿಕ್ಕಿನಲ್ಲಿ ಸಾಗುತ್ತಿದ್ದೇನೆ. ನಾನು ನಟಿಸಿರುವ ‘ಆ ಕರಾಳ ರಾತ್ರಿ’ ಚಿತ್ರ ಜುಲೈ 13 ರಂದು ಬಿಡುಗಡೆಯಾಗಿದೆ. ಇದರಲ್ಲಿ ಜೆ.ಕೆ, ರಂಗಾಯಣ ರಘು ಸರ್ ಜೊತೆ ನಟಿಸಿರುವುದು ಖುಷಿ ತಂದಿದೆ.
‘ಆ ಕರಾಳ ರಾತ್ರಿ’ ಚಿತ್ರ ಬಿಡುಗಡೆಯಾಗಿದೆ ಏನನಿಸುತ್ತಿದೆ?
ಈ ಚಿತ್ರಕ್ಕಿಂತ ಮೊದಲು ‘ನಗಾರಿ’ ಎಂಬ ಚಿತ್ರದಲ್ಲೂ ಅಭಿನಯಿಸಿದ್ದೇನೆ. ಅದಕ್ಕೆ ಈ ಮಟ್ಟದ ಪ್ರಚಾರ ಸಿಕ್ಕಿರಲಿಲ್ಲ. ನನಗೇ ಹೊಸ ಅನುಭವವಾಗಿರುವ ‘ಆ ಕರಾಳ ರಾತ್ರಿ’ ಈಗ ಬಿಡುಗಡೆಯಾಗಿದೆ ಖುಷಿ, ಭಯ, ಅಳು ಎಲ್ಲಾ ಒಟ್ಟೊಟ್ಟಿಗೆ ಆಗುತ್ತಿದೆ. ಒಂಥರಾ ಮಿಕ್ಸ್ ಫೀಲಿಂಗ್ ಇದೆ. ಇದೇ ಮೊದಲ ಸಿನಿಮಾ ಅನಿಸುತ್ತಿದೆ. ಎಲ್ಲಾ ಪತ್ರಿಕೆ ಹಾಗೂ ಪ್ರೇಕ್ಷಕರಿಂದ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ.
‘ಆ ಕರಾಳ ರಾತ್ರಿ’ ಚಿತ್ರದ ನಿಮ್ಮ ಪಾತ್ರದ ವಿಶೇಷತೆ ಏನು?
ಯಾವುದೇ ಒಂದು ಪಾತ್ರ ಅಂತ ಬಂದಾಗ ಆ ಪಾತ್ರಧಾರಿಯ ಕೆಲವು ಗುಣಗಳು ಮೊದಲ ದೃಶ್ಯದಲ್ಲೇ ಪ್ರೇಕ್ಷಕರಿಗೆ ಗೊತ್ತಾಗಿ ಬಿಡುತ್ತದೆ. ಆದರೆ ಈ ಚಿತ್ರದಲ್ಲಿನ ನನ್ನ ಪಾತ್ರ ಮಲ್ಲಿಕಾ ತುಂಬ ಭಿನ್ನ. ಅವಳ ವರ್ತನೆ, ಹೇಗೆ, ಯಾಕೆ ಎಂಬುದು ಯಾರಿಗೂ ಗೊತ್ತಾಗುವುದಿಲ್ಲ. 23 ವರ್ಷ ಆದರೂ ಮದುವೆ ಆಗಿರದ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ. ಒಂದೊಂದು ಸನ್ನಿವೇಶದಲ್ಲೂ ವಿವಿಧ ರೀತಿಯಲ್ಲಿ ಕಾಣಿಸಿಕೊಳ್ಳುತ್ತಾಳೆ. ಆ ಪಾತ್ರ ಹೀಗೆಯೇ ಎಂದು ಯಾರೂ ಜಡ್ಜ್ ಮಾಡಲು ಆಗುವುದಿಲ್ಲ. ಇದೊಂದು ಕಲಾತ್ಮಕ ಚಿತ್ರವೂ ಅಲ್ಲ, ಅತ್ತ ಕಮರ್ಷಿಯಲ್ ಕೂಡ ಅಲ್ಲದ ಬ್ರಿಡ್ಜ್ ಸಿನಿಮಾ ಎಂದು ಹೇಳಬಹುದು. ಇದೊಂದು ಡಿಫರೆಂಟ್ ಶೇಡ್ ಇರುವ, ನೆಗೆಟಿವ್ ಅಲ್ಲದ ಪಾಸಿಟಿವ್ ಕೂಡ ಅಲ್ಲದಂತಹ ಪಾತ್ರ.
ಬಿಗ್ ಬಾಸ್ ಆಯ್ತು, ಮತ್ತೆ ಕಿರುತೆರೆಯಲ್ಲಿ ಇದೀಗ ನಿರೂಪಕಿಯಾಗಿ ಹೊಸ ಜರ್ನಿ ಆರಂಭಿಸಿದ್ದೀರಿ ಏನನಿಸುತ್ತೆ?
ನಿರೂಪಕಿ ಆಗುವ ಬಗ್ಗೆ ನನಗೆ ಯಾವ ಯೋಜನೆ, ಯೋಚನೆ ಇರಲಿಲ್ಲ. ವರ್ಷದ ಮೊದಲೇ ನಿರೂಪಣೆ ಮಾಡುವಂತೆ ಆಹ್ವಾನವಿತ್ತು. ನನಗೆ ನಿರೂಪಣೆ ಅಂದರೆ ಕೊಂಚ ಭಯ. ನಿರೂಪಣೆ ನಟನೆಯಷ್ಟು ಸುಲಭವಲ್ಲ. ಸ್ಟೇಜ್ ಮೇಲೆ ಇರುವ ಅತಿಥಿಗಳು ಏನು ಹೇಳುತ್ತಿದ್ದಾರೆ, ಎಲ್ಲವನ್ನೂ ಗಮನಿಸಿ ಮಾತಾಡಬೇಕಾಗುತ್ತದೆ. ಹೀಗಾಗಿ ಮುಂದೂಡತ್ತಲೇ ಬಂದಿದ್ದೆ. ಹೀಗಿರುವಾಗ ‘ಕನ್ನಡದ ಕೋಗಿಲೆ’ ಕಾರ್ಯಕ್ರಮಕ್ಕೆ ಕರೆಸಿಕೊಂಡರು. ಮೊದಲೇ ತಾಲೀಮು ಮಾಡಿಸಿದರು. ಇದಕ್ಕೂ ಮುಂಚೆ ಸೀರಿಯಲ್ ಸಂತೆ ನಿರೂಪಣೆ ಮಾಡಿದ್ದೆ. ಅದು ಚೆನ್ನಾಗಿ ಮೂಡಿ ಬಂತು. ಈಗ ಮತ್ತೆ ಪ್ರಾಕ್ಟೀಸ್ ಮಾಡಿ ನಿರೂಪಕಿಯಾಗಿದ್ದೇನೆ.
ನಗಾರಿ ಹಾಗೂ ಆ ಕರಾಳ ರಾತ್ರಿ ಚಿತ್ರಗಳ ನಂತರ ಯಾವ ಸಿನಿಮಾ ಮಾಡ್ತಿದಿರಾ?
ನಿರ್ದೇಶಕ ದೇವಿ ಶ್ರೀ ಪ್ರಸಾದ್ ರವರ ‘ಬೆಂಕಿಯಲ್ಲಿ ಅರಳಿದ ಹೂವು’ ಇನ್ನೆರಡು ದಿನಗಳ ಶೂಟಿಂಗ್ ಬಾಕಿ ಇದೆ. ನನ್ನ ಜೊತೆ ನಟ-ನಿರ್ಮಾಪಕ ವಿಶು ಆಚಾರ್ ಅಭಿನಯಿಸಿದ್ದಾರೆ. ಇದು ಕೂಡ ಭಿನ್ನ ಚಿತ್ರ. ಎಂಟು ವರ್ಷ ಧಾರವಾಹಿಯಲ್ಲಿ ಸೀರೆ ಉಟ್ಟು ಸಾಕಾಗಿತ್ತು. ‘ಆ ಕರಾಳ ರಾತ್ರಿ’ ಹಾಗೂ ‘ಬೆಂಕಿಯಲ್ಲಿ ಅರಳಿದ ಹೂವು’ ಎರಡು ಚಿತ್ರಗಳಲ್ಲೂ ಗೃಹಿಣಿಯಾಗಿ, ಸೀರೆಯಲ್ಲೇ ಕಾಣಿಸಿಕೊಂಡಿದ್ದೇನೆ (ಹ ಹ ಹ ನಗು..). ಇವೆರಡು ತೆರೆಗೆ ಬಂದ ನಂತರ ನೋಡೋಣ, ಸದ್ಯ ನಿರೂಪಕಿಯಾಗಿ ಬ್ಯುಸಿ ಇದ್ದೇನೆ.
‘ಬೆಂಕಿಯಲ್ಲಿ ಅರಳಿದ ಹೂವು’ ಚಿತ್ರ ನಿಮ್ಮ ಪಾತ್ರದ ಬಗ್ಗೆ ಒಂಚೂರು ಮಾಹಿತಿ ನೀಡಿ…
ದೇವಿ ಶ್ರೀ ಪ್ರಸಾದ್ ನಿರ್ದೇಶನದ ಈ ಚಿತ್ರದಲ್ಲಿ ಗೃಹಿಣಿಯಾಗಿ ಕಾಣಿಸಿಕೊಂಡಿದ್ದೇನೆ. ಹಳೆಯ ‘ಬೆಂಕಿಯಲ್ಲಿ ಅರಳಿದ ಹೂವು’ ಚಿತ್ರದಲ್ಲಿ ಮೇರುನಟಿ ಸುಹಾಸಿನಿ ಅಭಿನಯಿಸಿದ್ದರು. ಎಲ್ಲರೂ ಹೇಳುವಂತೆ ಒಂದೊಳ್ಳೆಯ ಟೈಟಲ್ ನಮ್ಮ ಚಿತ್ರಕ್ಕೆ ಸಿಕ್ಕಿದೆ. ಆ ಸಿನಿಮಾ ಕಥೆ ಬೇರೆ ನಮ್ಮ ಚಿತ್ರದ ಕಥೆ ಬೇರೆ. ನನ್ನ ಪತಿಯ ಪಾತ್ರದಲ್ಲಿ ವಿಶು ಆಚಾರ್ ನಟಿಸಿದ್ದಾರೆ. ಸೆಟ್ ನಲ್ಲಿ ಎಲ್ಲರೂ ರೇಗಿಸಿಕೊಂಡು ಫನ್ ಮಾಡಿಕೊಂಡು ಶೂಟಿಂಗ್ ಮಾಡಿದ್ದೇ ಗೊತ್ತಾಗ್ಲಿಲ್ಲ. ಕಥೆಗೆ ತಕ್ಕಂತೆ ಒಬ್ಬ ಕಲಾವಿದೆಯಾಗಿ ಕಾಣಿಸಿಕೊಂಡಿದ್ದೇನೆ ಹೊರತು ಹೀರೋಯಿನ್ ಅಂತ ಅಲ್ಲ. ಇದೊಂದು ಮಹಿಳಾ ಪ್ರಧಾನ ಚಿತ್ರ. ಬಾಲಿವುಡ್ ಸಿನಿಮಾಗಳಲ್ಲಿ ಇರುವಂತೆ ಮಹಿಳಾ ಪ್ರಧಾನ ಚಿತ್ರಗಳಲ್ಲಿ ಕಥೆಯೇ ಹೀರೊ. ಹಾಗೆಯೇ, ಅದೇ ಟ್ರೆಂಡ್ ನಂತೆಯೇ ‘ಬೆಂಕಿಯಲ್ಲಿ ಅರಳಿದ ಹೂವು’ ಕೂಡ. ಜನ ಹೇಗೆ ತಗೋತಾರೆ ಅಂತ ನಾನು ಕಾತುರಳಾಗಿದ್ದೇನೆ. ನಿರ್ದೇಶಕ, ನಿರ್ಮಾಪಕ ಹಾಗೂ ಟೀಮ್ ಜೊತೆ ಒಳ್ಳೆಯ ಒಡನಾಟ ಸಿಕ್ಕಿತು. ಒಂದೊಳ್ಳೆಯ ಚಿತ್ರತಂಡದ ಕೆಲಸ ಮಾಡಿದ ಖುಷಿ ನನಗಿದೆ.
ಎಕ್ಸ್ಪೋಸ್ ಇರುವಂತಹ ಗ್ಲಾಮರಸ್ ಪಾತ್ರಕ್ಕೆ ಆಹ್ವಾನ ಬಂದರೆ ಒಪ್ಕೊಳ್ತಿರಾ?
ನನಗೆ ಹೀರೋಯಿನ್ ಆಗಿಯೇ ಕಾಣಿಸಿಕೊಳ್ಳಬೇಕು ಅಂತ ಆಸೆ ಏನಿಲ್ಲ. ಸಿನಿಮಾದಲ್ಲಿ ಹೈಲೈಟ್ ಇರುವ ಕ್ಯಾರೆಕ್ಟರ್, ಅದು ಒಂದು ಸೀನ್ ಇರಲಿ ಅದಕ್ಕೆ ಪ್ರಾಮುಖ್ಯತೆ ನೀಡುತ್ತೇನೆ. ಎಂಟು ವರ್ಷ ಸೀರೆ ಉಟ್ಟು, ಸೀರಿಯಲ್ ಮಾಡಿರೋದರಿಂದ ಗ್ಲಾಮರಸ್ ಅಗಿ ಕಾಣಿಸಿಕೊಳ್ಳುವ ಕಾನ್ಫಿಡೆನ್ಸ್ ನನ್ನಲ್ಲಿಲ್ಲ. ಎಕ್ಸ್ಪೋಸ್ ಪಾತ್ರಗಳಿಗೆ ನಾನಿರುವ ಬಾಡಿ ಟೈಪ್ ಹೊಂದಿಕೊಳ್ಳುತ್ತಾ? ಜನ ಸ್ವೀಕಾರ ಮಾಡ್ತಾರಾ ಎಂಬ ಡೌಟಿದೆ. ನಟನೆಗೆ ಪ್ರಾಮುಖ್ಯತೆ ಇರುವಂತಹ ಸ್ಕ್ರಿಪ್ಟ್ ಗಳನ್ನು ಎದುರು ನೋಡುತ್ತಿದ್ದೇನೆ.
ನನಗೆ ನಾನು ಕಂಡಂತೆ….
ನನಗೆ ತುಂಬಾ ನಾಜೂಕಾಗಿ ಇರಕ್ಕೆ ಬರಲ್ಲ. ನನಗೆ ಫಿಲ್ಟರ್ ಇಲ್ಲ, ನನಗಿಷ್ಟ ಬಂದ್ಹಾಗೆ ಇರ್ತೀನಿ, ಮಾಡ್ತೀನಿ. ತುಂಬಾ ಮಾತಾಡ್ತೀನಿ, ಈಗ ಸ್ವಲ್ಪ ಹುಷಾರಾಗಿದೀನಿ. ಸ್ವಲ್ಪ ಸುಳ್ಳು ಹೇಳ್ತೀನಿ, ತುಂಬಾನೇ ಮ್ಯೂಸಿಕ್ ಕೇಳ್ತೀನಿ. ನಾನೇ ಅಡುಗೆ ಮಾಡ್ತೀನಿ. ಒಬ್ಬಳೇ ಇರಕ್ಕೆ ಇಷ್ಟಪಡ್ತೀನಿ. ಮನೆ ಕೆಲಸ ನಾನೇ ಮಾಡ್ತೀನಿ. ನಟನೆ ಮಾಡುವ ನಟ ನಟಿಯರು ಇಷ್ಟ, ತುಂಬಾ ಸಿನಿಮಾ ನೋಡ್ತೀನಿ. ದಿನವೆಲ್ಲಾ ಜಿಮ್ಗೆ ಹೋಗ್ತೀನಿ, ತುಂಬಾ ಡಯಟ್ ಮಾಡ್ತೀನಿ, ನಾನ್ ವೆಜ್ ತುಂಬಾ ಅಂದ್ರೆ ಇಷ್ಟ, ಆದರೆ ರಾತ್ರಿ ಚೆನ್ನಾಗಿ ತಿನ್ತೀನಿ. ಹೆಚ್ಚಾಗಿ ಟಿವಿ ನೋಡಲ್ಲ.
ಮದುವೆ ವಿಷಯ ಎಲ್ಲಿಗೆ ಬಂತು?
ತುಂಬಾ ಫ್ರೆಂಡ್ಸ್ ಇರೋದರಿಂದ, ಬೇರೆಯವರ ಲೈಫ್ನಲ್ಲಿ ಇಂಟರ್ಫಿಯರ್ ಆಗೋಕೆ ಇಷ್ಟ ಇಲ್ಲ. ಎಲ್ಲಿಗೆ ಹೋಗಿದ್ದೆ, ಯಾರ ಜೊತೆ ಹೋಗಿದ್ದೆ, ಅಂತ ನಮ್ಮ ಅಪ್ಪ ಅಮ್ಮನೇ ಕೇಳಲ್ಲ. ಇನ್ನೂ ಇವೆಲ್ಲ ಕೇಳೋ ಬಾಯ್ ಫ್ರೆಂಡ್ ಅವಶ್ಯಕತೆ ಇಲ್ಲ. ಕೆರಿಯರ್ ಮೇಲೆ ಗಮನ ಕೊಟ್ಟಿರುವುದರಿಂದ ಐಯಾಮ್ ಹ್ಯಾಪಿಲಿ ಸಿಂಗಲ್, ಮದುವೆ ಯೋಚನೆ ಸದ್ಯಕ್ಕಿಲ್ಲ, ಈಗ ಸಂತೋಷವಾಗಿದ್ದೇನೆ…
ಕಿಚ್ಚ ಸುದೀಪ ಸಿಕ್ಕಾಪಟ್ಟೆ ಇಷ್ಟ ಎನ್ನುವ ಈ ಬಿಗ್ಬಾಸ್ ಚೆಲುವೆ ತಮ್ಮ ಅಭಿಮಾನಿಗಳಿಗೆ ಲವ್ ಯೂ ಹೇಳಲು ಮರೆಯಲಿಲ್ಲ. ‘ಆ ಕರಾಳ ರಾತ್ರಿ’ ಚಿತ್ರದ ಅಭಿನಯಕ್ಕೆ ಮೆಚ್ಚುಗೆ ಪಡೆದಿರುವ ಚಂದನವನದ ಮೂಗುತಿ ಸುಂದರಿ ಅನುಪಮಾ ಗೌಡ ರಿಗೆ ‘ಬೆಂಕಿಯಲ್ಲಿ ಅರಳಿದ ಹೂವು’ ಚಿತ್ರವೂ ಬಿಡುಗಡೆಯಾಗಿ ಒಳ್ಳೆಯ ಹೆಸರು ತರಲಿ, ಪ್ರಶಸ್ತಿ-ಸನ್ಮಾನಗಳು ಸಿಗುವಂತಾಗಲಿ, ತಮ್ಮ ಕಲಾಭಿಮಾನಿಗಳಿಗೆ ಮತ್ತಷ್ಟು ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಮನರಂಜಿಸಲಿ ಎಂಬ ಹಾರೈಕೆ.
Some genuinely interesting info, well written and generally user friendly.
Feel free to surf to my blog post … Cyalix Male Enhancement Pills
Pingback: Plumbing Giant Shelby NC
TI
GP
Pingback: 3cucumber