67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ, “ಪಿಂಗಾರ” ಅತ್ಯುತ್ತಮ ತುಳು ಚಿತ್ರ

2019 ನೇ ಸಾಲಿನ 67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದ್ದು , ಅತ್ಯುತ್ತಮ ತುಳು ಚಿತ್ರ “ಪಿಂಗಾರ” ಕ್ಕೆ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ನಿರ್ಮಾಪಕ ಅವಿನಾಶ್. ಯು. ಶೆಟ್ಟಿ ನಿರ್ಮಾಣದ ಈ ಚಿತ್ರವನ್ನು ಪ್ರೀತಂ ಶೆಟ್ಟಿ ನಿರ್ದೇಶನ ಮಾಡಿದ್ದು , ಪವನ್ ಕುಮಾರ್ ಛಾಯಾಗ್ರಹಣ ಮಾಡಿದ್ದಾರೆ. ಈ ಚಿತ್ರದ ಪಾತ್ರವರ್ಗದಲ್ಲಿ ನೀಮಾರೇ , ಶರಣ್ ಶೆಟ್ಟಿ, ಉಷಾ ಭಂಡಾರಿ, ಗುರು ಹೆಗ್ಡೆ, ಸಿಂಚನ, ಸುನಿಲ್, ಪ್ರಶಾಂತ್ ಹಾಗೂ ಮುಂತಾದವರ ತಾರಾಗಣವಿದೆ. ಈ ಚಿತ್ರವು ಅಪರೂಪ ಸಂಸ್ಕೃತಿಯ ಸುತ್ತ ಹೆಣೆಯಲ್ಪಟ್ಟ ಕತೆಯಾಗಿದೆ.

ಈಗಾಗಲೇ ದೊರೆತಿರುವ ಪ್ರಶಸ್ತಿಗಳು…
1. ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅತ್ಯುತ್ತಮ ಏಷ್ಯನ್ ಚಿತ್ರ , ಪ್ಯಾಕ್ ಪ್ರಶಸ್ತಿ.
2. ಚೆನ್ನೈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಇಂಡಿಯನ್ ಪನೋರಮಾ ಪ್ರಶಸ್ತಿ.
3. ಜಾರ್ಖಂಡ್ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅಧಿಕೃತವಾಗಿ ಸೇರ್ಪಡೆ.
4. ಲಿಫ್ಟ್ ಆ್ಯಪ್ ಚಲನಚಿತ್ರೋತ್ಸವದಲ್ಲಿ ಅಧಿಕೃತವಾಗಿ ಸೇರ್ಪಡೆ.

ಇಡೀ ತಂಡದ ಫಲವಾಗಿ 2019 ನೇ ಸಾಲಿನ ರಾಷ್ಟ್ರೀಯ ಪ್ರಶಸ್ತಿ ಪಡೆದಿರುವ ತುಳು ಚಿತ್ರ “ಪಿಂಗಾರ” ಚಿತ್ರತಂಡ ಸಂತೋಷದಲ್ಲಿ ಮುಳುಗಿದೆ. ಇನ್ನು ಮುಂದೆ ಇದೇ ರೀತಿ ಉತ್ತಮ ಸದಭಿರುಚಿಯ ಚಿತ್ರವನ್ನು ನೀಡಲು ಸನ್ನದ್ಧವಾಗಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!