ಪೇಸ್ ಅಂದರೆ ಪಿರಮಿಡ್ ಅಕಾಡೆಮಿ ಫಾರ್ ಕೆರಿಯರ್ ಎಕ್ಸಲೆನ್ಸ್ ಇದರ ಮೂರನೇಯ ಶಾಖೆ ಉದ್ಘಾಟನೆ ವಿಜಯನಗರದಲ್ಲಿ ನಡೆಯಿತು. ವಿದ್ಯಾರ್ಥಿಗಳಿಗೆ ಉದ್ಯೋಗ ಆಧಾರಿತ ಕೌಶಲ್ಯ ತರಬೇತಿಯನ್ನು ನೀಡುವ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪೇಸ್ ಸಂಸ್ಥೆ ಒಂದು. ಅಲ್ಲದೆ, ದೇಶಾದ್ಯಂತ ವಿದ್ಯಾರ್ಥಿಗಳು ಉತ್ತಮ ವೃತ್ತಿ ಜೀವನವನ್ನು ಸ್ಥಾಪಿಸಲು ಕಷ್ಟಪಟ್ಟು ಅಧ್ಯಯನ ಮಾಡುತ್ತಿದ್ದಾರೆ. ದೇಶದ ಪ್ರತಿಯೊಂದು ಉದ್ಯೋಗಕ್ಕೂ ಸ್ಪರ್ಧೆಯ ಪ್ರಮಾಣದೊಂದಿಗೆ , ಉದ್ಯೋಗ ಕಷ್ಟಕರವಾಗಿದೆ. ಅಂತಹ ಆಕಾಂಕ್ಷಿಗಳಿಗೆ ಉತ್ತಮ ಪ್ರಭಾವ ಬೀರಲು ಪೇಸ್ ಸಂಸ್ಥೆ ತಯಾರಾಗಿದೆ. ಪೇಸ್ ಸಂಸ್ಥೆಯ ವಿವಿಧ ಶಾಖೆಗಳು ಬಸವೇಶ್ವರನಗರ, ರಾಜಾಜಿನಗರ ಹಾಗೂ ವಿಜಯನಗರದಲ್ಲಿದೆ.
ಈ ಉಧ್ಘಾಟನೆ ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಯಾಗಿ ಆಗಮಿಸಿದ ಎ.ಎನ್ ನಟರಾಜ್ ಗೌಡ ಅವರು ಮಾತನಾಡಿ ಪ್ರಥಮ ಶಾಖೆ ಮಾಡಿದಾಗ ನಾನೇ ಉದ್ಘಾಟನೆ ಮಾಡಿದ್ದೆ ಈಗ ಇದು ಮೂರನೇ ಶಾಖೆನೂ ನಾನೇ ಮಾಡುತ್ತಿದ್ದೇನೆ ,ನನಗೆ ತುಂಬಾ ಖುಷಿ ಇದೆ. ಈ ಸಂಸ್ಥೇಯ ನಿರ್ದೇಶಕ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸುತ್ತೇನೆ ಅಂದರು. ಜೊತೆಗೆ ಸ್ಥಳೀಯ ಶಾಸಕರಾದ ಎಂ.ಕೃಷ್ಣಪ್ಪ , ನಟ ಪ್ರಥಮ್ , ನಿರ್ಮಾಪಕ ಸೆವೆನ್ ರಾಜ್ , ಮತ್ತು ಗುರುಪ್ರಸಾದ, ಮುಂತ್ತಾದ ಗಣ್ಯರು ಆಗಮಿಸಿ ಶುಭ ಕೋರಿದರು.ಇದಕ್ಕೆ ಸ್ಟಾರ್ ಕನ್ನಡ ತಂಡ ಕೂಡಾ ಸಾಥ್ ನೀಡಿತು.
ಪೇಸ್ ನ ನಿರ್ದೇಶಕ ಪ್ರಶಾಂತ ಬಿ.ಆರ್ ಮಾತನಾಡಿ ಪೇಸ್ ಸಂಸ್ಥೆಯು ಶ್ರೇಷ್ಟ ಗುಣ ಮಟ್ಟದ ಶಿಕ್ಷಣವನ್ನೂ ಅತ್ಯಂತ ಕಡಿಮೆ ವೆಚ್ಚದಲ್ಲಿ ಕೊಡುತ್ತಿದ್ದೇವೆ. ಜೊತೆಗೆ ಕಂಪ್ಯೂಟರ್ ಟೈಪಿಂಗ್, ಸ್ಪೋಕನ್ ಇಂಗ್ಲೀಷ್ ,ಅನಿಮೇಷನ್ ತರಬೇತಿ ಹಾಗೂ ಬಡವಿಧ್ಯಾರ್ಥಿಗಳಿಗೆ ಉಚಿತ ಕೋಚಿಂಗ್ ಇಲ್ಲಿ ಹೇಳಿಕೊಡಲಾಗುವದು.
ವೆಬ್ಸೈಟ್: www.mypacegroup.com
ಮೊಬೈಲ್: 9480128918
Be the first to comment