ಮೈಸೂರಿನ ಸಂದೇಶ್ ಹೋಟೆಲ್‍ನಲ್ಲಿ ‘ಐಔಗಿಇ ಬಾಬಾ’ ಚಿತ್ರದ ಮುಹೂರ್ತ ನೆರವೇರಿತು, ಆರಂಭದಲ್ಲಿ ಚಿತ್ರಕ್ಕೆ ಎಂ.ಎಲ್.ಎ. ನಾಗೇಂದ್ರ ರವರು ಕ್ಲಾಪ್ ತೋರಿದಾಗ ಸಿ.ಸಿ.ಬಿ. ಮಲ್ಲೇಶ್ ರವರು ಕ್ಯಾಮೆರಾ ಚಾಲನೆ ಮಾಡಿ ಚಿತ್ರೀಕರಣಕ್ಕೆ ಅನುವು ಮಾಡಿಕೊಟ್ಟರು. ಚಿತ್ರದ ನಿರ್ದೇಶಕ ಮಾತನಾಡುತ್ತಾ ತಮ್ಮ ಚಿತ್ರಕ್ಕೆ ಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ನಿರ್ದೇಶಕರಿಗೆ ಸಾಕಷ್ಟು ಅನುಭವವಿದು.
7 ವರ್ಷದಿಂದ ಅನುಭವವಿದೆ. ನಿರ್ಮಾಪಕರು ಮೂಲತ: ಆಂಧ್ರಪ್ರದೇಶವದವರಾಗಿದ್ದಾರೆ. ಅವರ ಹೆಸರು ಬಾಲಾಜಿ ಹಾಗೂ Alien Film House ಜೊತೆಗೂಡಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದ ನಿರ್ದೇಶಕರಾದ Alien ಚಂದ್ರು ರವರು ತಮ್ಮ ಸಿನಿಮಾದ ಮೂಲಕ ಯುವ ಜನತೆಯ ಪ್ರೇಮಕಥೆಯ ಮೇಲೆ ಹಾಸ್ಯ ಮಾಡಲು ಹೊರಟಿದ್ದಾರೆ. ಈ ಚಿತ್ರಕ್ಕೆ ವಿತರಕ ನವರತ್ನ ಪ್ರಸಾದ್‍ರವರು ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.
ಲವ್ ಮಾಕ್‍ಟೇಲ್ ಚಿತ್ರದ ಅಭಿಲಾಷ್ ರವರು ನಾಯಕ ನಟರಾಗಿ ಹೊರಬರುತ್ತಿದ್ದಾರೆ. ಮೈಸೂರಿನ ಮಾಡೆಲ್ ಮಹಿಮಾರವರು ಈ ಚಿತ್ರದ ನಾಯಕಿಯಾಗಿದ್ದಾರೆ. ಇದು ಅವರ ಮೊದಲನೆ ಚಿತ್ರ. ನಿರ್ದೇಶಕ, ನಿರ್ಮಾಪಕ ಹಾಗೂ ಹಾಸ್ಯ ನಟನಾಗಿ ತಮ್ಮದೇ ಆದ ಶೈಲಿಯಲ್ಲಿ ಹೆಸರು ಮಾಡಿದ ಓಂ ಪ್ರಕಾಶ್‍ರವರು ಈ ಚಿತ್ರದಲ್ಲಿ ಲವ್ ಬಾಬಾನಾಗಿ ಅವರದೇ ಆದ ಶೈಲಿಯಲ್ಲಿ ಮಿಂಚಲಿದ್ದಾರೆ.
ಈ ಚಿತ್ರದ ಚಿತ್ರೀಕರಣ ಮೈಸೂರು ಮಡಿಕೇರಿ, ಹೊನ್ನಾವರ, ಮಂುಗಳೂರಿನಲ್ಲಿ ನಡೆಯಲಿದೆ. ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸವನ್ನು cinematic flame studio ನಲ್ಲಿ ಮಾಡಲಿದ್ದು, ಚಿತ್ರವನ್ನು ಆಗಸ್ಟ್‍ನಲ್ಲಿ ಬಿಡುಗಡೆ ಮಾಡಲು ಬಿರುಸಾದ ಸಿದ್ಧತೆಯನ್ನು ನಡೆಸಲಾಗುತ್ತಿದೆ.
ಈ ಚಿತ್ರದಲ್ಲಿ ಅಭಿ, ಮಹಿಮಾ, ಓಂಪ್ರಕಾಶ್‍ರಾವ್, ಪ್ರದೀಪ್, ಸಂತೋಷ್, ರಘು, ಕೀರ್ತಿ, ಅನುಶ್ರೀ ರವರು ನಟನೆ ಮಡುತ್ತಿದ್ದಾರೆ, ನಿರ್ಮಾಣ – ಪ್ರಿಯ ಬಾಲಾಜಿ ಪ್ರೊಡಕ್ಷನ್ ಮತ್ತು Alien Film House ನಿರ್ದೇಶಕ – Alien ಚಂದ್ರು, ಛಾಯಾಗ್ರಹಣ – ಚೇತನ್ ಕವಿರಾಜ್, ಸಾಹಸ – ಕೌರವ ವೆಂಕಟೇಶ್, ನೃತ್ಯ, – ವರ್ಮ.
Be the first to comment