ಐದು ಭಾಷೆಗಳಲ್ಲಿ ಪಾರಿವಾಳ ಸಾಂಗ್, ಚಿನ್ನಿಪ್ರಕಾಶ್ ಬಿಡುಗಡೆ

ಇತ್ತೀಚಿನ ದಿನಗಳಲ್ಲಿ ಸಿನಿಮಾರಂಗಕ್ಕೆ ಬರುವವರಿಗೆ ಆಲ್ಬಂ, ಷರ‍್ಟ್ ಫಿಲಂ ಮೇಕಿಂಗ್ ಒಂದು ಪ್ಲಾಟ್ಫಾರಂ ಆಗುತ್ತಿದೆ. ಇದರಲ್ಲಿ ತಮ್ಮ ಪ್ರತಿಭಾವಂತಿಕೆ ತೋರಿಸಿದರೆ ಅಂಥವರಿಗೆ ಮುಂದೆ ಸಿನಿಮಾ ರಂಗದಲ್ಲಿ ಖಂಡಿತ ಅವಕಾಶ ಸಿಗುತ್ತದೆ ಎನ್ನುವ ನಂಬಿಕೆಯಿದೆ. ಇತ್ತೀಚೆಗಷ್ಟೇ ಪಬ್ಲಿಕ್ ಟಾಯ್ಲೆಟ್ ಎನ್ನುವ ಕಿರುಚಿತ್ರ ನರ‍್ಮಿಸಿದ ಭಾನವಿ ಕ್ಯಾಪ್ಚರ್ ಸಂಸ್ಥೆ ಇದೀಗ ಪಾರಿವಾಳ ಎಂಬ ಆಲ್ಬಂ ವೀಡಿಯೋ ಸಾಂಗ್ ಮಾಡಿದೆ. ಚಿನ್ನಿಪ್ರಕಾಶ್ ಅವರ ಶಿಶ್ಯ, ಮೂಲತ: ನೃತ್ಯ ಸಂಯೋಜಕರಾದ ರಾಂಕಿರಣ್ ಈ ಹಾಡಿನಲ್ಲಿ ಅಭಿನಯಿಸುವುದರ ಜೊತೆಗೆ ತಾವೇ ಕೊರಿಯೋಗ್ರಾಫ್ ಕೂಡ ಮಾಡಿದ್ದಾರೆ. ವಿಶೇಷವಾಗಿ ಈ ಹಾಡನ್ನು ಸಿಂಗಲ್ ಟೇಕ್ ನಲ್ಲಿ ಕ್ಯಾಮೆರಾಮನ್ ಅಭಿಷೇಕ್ ಜಿ.ಕಾಸರಗೋಡು ಸೆರೆಹಿಡಿದಿದ್ದು, ಅಗಸ್ತ್ಯ ಸಂತೋಷ್ ಇದರ ಸಾಹಿತ್ಯ ರಚಿಸಿ ರಾಗಸಂಯೋಜನೆ ಮಾಡಿದ್ದಾರೆ.

ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ಸೇರಿದಂತೆ ೫ ಭಾಷೆಗಳಲ್ಲಿ ಈ ಪಾರಿವಾಳದ ಹಾಡು ಬಿಡುಗಡೆಯಾಗಲಿದ್ದು, ಸದ್ಯ ಕನ್ನಡ ಸಾಂಗ್ ಮಾತ್ರ ಹೊರಬಂದಿದೆ. ಮುಂದಿನ ದಿನಗಳಲ್ಲಿ ಪ್ರತಿವಾರ ಒಂದೊಂದು ಭಾಷೆಯ ಹಾಡನ್ನು ರಿಲೀಸ್ ಮಾಡುವ ಯೋಜನೆಯನ್ನು ಈ ತಂಡ ಹಮ್ಮಿಕೊಂಡಿದೆ. ಇನ್ನು ಎಲ್ಲಾ ಛಾಷೆಯಲ್ಲೂ ಗಾಯಕ ಶಶಾಂಕ್ ಶೇಷಗಿರಿ ಅವರೇ ಹಾಡಿದ್ದಾರೆ. ನಾಯಕ ರಾಮ್ ಕಿರಣ ಹಾಗೂ ನಾಯಕಿ ತೇಜಸ್ವಿನಿ ರ‍ಶ್ಮಿ ಅವರ ಅಭಿನಯವಿರುವ ಭಾನವಿ ಕ್ಯಾಪ್ ಚರ್ ನರ‍್ ಮಣ ಹಾಡಿದ ಈ ಹಾಡಿನ ಸಾಹಿತ್ಯದಲ್ಲಿ ಭಗ್ನಪ್ರೇಮಿಯೊಬ್ಬನ ಮನದ ವಿರಹವೇದನೆಯನ್ನು ಹೇಳಲು ಟ್ರೈ ಮಾಡಲಾಗಿದೆ.

ಅರುಣ್ ಬಸವರಾಜ್ ಜೊತೆಗೆ ರೋಹಿತ್ ಕರ್ಯಕಾರಿ ನಿರ್ಮಾಪಕರಾಗಿ ಕೈಜೋಡಿಸಿದ್ದಾರೆ.ಹಿರಿಯ ನೃತ್ಯ ನಿರ್ದೇಶಕ ಚಿನ್ನಿಪ್ರಕಾಶ್ ಅವರು ಈ ವೀಡಿಯೋ ಆಲ್ಬಂ ಹಾಡನ್ನು ರೇಣುಕಾಂಬ ಥಿಯೇಟರಿನಲ್ಲಿ ಬಿಡುಗಡೆ ಮಾಡಿ ಶಿಶ್ಯನಿಗೆ ಶುಭ ಹಾರೈಸಿದರು.

ಗಾಯಕ ವಿನು ಮನಸು ಮಾತನಾಡುತ್ತ ನನಗೆ ಈ ಹಾಡು ಸಿಕ್ಕಿದ್ದು, ಗೆಳೆಯ ವಿನು ಮನಸು ಅವರಿಂದ. ಮೊದಲು ಕನ್ನಡದಲ್ಲಿ ಹಾಡಿದೆ, ನಂತರ ಐದೂ ಭಾಷೆಗಳಲ್ಲಿ ಹಾಡಬೇಕೆಂದರು, ಮಲಯಾಳಂನಲ್ಲಿ ಹಾಡೋದು ಸ್ವಲ್ಪ ಕಷ್ಟವಾಯಿತು. ಈ ಹಾಡಿಗೆ ಮೇನ್ ಹೀರೋ ಎಂದರೆ ಅಭಿಷೇಕ್, ಸ್ವಲ್ಪವೂ ಗ್ಯಾಪ್ ಕೊಡದೆ ಹಾಡನ್ನು ಅವರು ಸೆರೆಹಿಡಿಯಬೇಕಿತ್ತು ಎಂದು ಹೇಳಿದರು. ನಂತರ ರಾಮ್ ಕಿರಣ್ ಮಾತನಾಡಿ ನಾವೆಲ್ಲ ಸೇರಿ ಏನಾದರೂ ಡಿಫರೆಂಟಾಗಿ ಟ್ರೈಮಾಡಬೇಕು ಎಂದು ಹೊರಟಾಗ ಈ ಕಾನ್ಸೆಪ್ಟ್ ಹೊಳೆಯಿತು, ಆಗಲೇ 6 ಚಿತ್ರಗಳಿಗೆ ಕ್ಯಾಮೆರಾ ಹಾಡಿದ್ದ ಅಭಿಷೇಕ್, ವಿಭಿನ್ನ ಪ್ರಯತ್ನವಾಗಿ ಒನ್ ಟೇಕ್ ನಲ್ಲಿ ಈ ಸಾಂಗನ್ನು ಸೆರೆಹಿಡಿದಿದ್ದಾರೆ. ಮೋಹನ್ ಬಿ.ಕೆರೆ ಸ್ಟುಡಿಯೋದಲ್ಲಿ ಒಂದೇ ರಾತ್ರಿ ಈ ಹಾಡನ್ನು ಚಿತ್ರೀಕರಿಸಿದ್ದೇವೆ ಎಂದು ಹೇಳಿಕೊಂಡರು.

ಕೊನೆಯಲ್ಲಿ ಮಾತನಾಡಿದ ಚಿನ್ನಿಪ್ರಕಾಶ್, ಯುವರತ್ನ ಸಾಂಗ್ ಮಾಡುವಾಗ ಕಿರಣ್ ಈ ಹಾಡನ್ನು ಕೇಳಿಸಿದ, ಸಖತ್ತಾಗಿತ್ತು, ನಾನೇ ಕೊರಿಯೋಗ್ರಾಫ್ ಮಾಡಬೇಕು ಅನ್ನಿಸುವಷ್ಟು ಆರ‍್ಷಕವಾಗಿತ್ತು, ನಾನಾಗಿದ್ರೆ ಈ ಹಾಡನ್ನು ೪-೫ ದಿನ ಮಾಡ್ತಿದ್ದೆ, ಆದರೆ ಈತನ ಆಲೋಚನೆ ಕಂಡು ಆಚರ್ಯ ವಾಯಿತು, ಅಲ್ಲಿ ನಾನೀ ಇದ್ರೂ ಇಷ್ಟು ಚೆನ್ನಾಗಿ ಮಾಡಲು ಆಗ್ತಿರಲಿಲ್ಲ,ನಾನೆಲ್ಲೇ ಹೋದರೂ ರಾಮ್ ಕಿರಣ ನನ್ನ ಶಿಶ್ಯ ಅಂತ ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ, ಈ ಹಾಡು ಮಿಲಿಯನ್ಗಟ್ಟಲೆ ವೀಕ್ಷಣೆಯಾಗಿ ಯಶಸ್ಸು ಗಳಿಸಲಿ ಎಂದು ಹಾರೈಸಿದರು.

Be the first to comment

Leave a Reply

Your email address will not be published. Required fields are marked *

Translate »
error: Content is protected !!