ಬೆಂಗಳೂರು :ನಗರದ ಖಾಸಗಿ ಕಾಲೇಜಿನಲ್ಲಿ ಮಹಾಮಾರಿಯ ಒತ್ತಡದಲ್ಲೂ ಸಾಕಷ್ಟು ಸುರಕ್ಷತಾ ಕ್ರಮಗಳೊಂದಿಗೆ ಐ ಡ್ರೀಮ್ ಎಂ.ಬಿ.ಎ. ಅಕಾಡೆಮಿ ವತಿಯಿಂದ ಯೋಜನಾ ನರ್ವಹಣಾ ಪ್ರಶಸ್ತಿ ಪ್ರದಾನ ಸಮಾರಂಭ ಅದ್ಧೂರಿಯಾಗಿ ನಡೆಯಿತು.
ಈ ಕರ್ಯಕ್ರಮದ ಮುಖ್ಯ ಅತಿಥಿಗಳಾಗಿ ಡಾ.ಪಿ ಶ್ರೀನಿವಾಸ ರಾವ್ , ಡಾ.ಎಸ್ ಎಸ್ ಚಂದ್ರಶೇಖರ್ , ಡಾ. ಪದ್ಮಾಕ್ಷಿ ಲೊಕೇಶ್ , ಹಾಗು ಕೆ.ಎಂ ನಾಗೇಂದ್ರ ಉಪಸ್ಥಿತರಿದ್ದರು.
ಈ ಕರ್ಯಕ್ರಮಕ್ಕೆ ಮುಖ್ಯಸ್ಥರಾಗಿ ಎನ್ .ಇ. ಎಫ್, ವಾಷಿಂಗ್ ಟನ್ ಡಿಸಿಯ ಸಂಸ್ಥಾಪಕರಾದ ಡಾ.ಅಪ್ಪು ಕುಟ್ಟಾನ್ ಹಾಗು ದಿ ಸ್ಟೇಟ್ ಯೂನಿವರ್ಸಿಟಿಯ ನಿರ್ದೇಶಕರಾದ ಆಂಥೋನಿ ಬೆಟ್ರೋಸ್ ಆನ್ ಲೈನ್ ಮುಖಾಂತರ ಮಾಹಿತಿ ಹಂಚಿ ಮ್ಯಾನೇಜ್ ಮೆಂಟ್ ವಿಧ್ಯಾರ್ಥಿಗಳಿಗೆ ಅಭಿನಂದಿಸಿದರು. ಹಾಗೂ ಗೋಲ್ಡ್ ಮೆಡಲಿಸ್ಟ್ ವಿದ್ಯಾರ್ಥಿ ಶ್ರೇಯಾ ಯಾದವ್ ಅವರು 3.99ಸಿಜಿಪಿಎ ಜೊತೆಗೆ ಅಪ್ಪುಜೀ ಮೆಡಲಿಯನ್ ಆಫ್ ಮೆರಿಟ್ ಪಡೆದಕ್ಕಾಗಿ ತುಂಬು ಹೃದಯದಿಂದ ಶ್ಲಾಘಿಸಿದರು. ಅವರಿಗೆ ಎನ್ .ಇ. ಎಫ್,ವತಿಯಿಂದ 90% ವಿಧ್ಯರ್ಥಿ ವೇತನ ಕೂಡ ನೀಡಲಾಗಿತ್ತು.
ಈ ಸಮಾರಂಭದ ಪ್ರೋಗ್ರಾಮ್ ನಿರ್ದೇಶಕರಾಗಿ ಐ ಡ್ರೀಮ್ ಎಂ.ಬಿ.ಎ. ಅಕಾಡೆಮಿಯ ಎಸ್ ರಾವ್ ಮತ್ತು ಐ ಡ್ರೀಮ್ ಎಂ.ಬಿ.ಎ. ಅಕಾಡೆಮಿಯ ಸಂಸ್ಥಾಪಕರಾದ ಗರಿಮಾ ಬನ್ಸಾಲ್ ರವರ ನೇತೃತ್ವದಲ್ಲಿ ನಡೆಯಿತು.
Be the first to comment