ಬೆಂಗಳೂರು :ನಗರದ ಖಾಸಗಿ ಹೋಟೆಲೊಂದರಲ್ಲಿ ಮಹಾಮಾರಿಯ ಒತ್ತಡದಲ್ಲೂ ಸಾಕಷ್ಟು ಸುರಕ್ಷತಾ ಕ್ರಮಗಳೊಂದಿಗೆ ಜಿನ್ಸಿ ಸತೀಶ್ ರವರ ನೇತೃತ್ವದಲ್ಲಿ ಫ್ಯಾಷನ್ ಫ್ಲೇಮ್ಸ್ ವತಿಯಿಂದ ಬೆಂಗಳೂರು ಫ್ಯಾಷನ್ ಸಾಗ ಅದ್ಧೂರಿಯಾಗಿ ನಡೆಯಿತು. 7ಜನ ವಿಶೇಷ ಡಿಸೈನರ್ ಸಂಗ್ರಹದೊಂದಿಗೆ ,ನಮ್ಮ ಗ್ರ್ಯಾಂಡ್ ಫಿನಾಲೆ ಡಿಸೈನರ್ ಜೀನ್ ಡಿಸೈನ್ಸ್ ಜೊತೆಗೆ 34 ಮಹಿಳಾ ರೂಪದರ್ಶಿಗಳು ಮತ್ತು 8 ಪುರುಷ ರೂಪದರ್ಶಿಗಳು ಭಾಗವಹಿಸಿ ವೇಷಭೂಷಣಗಳನ್ನು ಪ್ರದರ್ಶಿಸಿದವು. ಮಾಡೆಲ್ ಪ್ರಿಯಾಂಕ ಸುದರ್ಶನ್ ಈ ಕಾರ್ಯಕ್ರಮದ ರಾಯಭಾರಿಯಾಗಿದ್ದರು. ನಟಿ ಅನು ಪೂವಮ್ಮ, ಪಲ್ಲವಿ ಗೌಡ, ಮೇಘಾಶೆಟ್ಟಿ, ಅನನ್ಯ ಭಟ್,ಪ್ರಿಯಾ ಕುಮಾರ್ ಮುಂತಾದ 8 ಸೆಲೆಬ್ರಿಟಿ ಶೋ ಸ್ಟಾಪರ್‌ಗಳು ಈ ಕಾರ್ಯಕ್ರಮದ ಪ್ರಮುಖರಾಗಿದ್ದರು.
ಇರ್ಫಾನ್ ಬ್ರಾಡ್ವೇಜ್ 360 ಅವರು ನೃತ್ಯ ಸಂಯೋಜಿಸಿದ್ದರು. ಎಚ್‌ವಿ ಫೋಟೋಗ್ರಫಿ ಮತ್ತು ವೀಡಿಯೋಗ್ರಫಿ ತಂಡವು ಅಧಿಕೃತ ಪಾಲುದಾರರಾಗಿದ್ದರು. ಮೇಕ್ ಓವರ್ನಲ್ಲಿ 5 ಮೇಕಪ್ ತಂಡಗಳು ಭಾಗಿಯಾಗಿದ್ದವು. ಲಾ ಫೆಮಿ, ಎಲಿಸಿಯನ್ ಎಸೆನ್ಷಿಯಲ್ಸ್, ಮಿಸ್ಟಿಕ್ ಗ್ರೀನ್, ಲಿಕಿತ್ ಆರ್ಗನಿಕ್, ಪ್ರಾಚೀನ ವಿಧಾನ್, ಸ್ನ್ಯಾಕ್-ಒ-ಅಹೋಲಿಕ್, ಶೋಭಾ ಫುಡ್ಸ್, ಚೊಕೊಡೈಂಟಿ, ಆಲಾ ಮೋಡ್, ಪ್ರೈಮ್ ಟೈಮ್, ಮನೀಷಾ ಘೋರ್ಪಾಡೆ ಈ ಕಾರ್ಯಕ್ರಮಕ್ಕೆ ಉಡುಗೊರೆ ಪ್ರಾಯೋಜಕರಾಗಿದ್ದರು. ಸ್ಟಾರ್ ಕನ್ನಡ ತಂಡ ಕೂಡ ಸಾಥ್ ನೀಡಿತ್ತು.
Be the first to comment