ಶೂಟಿಂಗ್ ವೇಳೆಯಲ್ಲಿ ಪೆಟ್ರೋಲ್ ಬಾಂಬ್ ಸ್ಪೋಟ : ರಿಷಬ್ ಶೆಟ್ಟಿ ಬೆನ್ನು, ತಲೆಗೆ ಬೆಂಕಿ

ನಟ ರಿಷಬ್​ ಶೆಟ್ಟಿ ನಟನೆಯ ‘ಹೀರೋ’ ಸಿನಿಮಾದ ಚಿತ್ರೀಕರಣದಲ್ಲಿ ಬೆಂಕಿ ಅವಘಡ ಸಂಭವಿಸಿತ್ತು. ಪೆಟ್ರೋಲ್ ಬಾಂಬ್ ಸಿಡಿಸೋ ವೇಳೆ ನಟ ರಿಷಬ್​ ಶೆಟ್ಟಿಗೆ ಬೆಂಕಿ ಹತ್ತಿಕೊಂಡಿತ್ತು. ಹೌದು.. 2020ರ ಜುಲೈ ತಿಂಗಳ ಕೊನೆಯಲ್ಲಿ ಚಿಕ್ಕಮಗಳೂರಿನ ಎಸ್ಟೇಟ್​ವೊಂದರಲ್ಲಿ ‘ಹೀರೋ’ ಸಿನಿಮಾದ ಶೂಟಿಂಗ್​ ನಡೆಯುತ್ತಿದ್ದ ವೇಳೆ ಈ ಅವಘಡ ನಡೆದಿತ್ತು. ಈ ಬಗ್ಗೆ ಇದೀಗ ಬೆಳಕಿಗೆ ಬಂದಿದ್ದು, ಪ್ರೊಮೋಷನ್ಸ್​​ ವೇಳೆ ಈ ವಿಡಿಯೋ ಕೂಡ ವೈರಲ್​ ಆಗಿದೆ. ಇನ್ನು, ಈ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಆಗಿಲ್ಲ ಅಂತಾರೆ ರಿಷಬ್​.

ರಿಷಬ್​ ಶೆಟ್ಟಿ ಕೂದಲು ಹಾಗೂ ಬೆನ್ನಿಗೆ ಬೆಂಕಿ ಹತ್ತಿಕೊಂಡಿರೋದು ವಿಡಿಯೋದಲ್ಲಿ ಗೋಚರವಾಗ್ತಿದೆ. ಆದರೆ ರಿಷಬ್​ಗೆ ಯಾವುದೇ ಥರದ ಗಾಯಗಳೂ ಆಗಿಲ್ಲ ಅಂತ ನಟ ರಿಷಬ್​ ಶೆಟ್ಟಿ ಇಂದು ನ್ಯೂಸ್​ ಫಸ್ಟ್​​ ಜೊತೆ ಮಾತನಾಡುತ್ತಾ ತಿಳಿಸಿದ್ದಾರೆ. ಅಂದ್ಹಾಗೇ ಈ ಘಟನೆಯ ಚಿತ್ರಣವನ್ನ ‘ಹೀರೋ’ ಸಿನಿಮಾದ ಟ್ರೈಲರ್​ನಲ್ಲಿ ಉಳಿಸಿಕೊಳ್ಳಲಾಗಿದೆ. ಇದೇ ಮಾರ್ಚ್​ 5ರಂದು ಭರತ್​ ರಾಜ್​ ನಿರ್ದೇಶನದ ‘ಹೀರೋ’ ಸಿನಿಮಾ ರಿಲೀಸ್​ ಆಗಲಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!