ಚಂದನವನ ಕ್ರಿಟಿಕ್ಸ್ ಅಕಾಡೆಮಿ ಪ್ರಶಸ್ತಿ ಪ್ರಧಾನ ಸಮಾರಂಭ

ಧನಂಜಯ ಅತ್ಯುತ್ತಮ ನಟ, ಖುಷಿ ಅತ್ಯುತ್ತಮ ನಟಿ

ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್ಸ್ 2021 ನಲ್ಲಿ ನಟ ಧನಂಜಯ, ಪಾಪ್ಕಾರ್ನ್ ಮಂಕಿ ಟೈಗರ್ ಚಿತ್ರಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ. ದಿಯಾ ಚಿತ್ರದಲ್ಲಿನ ನಟನೆಗಾಗಿ ಖುಷಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ. ದಿಯಾ ಸಿನೆಮಾ 2020 ಸಾಲಿನ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದರೆ, ನಿರ್ದೇಶಕ ಮಾಂಸೋರೆ ಆಕ್ಟ್ 1978 ಚಿತ್ರಕ್ಕೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದಿದ್ದಾರೆ.

2020 ರಲ್ಲಿ ತೆರೆಕಂಡ ಕನ್ನಡ ಸಿನೆಮಾಗಳಲ್ಲಿ ಅತ್ಯುತ್ತಮವಾದವನ್ನು ಸಿನೆಮಾ ಪತ್ರಕರ್ತರು 21 ವಿಭಾಗಗಳಲ್ಲಿ ಆಯ್ಕೆ ಮಾಡಿದ್ದರು. ಇದು 2021 ವರ್ಷದ ಮೊದಲ ಸಿನೆಮಾ ಪ್ರಶಸ್ತಿ ಸಮಾರಂಭ. ಕಳೆದ ಸಲ ಚಾಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಪ್ರಶಸ್ತಿ ಆ ವರ್ಷದ ಏಕೈಕ ಸಿನೆಮಾ ಪ್ರಶಸ್ತಿಯಾಗಿತ್ತು.

ವಶೇಷವಾಗಿ ಸಿಂಬಾ ಎಂಬ ನಾಯಿಗೆ ಈ ಸಲ ವಿಶೇಷ ಅತ್ಯುತ್ತಮ ನಟ ಮನುಷ್ಯೆತರ ಪ್ರಶಸ್ತಿ ಕೊಡಲಾಗಿದೆ. ಬಾನುವಾರ ಸಂಜೆ ಪ್ರಶಸ್ತಿ ಸಮಾರಂಭ ನಡೆಯಿತು. ದಿಯಾ ಸಿನೆಮಾಗೆ ಒಟ್ಟು ಐದು ಪ್ರಶಸ್ತಿ, ಪಾಪ್ಕಾರ್ನ್ ಮಂಕಿ ಟೈಗರ್ ಚಿತ್ರಕ್ಕೆ ನಾಲ್ಕು, ಹಾಗೂ ಜೆಂಟಲೆಮನ್ ಚಿತ್ರಕ್ಕೆ ಮೂರು ಪ್ರಶಸ್ತಿ ದೊರೆತಿದೆ. ಇನ್ನುಳಿದಂತೆ ಪ್ರಶಸ್ತಿ ಪಡೆದವರ ಪಟ್ಟಿ ಇಂತಿದೆ:

1. ಅತ್ಯುತ್ತಮ ಫಿಲ್ಮ್: ದಿಯಾ
2. ಅತ್ಯುತ್ತಮ ನಿರ್ದೇಶಕ : ಮಾಂಸೋರೆ for ಆಕ್ಟ್ 1978
3. ಅತ್ಯುತ್ತಮ ನಟ: ಧನಂಜಯ್ for ಪಾಪ್ ಕಾರ್ನ ಮಂಕಿ ಟೈಗರ್
4. ಅತ್ಯುತ್ತಮ ನಟಿ: ಖುಷಿ for ದಿಯಾ
5. ಅತ್ಯುತ್ತಮ ಪೋಷಕ ನಟ: ಅಚ್ಯುತ್ ಕುಮಾರ್ for ಮಾಯಾ ಬಜಾರ್ 2016
6. ಅತ್ಯುತ್ತಮ ಪೋಷಕ ನಟಿ: ತಾರಾ ಅನುರಾಧಾ for ಶಿವಾರ್ಜುನ್
7. ಅತ್ಯುತ್ತಮ ಚಿತ್ರಕಥೆ: ಅಭಿಜಿತ್ Y.R ಮತ್ತು ಆಕಾಶ್ ಶ್ರೀವತ್ಸ್ for ಶಿವಾಜಿ ಸುರತ್ಕಲ್
7. ಅತ್ಯುತ್ತಮ ಬಾಲನಟಿ/ನಟಿ: ಆರಾಧ್ಯ ಎನ್. ಚಂದ್ರ for ಜಂಟಲ್ ಮನ್
9. ಅತ್ಯುತ್ತಮ ಸಂಗೀತ ನಿರ್ದೇಶಕ: ರಘು ದೀಕ್ಷಿತ್ for ಲವ್ ಮಾಕ್ಟೈಲ್
10. ಅತ್ಯುತ್ತಮ ಹಿನ್ನೆಲೆ ಸಂಗೀತ: ಅಜನೀಶ್ ಲೋಕನಾಥ್ for ದಿಯಾ
11. ಅತ್ಯುತ್ತಮ ಗೀತ ರಚನೆ: ನಾಗಾರ್ಜುನ ಶರ್ಮ ಮತ್ತು ಕಿನ್ನಿಲ್ ರಾಜ್ for ಜಂಟಲ್ ಮನ್ – ಮರಳಿ ಮನಸಾಗಿದೆ
12. ಅತ್ಯುತ್ತಮ ಗಾಯಕ: ಸಂಚಿತ್ ಹೆಗ್ಡೆ for “ಜಂಟಲ್ ಮನ್”.. ಮರಳಿ ಮನಸಾಗಿದೆ
13. ಅತ್ಯುತ್ತಮ ಗಾಯಕಿ: ಚಿನ್ಮಯಿ ಶ್ರೀಪಾದ for “ದಿಯಾ” ಸೋಲ್ ಆಫ್ ದಿಯಾ
14. ಅತ್ಯುತ್ತಮ ಛಾಯಾಗ್ರಹಣ: ಶೇಖರ್ ಎಸ್‍ for ಪಾಪ್ ಕಾರ್ನ ಮಂಕಿ ಟೈಗರ್
15. ಅತ್ಯುತ್ತಮ ಸಂಭಾಷಣೆ: ಅಶೋಕ್ ಕೆ.ಎಸ್ for ದಿಯಾ
16. ಅತ್ಯುತ್ತಮ ಸಂಕಲನ: ದೀಪು ಎಸ್ ಕುಮಾರ್ for ಪಾಪ್ ಕಾರ್ನ ಮಂಕಿ ಟೈಗರ್
17. ಅತ್ಯುತ್ತಮ ನೃತ್ಯ ಸಂಯೋಜನೆ: ಎ.ಹರ್ಷ for “ಮಾಯಾ ಬಜಾರ್”.. ಲೋಕ ಮಾಯಾ ಬಜಾರ
18. ಅತ್ಯುತ್ತಮ ಸಾಹಸ: ಜಾಲಿ ಬಾಸ್ಟಿನ್ for ಪಾಪ್ ಕಾರ್ನ ಮಂಕಿ ಟೈಗರ್
19. ಅತ್ಯುತ್ತಮ ಕಲಾ ನಿರ್ದೇಶನ: ಗುಣ for ಬಿಚ್ಚುಗತ್ತಿ
20. ಅತ್ಯುತ್ತಮ ವಿಎಫ್ ಎಕ್ಸ್: ಕಾಣದಂತೆ ಮಾಯವಾದನು
21. ಅತ್ಯುತ್ತಮ ನಟ (Non-human): ಸಿಂಬಾ for ನಾನು ಮತ್ತು ಗುಂಡ

Be the first to comment

Leave a Reply

Your email address will not be published. Required fields are marked *

Translate »
error: Content is protected !!