ಮಾರ್ಚ್ 05ಕ್ಕೆ ರಿಷಬ್ ಶೆಟ್ಟಿ ಅಬಿನಯದ “ಹೀರೋ”ತೆರೆಗೆ

ತಮ್ಮ ಟೈಟಲ್ ಮೂಲಕವೇ ಬಹಳಷ್ಟು ನಿರೀಕ್ಷೆಯನ್ನ ಹುಟ್ಟು ಹಾಕಿರುವ ಚಿತ್ರ ಹೀರೋ. ಈ ಸಿನಿಮಾ ಮಾರ್ಚ್ 5 ಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ರಿಷಬ್ ಶೆಟ್ಟಿ ನಾಯಕರಾಗಿ ಅಭಿನಯಿಸುವುದರ ಜೊತೆಗೆ ನಿರ್ಮಾಣವನ್ನ ಮಾಡಿದ್ದಾರೆ. ಗಾನವಿ ಲಕ್ಷ್ಮಣ್ , ಪ್ರಮೋದ್ ಶೆಟ್ಟಿ , ಮoಜುನಾಥ್ ಗೌಡ ಹಾಗೂ ಮುಂತಾದವರು ನಟಿಸಿದ್ದಾರೆ.

ಭರತ್ ರಾಜ್ ನಿರ್ದೇಶನದ ಈ ಚಿತ್ರದ ರಿಲೀಸ್ ದಿನಾಂಕದ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಬಾರಿ ಸದ್ದು ಮಾಡುತ್ತಿದೆ. ಲಾಕ್ ಡೌನ್ ಸಮಯದಲ್ಲಿ ತಮ್ಮ ಸ್ನೇಹಿತರ ಸಹಕಾರದೊಂದಿಗೆ ರಿಷಬ್ ನಿರ್ಮಿಸಿದ ಸಿನಿಮಾವಿದು. ಈ ಸಿನಿಮಾದ ಟ್ರೈಲರ್ ಈಗಾಗಲೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇನ್ನು ತೆರೆಯ ಮೇಲೆ ಹೀರೋ ಖದರ್ ನೋಡಬೇಕಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!