ಸಂಪತ್ ಮೈತ್ರಿಯಾ, ಶ್ವೇತಾ ಶ್ರೀನಿವಾಸ್, ಮಹಂತೇಶ್ ಹಿರೇಮಠ್, ಕಾರ್ತಿ ಸೌದರಂ, ನಾಗರಾಜ್ ಮಂಡ್ಯ, ಶ್ರೀಕಾಂಂತ್ ಜಿ.ಕಷ್ಯಪ್ ಮುಂತಾದವರ ಅಭಿನಯದಲ್ಲಿ ಮೂಡಿಬಂದಿರುವ ಪಬ್ಲಿಕ್ ಟಾಯ್ಲೆಟ್ ಎನ್ನುವ ಈ ಕಿರು ಚಿತ್ರದ ಪ್ರಥಮ ಪ್ರದರ್ಶನ ಹಾಗೂ ಪತ್ರಿಕಾಗೋಷ್ಟಿ ಇತ್ತೀಚೆಗೆ ಎಸ್‍ಆರ್‍ವಿ ಥಿಯೇಟರಿನಲ್ಲಿ ನಡೆಯಿತು.
ನಾಗೇಶ್ ಹೆಬ್ಬೂರ್ ಅವರ ಕಥೆ, ಚಿತ್ರಕಥೆ, ಹಾಗೂ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ ಒಂದು ಹೆಣ್ಣಿನ ಅಸಾಯಕತೆಯನ್ನು ಪುರುಷ ಸಮಾಜ ಹೇಗೆ ದುರ್ಬಳಕೆ ಮಾಡಿಕೊಳ್ಳುತ್ತದೆ ಎಂಬುದನ್ನು ಮನಮುಟ್ಟುವ ಕಥೆಯ ನಿದರ್ಶನದೊಂದಿಗೆ ಹೇಳುವ ಪ್ರಯತ್ನ ಮಾಡಲಾಗಿದೆ.
ಟೀಮ್ ವೇಣುಗೋಪಾಲ್ ಹಾಗೂ ಟೀಮ್ ಜಾನವಿ ಕ್ಯಾಪ್ಚರ್ ಇದರ ನಿರ್ಮಾಣ ಮಾಡಿದ್ದು, ಅಭಿಷೇಕ್ ಜಿ.ಕಾಸರಗೋಡು ಅವರ ಕ್ಯಾಮೆರಾವರ್ಕ್ ಹಾಗೂ ಹರ್ಷ ವರ್ಧನರಾಜ್ ಅವರ ಸಂಗೀತ ನಿರ್ದೇಶನವಿದೆ.
ಈ ಕಿರುಚಿತ್ರವನ್ನು ವೀಕ್ಷಿಸಿದ ಸೈಬರ್ ಕ್ರೈಂ ಇನ್ಸ್‍ಪೆಕ್ಟರ್ ರೇಣುಕಾ ಜಯರಾಂ, ಸಂಭಾಷಣೆಗಾರ ಮಾಸ್ತಿ, ಮಜಾಟಾಕೀಸ್‍ನ ಶರಣಯ್ಯ, ಕನ್ನಡಪರ ಹೋರಾಟಗಾರ ರೂಪೇಶ್ ಜಿ.ರಾಜಣ್ಣ, ನಟ ಸೂರಜ್ ಚಿತ್ರದ ಕುರಿತಂತೆ ತಮ್ಮಭಿಪ್ರಾಯ ಹಂಚಿಕೊಂಡಿದ್ದಾರೆ.
ಮೊದಲಿಗೆ ಮಾತನಾಡಿದ ಶರಣಯ್ಯ ಇತ್ತೀಚೆಗೆ ಫೇಸ್‍ಬುಕ್, ಇನ್‍ಸ್ಟಾಗ್ರಾಮ್ ಬಂದು ದುರ್ಬಳಕೆಗೆ ಕಾರಣವಾಗಿದೆ. ಯಾವುದೋ ವಿಡಿಯೋ ಮಾಡಿ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕುವುದು ಬೆಳೆದು ಬಂದಿದೆ. ಬಡತನದಲ್ಲಿ ಬೇಯುವ ಅಸಾಯಕ ಹೆಣ್ಣು ಮಕ್ಕಳ ವೀಡಿಯೋ ಮಾಡಿ ಹಾಕುವುದು ದೊಡ್ಡ ಅಪರಾಧ.
ಸಮಾಜಕ್ಕೆ ಒಳ್ಳೇ ಸಂದೇಶವನ್ನು ಈ ಚಿತ್ರ ಕೊಡುತ್ತದೆ ಇನ್ನೊಬ್ಬರ ಬದುಕನ್ನು ಹಾಳುಮಾಡುವ ಹಕ್ಕು ಯಾರಿಗೂ ಇರುವುದಿಲ್ಲ ಎಂದು ಹೇಳಿದರು. ನಂರೆ ರೇಣುಕಾ ಜಯರಾಂ ಮಾತನಾಡಿ ಇದೊಂದು ಸಣ್ಣ ತುಣುಕಷ್ಟೇ. ಈಗ ಎಲ್ಲರ ಕೈಲೂ ಸ್ಮಾರ್ಟ್ ಫೋನ್ ಇದೆ.
ಈಗ 95ರಷ್ಟು ಸೈಬರ್ ಅಪರಾಧಗಳೇ ನಡೆಯುತ್ತಿವೆ ಎಂದು ಹೇಳಿದರು. ಡೈಲಾಗ್ ರೈಟರ್ ಮಾಸ್ತಿ ಮಾತನಾಡುತ್ತ ಇದು ಮನುಷ್ಯತ್ವದ ಜಾನರ್ ಸಿನಿಮಾ. ರಸ್ತೆಯಲ್ಲಿ ಅಪಘಾತ ನಡೆದಾಗ ಮನುಷ್ಯತ್ವ ಮರೆತು ಹೋಗಿರುತ್ತದೆ, ಬರೀ ಕ್ಯಾಮೆರಾ ಓಪನ್ ಆಗಿರುತ್ತದೆ ಎಂದು ಹೇಳಿದರು. ನಿರ್ದೇಶಕ ನಾಗೇಶ್ ಏನಾದರೂ ಹೊಸದನ್ನು ಹೇಳಬೇಕು ಅಂದುಕೊಂಡಾಗ ಸಿಕ್ಕಿದ್ದು ಈ ಕಥೆ.
ನಾನೇ ಆವೀಡಿಯೋ ಮಾಡಿದ್ದರೆ ಏನು ಮಾಡುತ್ತಿದ್ದೆ ಎಂದು ಕಲ್ಪಿಸಿಕೊಂಡು ಈ ಸ್ಕ್ರಿಪ್ಟ್ ಬರೆಯುತ್ತಾ ಹೋದೆ. ರಘು ನಿಡವಳ್ಳಿ ಅದ್ಭುತವಾಗಿ ಡೈಲಾಗ ಬರೆದಿದ್ದಾರೆ. ಕಿರುಚಿತ್ರವಾದರೂ ಕ್ವಾಲಿಟಿಯಲ್ಲಿ ಎಲ್ಲೂ ಕಾಂಪ್ರಮೈಸ್ ಆಗಿಲ್ಲ. ಎಲ್ಲ ರಂಗಭೂಮಿ ಕಲಾವಿದರನ್ನೇ ಬಳಸಿಕೊಂಡು ಈ ಚಿತ್ರ ಮಾಡಿದ್ದೇನೆ ಎಂದು ಹೇಳಿದರು.
ನಿರ್ಮಾಪಕಿ ಸುಚಿತ್ರಾ ಮಾತನಾಡಿ ಗಂಡಸರು ಒಂದು ಅಸಹಾಯಕ ಹೆಣ್ಣನ್ನು ಯಾವರೀತಿ ನೋಡುತ್ತಾರೆ ಎಂದು ಚಿತ್ರದ ಮೂಲಕ ಹೇಳಿದ್ದೇವೆ ಎಂದರು. ಪಬ್ಲಿಕ್ ಟಾಯ್ಲೆಟ್ ಕಿರುಚಿತ್ರವು ಜಾನವಿ ಕ್ಯಾಪ್ಚರ್ ಚಾನೆಲ್ ಮೂಲಕ ಯೂಟ್ಯೂಬ್‍ನಲ್ಲಿ ಬಿಡುಗಡೆಯಾಗಿದೆ.
Be the first to comment