ಈ ವಾರ ಬಿಡುಗಡೆ ಚಿತ್ರ ‘ರಾ’

ಪತ್ರಕರ್ತ ರಾಜೇಶ್ ಗೌಡ ಇದೇ ಮೊದಲಬಾರಿಗೆ ನಿರ್ದೇಶನ ಮಾಡಿರುವ ವಿಭಿನ್ನ ಶೈಲಿಯ ಕ್ರೈಮ್ ಥ್ರಿಲ್ಲರ್ ಚಿತ್ರ ‌ರಾ ಈ ವಾರ ರಾಜ್ಯಾದ್ಯಂತ ಬಿಡುಗಡೆ ಯಾಗಲಿದೆ. ತನ್ನ ಸ್ನೇಹಿತರ ಸಹಕಾರ ದೊಂದಿಗೆ ತಾನೇ ಚಿತ್ರಕ್ಕೆ ಬಂಡವಾಳವನ್ನು ಸಹ ಹಾಕಿರುವ ರಾಜೇಶ್ ಗೌಡ ಈ ಚಿತ್ರದ ಮೂಲಕ ಒಂದಷ್ಟು ಹೊಸ ವಿಚಾರಗಳನ್ನು ಹೇಳಹೊರಟಿದ್ದಾರೆ.

ಕ್ರೈಮ್ ಲವ್ ಸ್ಟೋರಿ ಜೊತೆಗೆ ಜರ್ನಿಯಲ್ಲಿ ನಡೆವ ಕಥೆ ಇದಾಗಿದೆ. ಆರಂಭದಲ್ಲಿ ಚಿತ್ರದ ನಾಯಕನ ಹೆಸರನ್ನು ಗೌಪ್ಯವಾಗಿಟ್ಟು ಕುತೂಹಲ ಮೂಡಿಸಿದ್ದ ನಿರ್ದೇಶಕರು ಈಗ ಆ ಹೆಸರನ್ನು ಬಹಿರಂಗಪಡಿಸಿದ್ದಾರೆ. ಅದು ಬೇರಾರೂ ಅಲ್ಲ, ರಾಜೇಶ್ ಗೌಡ ಅವರೇ ಚಿತ್ರದ ನಾಯಕನೂ ಆಗಿದ್ದಾರೆ.

ಸನಾ ನಾಯಕ್ ಚಿತ್ರ ದ ನಾಯಕಿಯಾಗಿದ್ದು, ಸುಜಿತ್ ನಾಯಕ್ ಪ್ರಮುಖ ಪಾತ್ರದಲ್ಲಿ ನಟಿಸುವುದರೊಂದಿಗೆ ಸಂಕಲನಕಾರನಾಗೂ ಕೆಲಸ ಮಾಡಿದ್ದಾರೆ. ಜೇಮ್ಸ್ ಆರ್ಕಿಟೆಕ್ಟ್ ಅವರ ಸಂಗೀತ, ಕುಮಾರ್ ಅವರ ಛಾಯಾ ಗ್ರಹಣ, ತ್ರಿಭುವನ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!