ಫೆ.19ಕ್ಕೆ “ಪೊಗರು”ರಾಜ್ಯಾದ್ಯಂತ ಬಿಡುಗಡೆ

KVN ಪ್ರೊಡಕ್ಷನ್ಸ್ ಮೂಲಕ “ಪೊಗರು” ಚಿತ್ರ ಯಾಗಿ ತೆರೆ ಮೇಲೆ ಅಬ್ಬರಿಸಲಿದೆ. ಈಗಾಗಲೇ ಹಾಡುಗಳು ಹಾಗೂ ಟ್ರೇಲರ್ ಭರ್ಜರಿ ರೆಸ್ಪಾನ್ಸ್ ಪಡೆದಿದ್ದು , ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತನ್ನ ಮೊದಲ ಚಿತ್ರದಿಂದ ಇಲ್ಲಿವರೆಗೂ ಬಹಳಷ್ಟು ಸದ್ದನ್ನು ಮಾಡುತ್ತಾ ಯಶಸ್ವಿ ನಾಯಕ ಎಂದು ಗುರುತಿಸಿಕೊಂಡಿರುವ ನಟ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಈಗ “ಪೊಗರು” ಮೂಲಕ ಮತ್ತೆ ಭರ್ಜರಿಯಾಗಿ ಸದ್ದು ಮಾಡಲಿದ್ದಾರೆ.

ಈ ಚಿತ್ರವನ್ನು ನಂದ ಕಿಶೋರ್ ನಿರ್ದೇಶನ ಮಾಡಿದ್ದು , ಬಿ.ಕೆ. ಗಂಗಾಧರ್ ಭರ್ಜರಿಯಾಗಿ ನಿರ್ಮಾಣ ಮಾಡಿದ್ದಾರೆ. ಎಲ್ಲೆಡೆ ಖರಾಬು ಹಾಡು ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿ 200 ಮಿಲಿಯನ್‌ಗೂ ಅಧಿಕ ವೀವ್ಸ್ ಪಡೆದಿದೆ. ಕನ್ನಡ ಚಿತ್ರದ ಹಾಡೊಂದಕ್ಕೆ ಯೂಟ್ಯೂಬ್‌ನಲ್ಲಿ ಸಿಕ್ಕ ಬಹುದೊಡ್ಡ ಹಿಟ್ ಎನ್ನಬಹುದು.

ಧ್ರುವ ಸರ್ಜಾ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದು , ರಶ್ಮಿಕಾ ಮಂದಣ್ಣ ನಾಯಕಿಯಾಗಿ ಮಿಂಚಲಿದ್ದಾರೆ. ಇನ್ನು ಉಳಿದಂತೆ ಮಯೂರಿ, ರವಿಶಂಕರ್, ಚಿಕ್ಕಣ್ಣ, ಕುರಿ ಪ್ರತಾಪ್‌ ಹಾಗೂ ಮುಂತಾದವರು ಅಭಿನಯಿಸಿದ್ದಾರೆ. ಚಂದನ್ ಶೆಟ್ಟಿ ಸಂಗೀತ ನೀಡಿರುವ ಹಾಡುಗಳು ಬಹಳಷ್ಟು ನಿರೀಕ್ಷೆಯನ್ನ ಮೂಡಿಸಿದೆ.

ಒಟ್ಟಾರೆ ಲಾಕ್​ಡೌನ್​ ಮುಗಿದು 100% ಚಿತ್ರಮಂದಿರಕ್ಕೆ ಪ್ರೇಕ್ಷಕರು ಬರಲು ಅನುಮತಿ ದೊರಕಿದ್ದು , ಧ್ರುವ ಸರ್ಜಾ ಅಭಿಮಾನಿಗಳ ಖುಷಿ ಇಮ್ಮಡಿಗೊಂಡಿದೆ. ಸದ್ಯ “ಪೊಗರು” ಚಿತ್ರ ಹೆಚ್ಚು ಚಿತ್ರಮಂದಿರಗಳಲ್ಲಿ ಅದ್ಧೂರಿ ಪ್ರಚಾರದ ಮೂಲಕ ಅಬ್ಬರಿಸಲು ಸಿದ್ಧವಾಗಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!