ಪ್ರಸಕ್ತ ಯುವಜನಾಂಗಕ್ಕೆ ಅಂತಲೇ ಸಿದ್ದಪಡಿಸಿರುವ ಹೊಸಬರ ’ಎಂಬಿಎ’ ಚಿತ್ರದ ಕತೆಯು ಕಾಲೇಜಿನಲ್ಲಿ ನಡೆಯುವ ಸೆಸ್ಪನ್ಸ್, ಥ್ರಿಲ್ಲರ್, ಮರ್ಡರ್ ಮಿಸ್ಟರಿ ಮತ್ತು ಭಾವನೆಗಳನ್ನು ಹೊಂದಿದೆ. ಖ್ಯಾತ ಸಂಭಾಷಣೆಗಾರ ಮಳವಳ್ಳಿ ಸಾಯಿಕೃಷ್ಣ ಎರಡು ವಿನೂತನ ಟ್ರೈಲರ್ಗಳನ್ನು ಅನಾವರಣಗೊಳಿಸಿ ತಂಡಕ್ಕೆ ಶುಭ ಹಾರೈಸಿದರು. ಎಂಬಿಎ ವ್ಯಾಸಾಂಗ ಮಾಡುವವರು, ಮಾಡಿದವರು ಮತ್ತು ಮಾಡಬೇಕಾದವರು ಒಮ್ಮೆ ನೋಡಿದರೆ ಮನ ಮುಟ್ಟುತ್ತದೆ.
ಅದು ಏನು ಎಂಬುದನ್ನು ತಿಳಿದುಕೊಳ್ಳಲು ಸಿನಿಮಾ ನೋಡಬೇಕಂತೆ. ಎಸ್.ನಾರಾಯಣ್ ಬಳಿ ಅನುಭವ ಪಡೆದುಕೊಂಡಿರುವ ಹೆಚ್.ಪಿ. ರಚನೆ,ಚಿತ್ರಕತೆ,ಸಂಭಾಷಣೆ, ನಿರ್ದೇಶನ ಹಾಗೂ ಪಬ್ಲಿಕ್ ಪ್ರೊಡಕ್ಷನ್ ಐಎನ್ಸಿ ಮೂಲಕ ನಿರ್ಮಾಣ ಮಾಡಿದ್ದಾರೆ. ಪಿಯುಸಿ ಓದುವಾಗಲೇ ಒಂದು ಏಳೆಯನ್ನು ಬರೆದುಕೊಂಡಿದ್ದು ಈಗ ಅದು ಇಲ್ಲಿಯವರೆಗೂ ತಂದು ನಿಲ್ಲಿಸಿದೆ.
ಶೀರ್ಷಿಕೆಗೆ ಬೇರೆ ಏನಾದರೂ ಅರ್ಥ ನೀಡಬೇಕೆಂದು, ಅದಕ್ಕಾಗಿ 50000 ಬಹುಮಾನ ನೀಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದರು. ’ಮೆಂಬರ್ ಆಫ್ ಬ್ಯಾಡ್ ಆಕ್ಟಿವಿಟೀಸ್’, ’ಮೈಸೂರು ಬಾಯ್ಸ್ ಅಸೋಸಿಯೇಶನ್’ ’ಮಂಡ್ಯಾ ಬಾಯ್ಸ್ ಅಸೋಸಿಯೇಶನ್’ ಹೀಗೆ ತರೆಹವಾರಿ ಹೆಸರುಗಳನ್ನು ತಿಳಿಸಿದ್ದಾರೆ.
ಅಂತಿಮವಾಗಿ ಇದಕ್ಕೆ ತಕ್ಕ ಉತ್ತರವನ್ನು ಚಿತ್ರದಲ್ಲಿ ಹೇಳಲಾಗಿದೆ. ದೃಡ ಮನೋವೃತ್ತಿ ಹುಡುಗನಾಗಿ ಪುನೀತ್ಗೌಡ ಪಾತ್ರದ ಸಲುವಾಗಿ ವಿಶೇಷ ಕೇಶವಿನ್ಯಾಸ ಮಾಡಿಸಿಕೊಂಡಿದ್ದಾರೆ. ಮಾನಸಿಕವಾಗಿ ಸಿದ್ದತೆ ಮಾಡಿಕೊಂಡು ನಟಿಸಿರುವುದು ಗೂಳಿಸೋಮ. ಒಮ್ಮೆಯಾದರೂ ಇವರಂತೆ ಇರಬೇಕು ಎಂದು ಹಂಬಲಿಸುವ ಪಾತ್ರವಾಗಿರುತ್ತದೆ.
ಜೋಡಿಯಾಗಿ ಕಾವ್ಯಗೌಡ, ಸೌಮ್ಯಶಾನ್ಭೋಗ್ ಮುಂತಾದವರ ನಟನೆ ಇದೆ. ಹರ್ಷಕಾಗೋಡು ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ದರ್ಶನ್ದೇವ್, ಸಂಕಲನ ಮರಿಸ್ವಾಮಿ.ಪಿ, ವಿಎಫ್ಎಕ್ಸ್ ದಯಾ ಅವರದಾಗಿದೆ. ಬೆಂಗಳೂರು, ಮೈಸೂರು, ಮಂಡ್ಯಾ, ಚಿಕ್ಕಮಗಳೂರು ಮತ್ತು ಹಾಸನ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಮಾರ್ಚ್ ಮೊದಲವಾರದಂದು ಏಕಕಾಲಕ್ಕೆ ಟಾಕೀಸ್ ಹಾಗೂ ಓಟಿಟಿದಲ್ಲಿ ಬಿಡುಗಡೆಯಾಗಲಿದೆ.
Be the first to comment