ರಿವೈಂಡ್ ರಾಗ ಟೀಸರ್ ನಲ್ಲಿ ಕಂಡ ತೇಜಸ್ಸು

ಹಿರಿಯ ನಟಿ ಪ್ರಮೀಳಾ ಜೋಷಾಯ್ ಅವರ ಸಹೋದರನ ಪುತ್ರನಾದ ತೇಜ್ ಈಗ ತಮ್ಮ ರಿವೈಂಡ್ ಚಿತ್ರದ ಟೀಸರ್ ಮೂಲಕ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಇತ್ತೀಚೆಗೆ ಪ್ರಮೀಳಾ ಜೋಷಾಯ್ ಮತ್ತು ಸುಂದರ್ ರಾಜ್ ಕುಟುಂಬದ ಜೊತೆ ತೇಜ್ ಇರುವ ಚಿತ್ರವೊಂದನ್ನು ನೋಡಿ ಈ ಹುಡುಗ ಯಾರು ಎಂದು ಎಲ್ಲರೂ ಕೇಲುತ್ತಿದ್ದು ಸುದ್ದಿಯಾಗಿತ್ತು. ಅದಕ್ಕೆ ತೇಜ್ ಸ್ಪಷ್ಟನೆ ಕೊಟ್ಟಿದ್ದೂ ಆಗಿತ್ತು. ಈಗ ತೇಜ್ ಚಿತ್ರರಂಗದಲ್ಲಿ ತಮ್ಮ ತೇಜಸ್ಸನ್ನು ತೋರಿಸಲು ತಯಾರಾಗಿದ್ದಾರೆ ಎಂಬುದನ್ನು ಅವರ ಚಿತ್ರದ ಟೀಸರ್ ಹೇಳುತ್ತದೆ. ಇದುವರೆಗೂ 6 ಚಿತ್ರಗಳಲ್ಲಿ ಅಭಿನಯಿಸಿರುವ ತೇಜ್ ತಮಿಳು ಚಿತ್ರರಂಗದಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ.

https://www.youtube.com/watch?v=XM5eMaXoxLU&feature=youtu.be

ಚಿತ್ರಕದ ಟೀಸರ್ ನಲ್ಲಿರೋ, ಪ್ರತಿಯೊಂದು ವಿಷಯನೂ ರೀವೈಂಡ್ ಮಾಡಿ ತಿಳ್ಕೊಬೇಕು ಎನ್ನುವ ಡೈಲಾಗಿನಂತೆ ತೇಜ್ ಆಗಾಗ ತಮ್ಮ ಜೀವನವನ್ನು ರಿವೈಂಡ್ ಮಾಡಿಕೊಂಡೇ ಮುಂದೆ ಅಡಿ ಇಡುತ್ತಿರೋ ಪ್ರತಿಭೆ. ಒಂಬತ್ತು ವರ್ಷಗಳ ನಂತರ ಕನ್ನಡದಲ್ಲಿ ಮೊದಲ ಬಾರಿಗೆ ರಿವೈಂಡ್ ಸಿನಿಮಾದಲ್ಲಿ ನಾಯಕ ನಟನಾಗಿ ಅಭಿನಯಿಸಿರುವುದಲ್ಲದೆ, ತಾವೇ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ ತೇಜ್.
ಅಂದಹಾಗೆ, ತೇಜ್, ಕಾಲಿವುಡ್ ನಲ್ಲಿ ಸಿನಿಮಾ ಪಯಣ ಆರಂಭಿಸಿದ್ದರು. ‘ಕೊಂಜಮ್ ವೆಯಿಲ್ ಕೊಂಜಮ್ ಮಝಾಯಿ, ಕದಲುಕು ಮರಣಾನಂ ಇಲೈ, ಗಾಂಥಮ್ ಮತ್ತು ಮೊಜಿವತ್ ಯಾಥ್ಲೇಲ್ ಮತ್ತಿತರ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಇದೀಗ ರಿವೈಂಡ್ ಚಿತ್ರದ ಕೆಲವು ಪೋಸ್ಟರ್ ಗಳನ್ನು ಖುಷಿಯಿಂದ ಹಂಚಿಕೊಂಡಿರುವ ಅವರು, ಇದೊಂದು ಕೌಟುಂಬಿಕ ಥ್ರಿಲ್ಲರ್ ಚಿತ್ರವಾಗಿದ್ದು, ತಮಿಳು ಹಾಗೂ ಕನ್ನಡ ಎರಡು ಭಾಷೆಗಳಲ್ಲಿ ಮೂಡಿಬರಲಿದೆ ಎಂದು ಹೇಳಿದ್ದಾರೆ.
ಬೆಂಗಳೂರು ಹಾಗೂ ಸಿಂಗಾಪುರ, ಜರ್ಮನಿ, ಲಿಥುವೇನಿಯಾ ಮತ್ತಿತರ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದ್ದು ಇದೀಗ ಚಿತ್ರ ಸೆನ್ಸಾರ್ ಪ್ರಮಾಣ ಪತ್ರ ಪಡೆದು ಕೊಂಡು ಏಪ್ರಿಲ್ 16ರಂದು ಬಿಡುಗಡೆಗೆ ಸಿದ್ಧವಾಗಿದೆ.

ರಿವೈಂಡ್ ಚಿತ್ರದಲ್ಲಿ ಇಬ್ಬರು ನಾಯಕಿಯರು ಇದ್ದಾರೆ. ಚಂದನ, ಸಂಪತ್ ಕುಮಾರ್, ಸುಂದರ್ ರಾಜ್, ಮಂಡ್ಯ ರವಿ ಮತ್ತು ಮತ್ತಿತರು ರಿವೈಂಡ್ ನ ಭಾಗವಾಗಿದ್ದಾರೆ. ಚೀನಾದ ಖ್ಯಾತ ನಟರೊಬ್ಬರನ್ನು ವಿಲನ್ ಪಾತ್ರಕ್ಕಾಗಿ ಕರೆತರುವ ಮಾತುಕತೆ ಕೂಡ ನಡೆಯುತ್ತಿದೆಯಂತೆ. ಇನ್ನು ಚಿತ್ರಕ್ಕೆ ರಿವೈಂಡ್ ರಾಗ ಹಾಕಿರೋದು ಸಬೇಶ್ ಸೊಲೊಮೊನ್.

ಇದರ ಜೊತೆ ತೇಜ್ ತಮ್ಮ ಬಗ್ಗೆ ಇನ್ನೊಂದು ವಿಷಯವನ್ನೂ ಹಂಚಿಕೊಂಡಿದ್ದಾರೆ. ತಮ್ಮ ರೀವೈಂಡ್ ಚಿತ್ರದ ಟೀಸರ್ ಸದ್ದು ಮಾಡುತ್ತಿರುವಾಗಲೇ ತೇಜ್ ರಾಮಾಚಾರಿ 2.0 ಎಂಬ ಇನ್ನೊಂದು ಚಿತ್ರದೊಂದಿಗೆ ತೆರೆ ಮೇಲೆ ಬರಲು ರೆಡಿ ಆಗುತ್ತಿದ್ದಾರೆ. ಅಮೆರಿಕಾ ಮೂಲದ ಪನಾರಮಿಕ್ ಸ್ಟುಡಿಯೋ ಕಂಪನಿಯ ಬ್ಯಾನರ್ ನಲ್ಲಿ ಪ್ರಭಾಕರ್ ವಿಶ್ವಾರಾಧ್ಯ ಮತ್ತು ಪ್ರದೀಪ್ ಈ ಚಿತ್ರದ ನಿರ್ಮಾಣ ಮಾಡುತ್ತಿದ್ದಾರೆ.

@ಬಿಸಿನಿಮಾಸ್

Be the first to comment

Leave a Reply

Your email address will not be published. Required fields are marked *

Translate »
error: Content is protected !!