ಇತ್ತೀಚೆಗೆ ಬಿಡುಗಡೆಗೆ ರೆಡಿ ಆಗಿರುವ ಚಿತ್ರಗಳ ಪಟ್ಟಿಯಲ್ಲಿ ಪ್ರಜ್ವಲ್ ದೇವರಾಜ್ ಅಭಿನಯದ ಇನ್ಸ್ ಪೆಕ್ಟರ್ ವಿಕ್ರಮ್ ಕೂಡಾ ಸದ್ದು ಮಾಡುತ್ತಿದೆ. ಇತ್ತೀಚೆಗೆ ಈ ತಂಡ ಬಿಡುಗಡೆಯ ದಿನಾಂಕವನ್ನೂ ಸಹ ಅನೌನ್ಸ್ ಮಾಡಿತ್ತು. ಹಾಗಾಗಿ ಚಿತ್ರದ ಪ್ರಚಾರಕ್ಕಾಗಿ ಏನಾದರೂ ಮಾಡಲೇಬೇಕು ಎಂದು ಚಿತ್ರದ 4ಕೆ ಟ್ರೈಲರ್ ಅನ್ನು ಬಿಡುಗಡೆ ಮಾಡಿತ್ತು. ಈ 4 ಕೆ ಟ್ರೈಲರ್ ನಾಲ್ಕೂ ದಿಕ್ಕುಗಳಲ್ಲಿ ಸುದ್ದಿ ಮಾಡುತ್ತದೆ ಎಂಬುದು ಚಿತ್ರತಂಡದ ಅನಿಸಿಕೆಯಾಗಿತ್ತು. ಆದರೆ ಆ ಟ್ರೈಲರ್ ಎಲ್ಲೂ ಸುದ್ದಿ, ಸದ್ದು ಎರಡೂ ಮಾಡಲಿಲ್ಲ. ಇದು ಯಾಕೆ ಎಂದು ಇನ್ಸ್ ಪೆಕ್ಟರ್ ವಿಕ್ರಂ ಚಿತ್ರತಂಡ ಬಹುಷಃ ಪೊಲೀಸ್ ತನಿಖೆ ಮಾಡಿಸಿರಬಹುದು ಅನಿಸುತ್ತೆ. ಆಗ ಅವರಿಗೆ ಹೊಳೆದಿರಬಹುದಾದ ವಿಷಯ ಅಂದ್ರೆ ಈ ಟ್ರೈಲರ್ ನಲ್ಲಿ ಡೈಲಾಗ್ ಗಳೇ ಇರಲಿಲ್ಲ. ಹಾಗಾಗಿ ಪೊಲೀಸ್ ಸಿನಿಮಾಕ್ಕೆ ಆವಾಜ್ ಇಲ್ಲದೆ ಇದ್ರೆ ಅದು ವರ್ಕ್ ಔಟ್ ಆಗಲ್ಲ ಎಂದು ಯಾರೋ ಹೇಳಿದ್ದಾರೆ. ಹಾಗಾಗಿ ಈಗ ಚಿತ್ರತಂಡ ಮತ್ತೊಂದು ಡೈಲಾಗ್ ಟ್ರೈಲರ್ ಬಿಡುಗಡೆ ಮಾಡಿದೆ. ಆದರೆ ಇದಾದರೂ ವರ್ಕ್ ಔಟ್ ಆಗಿದೆಯಾ ಅಂದ್ರೆ ನೋಡಿದ ಜನ ಇಲ್ಲ ಅಂತಲೇ ಹೇಳ್ತಾ ಇದ್ದಾರೆ. ಯಾಕಂದ್ರೆ ಈ ಹೊಸ ಟ್ರೈಲರ್ ನಲ್ಲಿ ಕಾಣಿಸುತ್ತಾ ಇರೋದೆಲ್ಲಾ ಬರೀ ಹಳೇ ಜೋಕ್ ಗಳಂತಿರುವ ಡೈಲಾಗ್ ಗಳು. ಮತ್ತು ಲ್ಯಾಗ್ ಮಾಡಿ ಮಾಡಿ ಎಳೆದಾಡಿ ಹೊಡೆಯಲಾಗಿರುವ ಪ್ರಜ್ವಲ್ ದೇವರಾಜ್ ಅವರ ಮ್ಯಾನರಿಸಂಗಳು.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬಹಳ ವರ್ಷಗಳ ಹಿಂದೆ ದಿನೇಶ್ ಬಾಬು ನಿರ್ದೇಶನದಲ್ಲಿ ಇನ್ಸ್ ಪೆಕ್ಟರ್ ವಿಕ್ರಂ ಅನ್ನೋ ಟೈಟಲ್ ಇಟ್ಟುಕೊಂಡು ಚಿತ್ರ ಮಾಡಿದ್ದರು. ಈಗ ಪ್ರಜ್ವಲ್ ದೇವರಾಜ್ ಅದೇ ಟೈಟಲ್ ಅನ್ನು ಕಾಪಿ ಮಾಡಿ ಸಿನಿಮಾ ಮಾಡಿದ್ದಾರೆ. ಆದರೆ ಅವರು ಇಲ್ಲಿ ಕೇವಲ ಟೈಟಲ್ ಅನ್ನು ಮಾತ್ರ ಕಾಪಿ ಮಾಡಿಲ್ಲ. ಶಿವಣ್ಣ ಅವರ ಡೈಲಾಗ್ ಡೆಲಿವರಿಯನ್ನೂ ಕಾಪಿ ಮಾಡಿದ್ದಾರೆ. ಆ ಚಿತ್ರದಲ್ಲಿ ಶಿವಣ್ಣ ಮಾತೆತ್ತಿದರೆ “ಕರ್ನಾಟಕ ಪೊಲೀಸ್ ಡಿಪಾರ್ಟ್ ಮೆಂಟ್ ನಲ್ಲಿ ನಾನು ಕೊಹಿನೂರ್ ವಜ್ರ ಇದ್ದಂಗೆ “ ಅನ್ನೋ ಡೈಲಾಗ್ ಹೊಡೀತಾ ಇದ್ರು. ಅದೇ ಡೈಲಾಗ್ ಡೆಲಿವರಿ ಶೈಲಿ ಪ್ರಜ್ವಲ್ ಅವರ ಅಭಿನಯದಲ್ಲೂ ಕಾಣುತ್ತಿದೆ. ಆದರೆ ಅದು ಇನ್ನಷ್ಟು ಲ್ಯಾಗ್ ಆಗಿದೆ. ಅಲ್ಲದೆ ಬರೆಯಲಾಗಿರುವ ಡೈಲಾಗ್ ಗಳಲ್ಲಿ ಯಾವ ಹೊಸತನವೂ ಇಲ್ಲ. ಹಳೇ ಜೋಕುಗಳನ್ನು ಗುಡ್ಡೆ ಹಾಕಿಕೊಂಡು ಡೈಲಾಗ್ ಬರೆದಿರುವ ಅನುಮಾನ ಕಾಡುತ್ತದೆ. ಅದು ಚಿತ್ರ ಬಿಡುಗಡೆ ಆದಮೇಲೆ ಗೊತ್ತಾಗೋ ವಿಷಯ. ಮಾಸ್ತಿ ಕನ್ನಡದ ಆಸ್ತಿ ಅನ್ನೋ ಹಳಸಲು ಡೈಲಾಗ್ ಅನ್ನು ಇಂದಿನ ತಾಜಾ ತಿಂಡಿ ಎಂಬಂತೆ ಬಿಂಬಿಸಲಾಗಿದೆ. ಇನ್ನು ಲಾಕಪ್ ಡೆತ್ ಚಿತ್ರದಲ್ಲಿ ಲಾಕಪ್ ಡೆತ್ ಮಾಡಿದ್ದು ದೇವರಾಜ್ ಅಲ್ಲ ಅನ್ನೋ ವಿಷಯ ಗೊತ್ತೇ ಇಲ್ಲದೆ ಸಂಭಾಷಣಾಕಾರರಿಗೆ ವಿಪರೀತ ಸ್ವಾತಂತ್ರ್ಯ ಕೊಡಲಾಗಿದೆ ಅನ್ನಿಸುತ್ತಿದೆ. ಒಟ್ಟಿನಲ್ಲಿ ಇನ್ಸ್ ಪೆಕ್ಟ ವಿಕ್ರಂ, ಡೈಲಾಗ್ ಟ್ರೈಲರ್ ಟೋಟಲಿ ವೀಕ್ ಆಗಿದೆ. ಇನ್ನು ಸಿನಿಮಾ ಹೇಗಿರುತ್ತೋ ಕಾದು ನೋಡಬೇಕಿದೆ.
@ಬಿಸಿನಿಮಾಸ್
Be the first to comment