ಪತ್ರಕರ್ತ ಪ್ರವೀಣ್ ನಾಯಕ್ ನಿರ್ದೇಶನದ “ಟಕಿಲಾ”

ಈಗ ಎಲ್ಲೆಲ್ಲೂ ಡ್ರಗ್ಸ್ , ಮಾಫಿಯಾ ಸುದ್ದಿಯೇ ಜೋರಾಗಿ ಪಸರಿಸುತ್ತಿದೆ. ಇದರ ನಡುವೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇತ್ತೀಚೆಗೆ ಸ್ಟಾರ್ ಹೋಟೆಲ್ ಶೆರಾಟನ್ ಗ್ರಾಂಡ್ ನಾಲ್ಕನೇ ಮಹಡಿಯಲ್ಲಿ “ಟಕಿಲಾ”  ಚಿತ್ರವನ್ನು ಪ್ರವೀಣ್ ನಾಯಕ್ ನಿರ್ದೇಶನದಲ್ಲಿ ಹಾಗೂ ಮರಡಿಹಳ್ಳಿ ನಾಗಚಂದ್ರ ನಿರ್ಮಾಣದಲ್ಲಿ ಸೆಟ್ಟೇರಿದೆ.

ಬಹಳ ವರ್ಷಗಳ ಬಳಿಕ ‘ಜೆಡ್’, ‘ಮೀಸೆ ಚಿಗುರಿದಾಗ’, ಹೂ ಅಂತೀಯಾ ಊಹೂ ಅಂತೀಯಾ’ ಸಿನಿಮಾಗಳ ನಿರ್ದೇಶಕ ಮೂಲತಃ ಛಾಯಾಚಿತ್ರ ಪತ್ರಕರ್ತ ಪ್ರವೀಣ್ ನಾಯಕ್ ನಿರ್ದೇಶನಕ್ಕೆ  ತಮ್ಮದೇ ಆದ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನದೊಂದಿಗೆ ವಾಪಸ್ ಆಗಿದ್ದಾರೆ. ಪ್ರವೀಣ್ ನಾಯಕ್ ಇಂದಿನ ಸ್ಥಿತಿಗತಿ ಸಾಮಾಜಿಕ ಜೀವನದಲ್ಲಿ ಇಟ್ಟುಕೊಳ್ಳುವುದೇ ಅಲ್ಲದೆ ಯಾವುದು ‘ನಶೆ’ ಎಂದು ವಿಸ್ತಾರವಾಗಿ ಹೇಳ ಹೊರಟಿದ್ದಾರೆ.

ಮಧ್ಯಪಾನ, ಡ್ರಗ್ಸ್, ತೀವ್ರವಾದ ಸಂಬಂದವೆ ನಶೆಯ ಎಂದು ವ್ಯಾಖ್ಯಾನ ಮಾಡುತ್ತಾ. ಅತಿಯಾದ ‘ಅಡ್ಡಿಕ್ಷನ್’ ಸಹ ದೊಡ್ಡ ನಶೆ ಜೀವನದಲ್ಲಿ ಎಂದು ಹೇಳಲಿದ್ದಾರೆ. ಇದರ ಜೊತೆಗೆ ಪಶು ಭಾವ, ವೀರಭಾವ ಸಹ ಚಿತ್ರಕತೆಯಲ್ಲಿ ಬೆರಸಿದ್ದಾರೆ. ಜೀವನದಲ್ಲಿ ದುಡ್ಡು ಬಹಳ ಮುಖ್ಯ ಅಲ್ಲ ಎನ್ನುವುದು ಇವರ ಚಿತ್ರದ ಗುರಿ ಹಾಗೂ ಉದ್ದೇಶ. ಕೆಲವು ಕಡೆ ಮಾನಶಾಸ್ತ್ರದ ಛಾಯೆ ಸಹ ಚಿತ್ರದಲ್ಲಿ ಕಂಡು ಬರುವುದು ನಿರ್ದೇಶಕ ಪ್ರವೀಣ್ ನಾಯಕ್ ಅವರು ಜೀವನದಲ್ಲಿ ಕಂಡಿರುವುದನ್ನೇ ಹೇಳಲು
ಹೊರಟಿದ್ದಾರೆ.

ಇತ್ತೀಚಿಗಷ್ಟೆ ‘ಜನ್ ಧನ್’ ಕನ್ನಡ ಸಿನಿಮಾ ನಿರ್ದೇಶನ ಮಾಡಿದ ಮರಡಿಹಳ್ಳಿ ನಾಗಚಂದ್ರ ಈ ಚಿತ್ರದ ನಿರ್ಮಾಪಕರು. ತಂತ್ರಜ್ಞನೊಬ್ಬ ನಿರ್ಮಾಣಕ್ಕೆ ಕೈ ಹಾಕಿ ಇಡೀ ತಂಡವನ್ನು ಒಗ್ಗೂಡಿಸಿಕೊಂಡು ಹೊಗುವುದಕ್ಕೆ ನಿರತರಾಗಿದ್ದಾರೆ. ಈ ಚಿತ್ರವನ್ನ 30 ದಿವಸಗಳ ಕಾಲ ಬೆಂಗಳೂರು, ಸಕಲೆಶಪುರ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಿದ್ದಾರೆ. ಇದೊಂದು ವಿಭಿನ್ನ ಸಿನಿಮಾವಾಗಿದ್ದು , ಖಂಡಿತ ಇದು ಪ್ರೇಕ್ಷಕರಿಗೆ ಇಷ್ಟವಾಗಲಿದೆ ಎನ್ನುತ್ತಾರೆ ನಿರ್ಮಾಪಕ ನಾಗಚಂದ್ರ.

ಈ ಚಿತ್ರದ ನಾಯಕ ಧರ್ಮ ಕೀರ್ತಿರಾಜ್ ಮಾತನಾಡುತ್ತಾ ನಿರ್ಮಾಪಕ ನಾಗಚಂದ್ರ ಜೊತೆಗೆ ಈ ಹಿಂದೆ ಅವರ ನಿರ್ದೇಶನದ ಚಿತ್ರ ಆರಂಭವಾಗಿತ್ತು , ಆದರೆ ಅದು ಪೂರ್ಣಗೊಳ್ಳುವ ಮುನ್ನವೇ ಅವರು ನಿರ್ಮಾಪಕರಾಗಿದ್ದಾರೆ. ಅವರ ಮಾತಿನಂತೆ ಈ ಚಿತ್ರದಲ್ಲಿ ನಾಯಕನಾಗಿ ನಾನು ನಟಿಸುತ್ತಿದೇನೆ. ಇದೊಂದು ವಿಭಿನ್ನ ಶೇಡ್ ಇರುವ ಚಿತ್ರ. ಒಬ್ಬ ಶ್ರೀಮಂತ ಮಗನ ಪಾತ್ರವನ್ನು ನಿರ್ವಹಿಸಿದ್ದೇನೆ.

ಅನುಭವಿಗಳ ಜೊತೆ ಕೆಲಸ ಮಾಡುವುದು ಖುಷಿಯ ವಿಚಾರ. ಇದೊಂದು ಕ್ರೈಂ , ಥ್ರಿಲ್ಲರ್ ಜೊತೆಗೆ ಸಸ್ಪೆನ್ಸ್ ಸಹ ಒಳಗೊಂಡಿದೆ. 12 ವರ್ಷಗಳ ಬಳಿಕ ಸ್ನೇಹಿತ ನಾಗೇಂದ್ರ ಅರಸ್ ಜೊತೆ ನವಗ್ರಹ ನಂತರ ಈ ಸಿನಿಮಾದಲ್ಲಿ  ಮಾಡುತ್ತಿರುವುದು ಮತ್ತೊಂದು ಖುಷಿಯಾಗಿದೆ ಎಂದರು.

ಸಂಕಲನಕಾರ, ನಿರ್ದೇಶಕ ನಾಗೇಂದ್ರ ಅರಸ್ ಈ ಚಿತ್ರದಲ್ಲಿ ಪೊಲೀಸ್ ಆಫೀಸರ್ ಆಗಿ ಅಭಿನಯ ಮಾಡುತ್ತಿದ್ದಾರೆ. ಇತ್ತೀಚಿಗೆ ಜಿಮ್ ವ್ಯಾಯಾಮ ಮಾಡಿದ್ದು , ಈ ಪಾತ್ರಕ್ಕೆ ಹೊಂದಿಕೊಳ್ಳುವಂತೆ ಆಯಿತು ಎಂದು ಹೇಳಿಕೊಂಡರು.

ಚಿತ್ರದ ಕಥಾ ನಾಯಕಿ ನಿಖಿತಾ ಸ್ವಾಮಿ ಮಾತನಾಡುತ್ತಾ ಶೀರ್ಷಿಕೆಯಲ್ಲಿ ಒಂದು ಕಿಕ್ ನೀಡಲಿದೆ. ಇಲ್ಲಿ ಅಭಿನಯಕ್ಕೆ ಬಹಳ ಅವಕಾಶವಿದೆ. ಒಳ್ಳೆಯ ಸಸ್ಪೆನ್ಸ್ ಸಹ ಒಳಗೊಂಡಿದೆ ಎಂದು ಹೇಳಿಕೊಂಡರು. ಸುಮನ್, ಅಂಕಿತ ಬಾಲ, ಕೋಟೆ ಪ್ರಭಾಕರ್ ಮುಂತಾದವರ ಅಭಿನಯವು ಈ ಚಿತ್ರದಲ್ಲಿದೆ. ಶ್ರೀ ಸಿದ್ದಿವಿನಾಯಕ ಫಿಲ್ಮ್ಸ್ ಅಡಿಯಲ್ಲಿ ತಾಯರಾಗುತ್ತಿರುವ ಈ ಸಿನಿಮಾಕ್ಕೆ ಪಿ. ಕೆ.ಎಚ್ ದಾಸ್ ಅವರ ಛಾಯಾಗ್ರಹಣ ಟಾಪ್ ಸ್ಟಾರ್ ರೇಣು ಅವರು ನಾಲ್ಕನೇ ಸಂಗೀತ ನಿರ್ದೇಶನದಲ್ಲಿ ಮೂರು ಹಾಡುಗಳಿಗೆ ರಾಗ ಸಂಯೋಜನೆ ಮಾಡಲಿದ್ದಾರೆ.ಅದ್ದೂರಿಯಾಗಿ ಮುಹೂರ್ತವನ್ನು ಆಚರಿಸಿಕೊಂಡಿರುವ “ಟಕಿಲಾ” ಚಿತ್ರೀಕರಣವನ್ನೂ ಆರಂಭಿಸಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!