ವಾಸು ನಾನ್ ಪಕ್ಕಾ ಕಮರ್ಷಿಯಲ್‍ಗೆ ಬಿಡುಗಡೆ ಭಾಗ್ಯ
ಅಜಿತ್‍ವಾಸನ್‍ಉಗ್ಗೀನ ನಿರ್ದೇಶನದ ‘ವಾಸು ನಾನ್ ಪಕ್ಕಾ ಕಮರ್ಷಿಯಲ್’ ಚಿತ್ರವು ಮುಂದಿನ ತಿಂಗಳು ತೆರೆಗೆ ಬರಲು ಅಣಿಯಾಗುತ್ತಿರುವ ಕಾರಣ ನಟ, ನಿರ್ಮಾಪಕ ಅನೀಶ್ ತೇಜಶ್ವರ್ ಗ್ರಾಂಡ್ ಪ್ರೀ ರಿಲೀಸ್ ಈವೆಂಟ್‍ನ್ನು ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದರು. ಹಾಡಿಗೆ ಹೆಜ್ಜೆ ಹಾಕಿದ ಕೃಷಿ ತಾಪಂಡ ಮಾತನಾಡಿ ಗೆಳೆಯನ ಚಿತ್ರದ ಮೂಲಕ ನಾಯಕಿಯಾಗಿ ಕಾಣಿಸಿಕೊಂಡೆ. ದಯವಿಟ್ಟು ಚಿತ್ರಮಂದಿರದಲ್ಲೇ ಸಿನಿಮಾ ನೋಡಿ ಎಂದು ಕೋರಿಕೊಂಡರು.
ದರ್ಶನ್ ಟ್ರೈಲರ್‍ನ್ನು ನೋಡಿದ ನಂತರ ಅನೀಶ್‍ರಿಂದ ಪ್ರಚಾರ ಮಾಡುವುದನ್ನು ನಾವುಗಳು ಕಾಪಿ ಮಾಡಬೇಕು. ಏಳು ಚಿತ್ರಗಳಲ್ಲಿ ನಟಿಸಿ ಮೊದಲಬಾರಿ ಅಭಿನಯದ ಜೊತೆಗೆ ನಿರ್ಮಾಪಕರಾಗಿದ್ದಾರೆ. ನಿರ್ಮಾಪಕರ ಕಷ್ಟ ಏನೆಂದು ತಿಳಿದಿದೆ. ಚಿತ್ರರಂಗಕ್ಕೆ ಏನಾದರೂ ಮಾಡಬೇಕೆಂದು ನಿರ್ಮಾಣ ಸಂಸ್ಥೆಯನ್ನು ಹುಟ್ಟು ಹಾಕಿದ್ದಾರೆ. ಇದರಿಂದ ರೈತನಿಗೂ ಅನುಕೂಲವಾಗುತ್ತದೆ. ಒಂದು ಸಿನಿಮಾ ಬಂದರೆ ನೂರಾರು ಜನರಿಗೆ ಕೆಲಸ ಸಿಗುತ್ತದೆ. ಅದರಿಂದ ನಾವುಗಳು ಕನ್ನಡ ಚಿತ್ರಕ್ಕೆ ಪ್ರೋತ್ಸಾಹ, ಬೆಂಬಲ ಕೊಡಬೇಕು. ಇದರ ಲಾಭದಲ್ಲಿ ಪ್ರತಿಯೊಬ್ಬರಿಗೂ ಶೇರು ಹೋಗುತ್ತದೆ. ವಾಸು ತುಣುಕುಗಳು ಪಕ್ಕಾ ಔಟ್ ಅಂಡ್ ಔಟ್ ಕಮರ್ಷಿಯಲ್ ಆಗಿದೆ. ಇಲ್ಲಿ ಯಾರೂ ಸ್ಟಾರ್‍ಗಳು ಇಲ್ಲ. ಸ್ಟಾರ್‍ಗಳನ್ನು ಹುಟ್ಟು ಹಾಕುವವರು ಅಲ್ಲಿದ್ದಾರೆಂದು ಜನರತ್ತ ಮೈಕ್ ತೋರಿದರು ದರ್ಶನ್
ಅನುಮತಿ ಇಲ್ಲದೆ ಸೆಟ್‍ಗೆ ಹೋದಾಗ ಆತ್ಮೀಯವಾಗಿ ಬರಮಾಡಿಕೊಂಡ ದರ್ಶನ್ ಸರ್ ವಿಷಯ ಕೇಳಿ ಬರುತ್ತೇನೆಂದು ಹೇಳಿದ್ದರು. ಇಂದು ಶುಭ ಹಾರೈಸಲು ಬಂದಿದ್ದಾರೆ. ಜೀವ ಇರುವ ತನಕ ಇವರ ಸಹಕಾರವನ್ನು ಮರೆಯುವುದಿಲ್ಲ. ಪ್ರಚಾರಕ್ಕಾಗಿ ಇಂತಹ ನಟರು ಅವಶ್ಯಕವಾಗಿದೆ ಎಂದು ಅಭಿಪ್ರಾಯಪಟ್ಟರು ಅನೀಶ್ ತೇಜಶ್ವರ್.
ಅನೀಶ್ ಹಿಂದಿನ ಚಿತ್ರದಲ್ಲಿ ಸಹಾಯಕ ನಿರ್ದೇಶಕನಾಗಿದ್ದೆ. ರಕ್ಷಿತ್‍ಶೆಟ್ಟಿ ಉಪನಾಯಕನಾಗಿ ಕಾಣಿಸಿಕೊಂಡಿದ್ದರು. ಬಾಕ್ಸ್ ಆಫೀಸ್ ಸುಲ್ತಾನ್ ಬಂದು ಆಶಿರ್ವಾದ ಮಾಡಿದ್ದಾರೆಂದರೆ ಅದು ಹಿಟ್ ಆದಂತೆ ಅಂತ ಭವಿಷ್ಯ ನುಡಿದರು ರಿಶಬ್ ಶೆಟ್ಟಿ.
ಎರಡನೆ ಚಿತ್ರ ಬಿಡುಗಡೆಯಾಗುತ್ತಿರುವುದು ಖುಷಿ ತಂದಿದೆ. ದರ್ಶನ್ ಸರ್ ನಮ್ಮ ಸಿನಿಮಾಕ್ಕೆ ಹರಸಲು ಬಂದಿದ್ದು ನಮಗೆ ಶಕ್ತಿ ಬಂದಂತೆ ಆಗಿದೆ ಎಂಬುದು ನಾಯಕಿ ನಿಶ್ವಿಕಾನಾಯ್ಡು ಸಂತಸದ ನುಡಿಯಾಗಿತ್ತು. ಆಗಸ್ಟ್ ಮೂರರಂದು ಬಿಡುಗಡೆ ಇರುವ ಪೋಸ್ಟರ್‍ನ್ನು ದರ್ಶನ್ ಬಿಡುಗಡೆ ಮಾಡಿದರು. ಯುವ ಪ್ರತಿಭೆ ಯಶವಂತ್ ಅವರ ಯೋಗಾಸನದ ವಿವಿಧ ಭಂಗಿಗಳು, ಅನುಷಾರಂಗನಾಥ್, ಅನಿತಾಭಟ್ ಹಾಗೂ ಮೌಂಟ್ ಕಾರ್ಮಲ್ ಕಾಲೇಜು ವಿದ್ಯಾರ್ಥಿನಿಯರ ಹಿಪ್‍ಹಾಪ್ ನೃತ್ಯಗಳು ಸಭಿಕರ ಮನಸೆಳೆದವು.
Pingback: basics