‘ಶ್ರೀರಾಘವೇಂದ್ರ ಚಿತ್ರವಾಣಿ’ 20ನೇ ಪ್ರಶಸ್ತಿ ಪ್ರದಾನ ಸಮಾರಂಭ

ಚಿತ್ರರಂಗದ ಮಾಹಿತಿಯನ್ನು ಜನಸಾಮಾನ್ಯರಿಗೆ ತಿಳಿಯ ಬೇಕಾದರೆ ಒಂದು ಕೊಂಡಿ ಅತ್ಯಗತ್ಯ. ಇಂತಹ ಕೆಲಸವನ್ನು ನಿರಂತರವಾಗಿ ಮಾಡುತ್ತಾ ಬಂದಿದೆ ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆ. ಚಿತ್ರೋದ್ಯಮದ ಕಲಾವಿದರು , ತಂತ್ರಜ್ಞರಿಗೆ ಹಾಗೂ ಪತ್ರಕರ್ತರಿಗೆ ಬೆಸುಗೆಯಾಗಿ (ಪಿ. ಆರ್. ಒ) ಕೆಲಸವನ್ನು ನಿರoತರಾಗಿ ಸುಧೀಂದ್ರ ವೆಂಕಟೇಶ್ ಹಾಗೂ ವಾಸು ಮತ್ತು ಸುನೀಲ್ ಮಾಡಿಕೊಂಡು ಬರುತ್ತಿದ್ದಾರೆ. ದಿ. ಡಿ .ವಿ .ಸುಧೀಂದ್ರ ಅವರು ಈ ಸಂಸ್ಥೆ ಸಂಸ್ಥೆಯನ್ನು ಹುಟ್ಟುಹಾಕಿದರು.

ಆದರೆ ಇಂದು ಅವರು ನಮ್ಮೊಂದಿಗಿಲ್ಲ , ಆದರೆ ಈ ಸಂಸ್ಥೆಯ ಘನತೆ , ಗೌರವವನ್ನು ಉಳಿಸಿಕೊಂಡು ಮುಂದೆ ಸಾಗುತ್ತಿರುವ ಸುಧೀಂದ್ರ ವೆಂಕಟೇಶ್ ಪ್ರತಿ ವರ್ಷದಂತೆ ದಿ. ಡಿ.ವಿ. ಸುಧೀಂದ್ರ ರವರ ಹುಟ್ಟುಹಬ್ಬದ ದಿನದಂದೇ ಕಾರ್ಯಕ್ರಮ ನಡೆಸುವುದು ವಾಡಿಕೆಯಾಗಿತ್ತು. ಈ ಬಾರಿಯೂ ಸಂಸ್ಥೆಯ ಮೂಲಕ 44 ನೇ ವಾರ್ಷಿಕೋತ್ಸವ ಹಾಗೂ 20ನೇ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಅಚ್ಚುಕಟ್ಟಾಗಿ ನೆರವೇರಿಸಿದರು. ಪ್ರತಿ ಬಾರಿಯೂ ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆ ಹನ್ನೊಂದು ಪ್ರಶಸ್ತಿಗಳನ್ನು ನೀಡಿ ಗಣ್ಯರನ್ನು ಗೌರವಿಸಲಾಗುತ್ತಿತು. ಆದರೆ ಕೊರೋನಾ ಸಂಕಷ್ಟದಿಂದ ಚಿತ್ರ ಚಟುವಟಿಕೆಗಳು ಸ್ತಬ್ಧವಾಗಿತ್ತು. ಬೆರಳೆಣಿಕೆಯ ಚಿತ್ರಗಳು ಮಾತ್ರ ತೆರೆಕಂಡಿದ್ದವು , ಹಾಗಾಗಿ ಈ ಬಾರಿ 4ಪ್ರಶಸ್ತಿಗಳು ಸೀಮಿತ ಮಾಡಲು ಸಂಸ್ಥೆ ನಿರ್ಧರಿಸಿತ್ತು.
ಅದರಂತೆ ಈ ಬಾರಿ

1. ಶ್ರೀ ಎನ್. ಕುಮಾರ್ (ನಿರ್ಮಾಪಕರು) ಶ್ರೀ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ .
2. ಶ್ರೀ ಬಾಬು ಕೃಷ್ಣಮೂರ್ತಿ (ಹಿರಿಯ ಪತ್ರಕರ್ತರು) ಶ್ರೀ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ.
3. ಶ್ರೀಮತಿ ಇಂದೂ ವಿಶ್ವನಾಥ್(ಗಾಯಕಿ) ಡಾ. ರಾಜ್ ಕುಮಾರ್ ಪ್ರಶಸ್ತಿ.
4. ಶ್ರೀ ಇಂದ್ರಜಿತ್ ಲಂಕೇಶ್ (ನಿರ್ದೇಶಕರು) ನಿರ್ದೇಶಕ ದಿ. ಆರ್. ಶೇಷಾದ್ರಿ ಪ್ರಶಸ್ತಿ.
ಈ ಎಲ್ಲಾ ಗಣ್ಯರನ್ನು ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯು ಮಲ್ಲೇಶ್ವರದ ರೇಣುಕಾಂಬ ಸ್ಟುಡಿಯೋದಲ್ಲಿ ಮುಖ್ಯ ಅತಿಥಿಗಳಾಗಿ ಬಂದoತಹ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾದ ಸುನಿಲ್ ಪುರಾಣಿಕ್, ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರು ಆಗಿರುವ ತಾರಾ ಅನೂರಾಧ ಹಾಗೂ ಆಂತರಿಕ ಭದ್ರತಾ ಪಡೆಯ ಮುಖ್ಯಸ್ಥ ಭಾಸ್ಕರ್ ರಾವ್ ರವರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು. ಪ್ರಶಸ್ತಿ ಸ್ವೀಕರಿಸಿದ ಪ್ರತಿಯೊಬ್ಬರು ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ ಒಡನಾಟದ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿ , ಪ್ರಶಸ್ತಿ ಪಡೆದಿದ್ದಕ್ಕೆ ಧನ್ಯವಾದಗಳನ್ನು ತಿಳಿಸಿದರು.

ಹಾಗೆಯೇ ಮುಖ್ಯ ಅತಿಥಿಯಾಗಿ ಬಂದಂತಹ ತಾರಾ ಅನುರಾಧ ದಿ. ಡಿ. ವಿ. ಸುಧೀಂದ್ರ ಅವರ ಬಗ್ಗೆ ಮಾತನಾಡುತ್ತಾ ನಾನು ಅವರ ಮನೆಯ ಮಗಳಾಗಿ ಇದ್ದೇನೆ. ಇಂದಿಗೂ ಅದೇ ಪ್ರೀತಿ , ವಿಶ್ವಾಸ ಇದೆ. ಇವರು ಪ್ರಶಸ್ತಿ ಆರಂಭಿಸಿದ ದಿನದಿಂದ ಇಂದಿನವರೆಗೂ ಇದ್ದೇನೆ ಮುಂದೆಯೂ ಇರುತ್ತೇನೆ.

ಮುಂದೆಯೂ ಈ ಸಂಸ್ಥೆ ಉತ್ತಮ ಕೆಲಸಗಳನ್ನ ಮಾಡುತ್ತಾ ಸಾಗಲಿ ಎಂದರು. ಅದೇ ರೀತಿ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಕೂಡ ಮಾತನಾಡುತ್ತಾ ಸಂಸ್ಥೆಯ ಕಾರ್ಯವೈಖರಿ ಕಂಡು ಮೆಚ್ಚುಗೆ ವ್ಯಕ್ತಪಡಿಸಿ , ಇದೊಂದು ಒಳ್ಳೆಯ ಬೆಳವಣಿಗೆ ಈ ಪ್ರಶಸ್ತಿಗೆ ಬಹಳಷ್ಟು ಮಾನ್ಯತೆ ಇದೆ. ಮುಂದೆಯೂ ಇದೇ ರೀತಿ ಸಾಗಲಿ ಎಂದು ಶುಭ ಕೋರಿದರು. ಇನ್ನು ಸಂಸ್ಥೆಯ ರೂವಾರಿ ಸುಧೀಂದ್ರ ವೆಂಕಟೇಶ್ ಮಾತನಾಡುತ್ತಾ ಈ ಬಾರಿ 4ಪ್ರಶಸ್ತಿ ನೀಡಿದ್ದೇವೆ. ಮುಂದಿನ ವರ್ಷದಿಂದ ಎಂದಿನಂತೆ ಹನ್ನೊಂದು ಪ್ರಶಸ್ತಿಗಳನ್ನು ನೀಡುತ್ತೇವೆ ನಮ್ಮೆಲ್ಲರ ಪ್ರೀತಿ ಸಹಕಾರ ಹೀಗೆ ಇರಲಿ ಎಂದು ಕೇಳಿಕೊಂಡರು.

Be the first to comment

Leave a Reply

Your email address will not be published. Required fields are marked *

Translate »
error: Content is protected !!