‘ಫುಡ್ ಸ್ಟೆಪ್ಸ್’ ಪ್ರಾಡೆಕ್ಟ್ ಬಿಡುಗಡೆ ಮಾಡಿದ ಪುನೀತ್ ರಾಜ್‌ಕುಮಾರ್!

ಚಿತ್ರರಂಗದಲ್ಲಿ ತಮ್ಮದೇ ಆದ ವಿಶೇಷ ಮ್ಯಾನರಿಸಂ ಮೂಲಕ ಪ್ರೇಕ್ಷಕರ ಮನಗೆದ್ದ ನಟ ಸಾಯಿಕುಮಾರ್. ಕನ್ನಡ , ತೆಲುಗು , ತಮಿಳು ಹಾಗೂ ಮಲಯಾಳಂ ಸೇರಿದಂತೆ ದಕ್ಷಿಣ ಭಾರತದ ಚಿತ್ರಪ್ರೇಮಿಗಳ ಮನಸ್ಸು ನಟ ಸಾಯಿಕುಮಾರ್ ರವರ ಮಗಳು ಹಾಗೂ ಅಳಿಯ ಸೇರಿ ಆರಂಭಿಸುತ್ತಿರುವ ಹೊಸ ಉದ್ಯಮಕ್ಕೆ ಹೆಗಲಾಗಿ ನಿಂತಿದ್ದಾರೆ.

ಹೌದು, ಡೈಲಾಗ್ ಕಿಂಗ್ ಸಾಯಿಕುಮಾರ್ ಅವರ ಪುತ್ರಿ ಜ್ಯೋತಿರ್ಮಯಿ ಮೂಲತ: ಒಬ್ಬ ವೈದ್ಯೆ, ಮಕ್ಕಳತಜ್ಞೆ. ತಮ್ಮ ಬಳಿ ಬರುವ ಹಲವಾರು ಪೋಷಕರ ಸಮಸ್ಯೆಯಲ್ಲಿ ಮಕ್ಕಳು ಆಹಾರ ಸೇವಿಸಲು ನಿರಾಸಕ್ತಿ ತೋರಿಸುವುದು ಪ್ರಮುಖವಾಗಿರುತ್ತಿತ್ತು. ಇದನ್ನು ಮನಗಂಡ ಡಾ.ಜ್ಯೋತಿಮಯಿ ಅವರು ತಮ್ಮ ಪತಿ ಕೃಷ್ಣ ಫಲ್ಗುಣರ ಜೊತೆ ಸೇರಿ ಮಕ್ಕಳಿಗೆ ರುಚಿಸುವಂಥ ಪೌಷ್ಠಿಕಾಂಶ ಒಳಗೊಂಡ ಸಿದ್ದ ಆಹಾರವನ್ನು ತಯಾರಿಸಲು ನಿರ್ಧರಿಸಿದ್ದಾರೆ. ಅದರ ಫಲವೇ ಫುಡ್ ‌ಸ್ಟೆಪ್ಸ್.

ಮಕ್ಕಳು ಇಷ್ಟಪಡುವಂಥ ವಿವಿಧ ಟೇಸ್ಟಗಳಲ್ಲಿರುವ ಈ ದ್ರವೀಕೃತ ಸಿದ್ದ ಆಹಾರದ ಪಾಕೆಟ್‌ಗಳ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನ ಪಂಚತಾರಾ ಹೋಟೆಲೊಂದರಲ್ಲಿ ನೆರವೇರಿತು. ಇದೇ ಸಂದರ್ಭದಲ್ಲಿ ಫುಡ್‌ಸ್ಟೆಪ್ಸ್ ಪ್ರಾಡೆಕ್ಟ್ ನ ಅಧಿಕೃತ ಜಾಹೀರಾತನ್ನೂ ಸಹ ಬಿಡುಗಡೆ ಮಾಡಲಾಯಿತು. ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಈ ಫಡ್ ಪ್ಟಾಡೆಕ್ಟ್ ಬಿಡುಗಡೆ ಮಾಡಿದರು. ನಂತರ ಅವರು ಮಾತನಾಡುತ್ತ ಈ ಥರದ ಪ್ರಾಡಕ್ಟ ಗಳನ್ನು ಫಾರಿನ್ ಕಂಟ್ರಿಗಳಲ್ಲಿ ನೋಡುತ್ತಿದ್ದೆವು.

ಈಗ ನಮ್ಮಲ್ಲಿಯೂ ಸಹ ಬಂದಿದೆ. ಇದರಿಂದ ನಮ್ಮ ಎಲ್ಲಾ ತಾಯಂದಿರಿಗೆ ಸಹಕಾರಿಯಾಗುತ್ತದೆ, ಸಾಯಿಕುಮಾರ್ ಅವರ ಮಗಳು ಪೀಡಿಯಾಟ್ರಿಷಿಯನ್ ಆಗಿ, ಇಂಥ ಒಂದು ಪ್ರಾಡೆಕ್ಟ್ ರೆಡಿ ಮಾಡಿದ್ದಾರೆ. ಅವರ ಕಂಪನಿ ಉತ್ತಮವಾಗಿ ಬೆಳೆಯಲಿ. ಮತ್ತೊಂದಷ್ಟು ಹೊಸ ಉತ್ಪನ್ನಗಳನ್ನು ಪರಿಚಯಿಸಲಿ, ಇದರ ಜಾಹೀರಾತನ್ನು ರವಿಶಂಕರ್ ಅವರ ಮಗ ತುಂಬಾ ಅದ್ಭುತವಾಗಿ ಮಾಡಿದ್ದಾರೆ ಎಂದು ಶುಭ ಹಾರೈಸಿದರು.  ಈ ಸಂದರ್ಭದಲ್ಲಿ ಸಾಯಿಕುಮಾರ್ ಸಹೋದರರಾದ ನಟ ರವಿಶಂಕರ್, ಅಯ್ಯಪ್ಪ ಶರ್ಮ ಸಹ ಹಾಜರಿದ್ದರು.

Be the first to comment

Leave a Reply

Your email address will not be published. Required fields are marked *

Translate »
error: Content is protected !!