“ಪ್ರೇಮಂ ಚಿರಂ” ಚಿತ್ರದ ಚಿತ್ರೀಕರಣ ಮುಕ್ತಾಯ

ಧೃತಿ ಪ್ರೊಡಕ್ಷನ್ಸ್ ನಿರ್ಮಾಣದಲ್ಲಿ ಸ್ನೇಹಿತರು ಜೊತೆಗೂಡಿ ನಿರ್ಮಿಸಿರುವ “ಪ್ರೇಮಂ ಚಿರಂ” ಚಿತ್ರಕ್ಕೆ ಹುಬ್ಬಳ್ಳಿಯ ಶಿವಗಿರಿ ರೆಸಾರ್ಟ್‍ನಲ್ಲಿ, ಸೂರ್ಯ ಹಾಗೂ ಪಿಂಕಿ ಕೌರ್ ಅಭಿನಯದಲ್ಲಿ ‘ಪುಳಕಿತನಾದೆನು ನಿನ್ನೆಯ ಪ್ರೇಮಕೆ’ ಪರಿಚಿತಳಾದೆನು ಅನುರಾಗಕೆ’ ಎಂಬ ಹಾಡನ್ನು ಸಿರಿ ಶ್ರೀನಿವಾಸ್ ರಚಿಸಿದ ಈ ಗೀತೆಯನ್ನು ರಜತ್ ಸೂರ್ಯ ನೃತ್ಯ ನಿರ್ದೇಶನದಲ್ಲಿ ನಡೆಯಿತು. ಹಾಡಿನ ಚಿತ್ರೀಕರಣ ಮುಗಿಸಿ ಶ್ರೀ ಸಿದ್ಧಾರೂಢ ರವರ ಸನ್ನಿಧಿಯಲ್ಲಿ ಚಿತ್ರಕ್ಕೆ ಕುಂಬಳಕಾಯಿ ಒಡೆಯಲಾಯಿತು.

ಛಾಯಾಗ್ರಹಣ-ಸಂಗೀತ ರೋಹನ್ ದೇಸಾಯಿ, ಪೋಸ್ಟ್ ಪ್ರೊಡಕ್ಷನ್ಸ್ – ಆರ್.ಡಿ.ಸ್ಟುಡಿಯೋ, ಸಾಹಿತ್ಯ – ಹರ್ಷವರ್ಧನ ಹೆಗಡೆ, ರಜತ್ ಸೂರ್ಯ, ಪಾರ್ವತಿ ಸ್ವಪ್ನ, ಸಿರಿ ಶ್ರೀನಿವಾಸ್, ಸಹನಿರ್ದೇಶನ – ದೇವರಾಜ್ ಎಸ್. ಅಣ್ಣಯ್ಯ, ಸಹನಿರ್ಮಾಪಕರು – ತುಳಜಾರಾಂ ಸಿಂಗ್ ಠಾಕೂರ್, ಈ ಚಿತ್ರದ ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ದೇಶನ-ಶ್ರೀನಿವಾಸ್, 5 ವಿಭಿನ್ನ ಪ್ರೇಮಕಥಾ ಹಂದರ ಹೊಂದಿರುವ ಈ ಚಿತ್ರದಲ್ಲಿ – ನೀನಾಸಂ ಠಾಕೂರ್, ಪ್ರೀತಿ ಚೇಷ್ಠ (ಮುಂಬೈ), ಸಂಗಮೇಶ್, ಸೌಮ್ಯ, ಸೂರ್ಯ, ಪಿಂಕಿ ಕೌರ್, ಪ್ರಶಾಂತ್, ಮಧುಶ್ರೀ, ಅನಿಲ್, ರತ್ನಶ್ರೀ, ದೇವರಾಜ್ (ಹುಬ್ಬಳ್ಳಿ), ಸುಮ, ಮುಂತಾದವರು.

Be the first to comment

Leave a Reply

Your email address will not be published. Required fields are marked *

Translate »
error: Content is protected !!