95ನೇ ಆಸ್ಕರ್ ಪ್ರಶಸ್ತಿಗೆ ಈ ಬಾರಿ 14 ಸಿನಿಮಾಗಳು ಭಾರತದಿಂದ ಅಧಿಕೃತವಾಗಿ ಆಯ್ಕೆ ಆಗುವ ಹಾದಿಯಲ್ಲಿ ಸ್ಪರ್ಧೆಗೆ ಇಳಿದಿವೆ.
ಈ ಪೈಕಿ ಎರಡು ದಕ್ಷಿಣ ಭಾರತದ ಸಿನಿಮಾಗಳಿದ್ದು, ಕನ್ನಡದ ಯಾವುದೇ ಸಿನಿಮಾ ಈ ಬಾರಿಯ ಸ್ಪರ್ಧೆಯಲ್ಲಿಲ್ಲ ಎನ್ನುವುದು ಬೇಸರದ ಸಂಗತಿ.
ಮಲಯಾಳಂ ಸಿನಿಮಾ ‘ನಾಯಟ್ಟು’, ತಮಿಳು ಸಿನಿಮಾ ‘ಮಂಡೇಲಾ’, ವಿದ್ಯಾ ಬಾಲನ್ ನಟಿಸಿರುವ ಹಿಂದಿಯ ‘ಶೇರ್ನಿ’, ವಿಕ್ಕಿ ಕೌಶಲ್ ನಟಿಸಿ ಇತ್ತೀಚೆಗಷ್ಟೆ ಬಿಡುಗಡೆ ಆದ ‘ಸರ್ದಾರ್ ಉದ್ಧಮ್ ಸಿಂಗ್’, ಅಸ್ಸಾಮ್‌ನ ‘ಬ್ರಿಡ್ಜ್’, ಗುಜರಾತಿ ಸಿನಿಮಾ ‘ಚೆಲ್ಲ ಶೋ’ ಸ್ಪರ್ಧೆಯಲ್ಲಿ ಇರುವ ಪ್ರಮುಖ ಸಿನೆಮಾ ಆಗಿವೆ.
15 ಮಂದಿಯ ಸಿನಿಮಾಕರ್ಮಿಗಳ ಪ್ಯಾನೆಲ್ ಸಿನಿಮಾ ವೀಕ್ಷಿಸಿ ಒಂದು ಸಿನಿಮಾವನ್ನು ಆಯ್ಕೆ ಮಾಡಲಿದೆ. ಈ ಚಿತ್ರ 95ನೇ ಆಸ್ಕರ್‌ಗೆ ಭಾರತದ ಅಧಿಕೃತ ಆಯ್ಕೆಯಾಗಿ ಪ್ರವೇಶ ಮಾಡಲಿದೆ. ಸಿನಿಮಾ ವೀಕ್ಷಣೆ ಕೊಲ್ಕತ್ತದಲ್ಲಿ ನಡೆಯಲಿದೆ. ಆಯ್ಕೆ ಸಮಿತಿಯ ನಾಯಕತ್ವವನ್ನು ನಿರ್ದೇಶಕ ಶಾಜಿ ಎನ್ ಕರುಣ್ ವಹಿಸಿಕೊಂಡಿದ್ದಾರೆ.
ಕಳೆದ ವರ್ಷ ಭಾರತದಿಂದ ಮಲಯಾಳಂನ ‘ಜಲ್ಲಿಕಟ್ಟು’ ಸಿನಿಮಾ ಅಧಿಕೃತ ಸಿನಿಮಾವಾಗಿ ಆಸ್ಕರ್ ಪ್ರವೇಶಿಸಿತ್ತು. ಆದರೆ ಅಂತಿಮ ನಾಲ್ಕರ ಘಟ್ಟಕ್ಕೆ ಆಯ್ಕೆಯಾಗಲು ವಿಫಲವಾಗಿತ್ತು.
ಭಾರತದ ‘ಮದರ್ ಇಂಡಿಯಾ’, ‘ಸಲಾಂ ಬಾಂಬೆ’, ‘ಲಗಾನ್’ ಸಿನಿಮಾಗಳಷ್ಟೆ ಈವರೆಗೆ ಆಸ್ಕರ್‌ನ ಅಂತಿಮ ನಾಲ್ಕರ ಘಟಕ್ಕೆ ತಲುಪಲು ಯಶಸ್ವಿಯಾಗಿವೆ. ಆದರೆ ಯಾವುದೇ ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ಬಂದಿಲ್ಲ.
Be the first to comment