5 ಅಡಿ 7 ಅಂಗುಲ, 113 ದಿನ. 16 ವಾರ

ಕರೋನಾ ಲಾಕ್ ಡೌನ್ ಆದಮೇಲೆ ಮತ್ತೆ ಚಿತ್ರರಂಗ ತೆರೆದುಕೊಳ್ಳಲು ಪ್ರಯತ್ನಿಸುತ್ತಿದೆ. ಆದರೆ ಚಿತ್ರಮಂದಿರಗಳು ಈಗ ತಾನೇ ಸಂಪೂರ್ಣ ತೆರೆದುಕೊಳ್ಳುತ್ತಿವೆ. ಇಂಥ ಸಂದರ್ಭದಲ್ಲಿ ಸಿನಿಮಾಗಳನ್ನು ಬಿಡುಗಡೆ ಮಾಡಲು ನಿರ್ಮಾಪಕರು ಮುಂದೆ ಅಡಿ ಇಡಲು ಯೋಚನೆ ಮಾಡುತ್ತಿದ್ದರೆ ಇಲ್ಲೊಂದು ಚಿತ್ರ ನೂರು ದಿನಗಳನ್ನು ಯಶಸ್ವಿಯಾಗಿ ಪೂರೈಸಿದೆ.

ಹೌದು ನಂದಳಿಕೆ ನಿತ್ಯಾನಂದ ಪ್ರಭು ನಿರ್ದೇಶನದ 5 ಅಡಿ 7 ಅಂಗುಲ ಚಿತ್ರ ಬೆಂಗಳೂರಿನ ಒರಾಯನ್ ಮಾಲ್ ನ ಪಿವಿಆರ್ ನಲ್ಲಿ 100 ದಿನಗಳ ಪ್ರದರ್ಶನ ಕಂಡಿದೆ. ಈ ಚಿತ್ರದ ಶತದಿನೋತ್ಸವ ಸಂಭ್ರಮದಲ್ಲಿ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್, ನಿರ್ಜೇಶಕರಾದ ಪಿ ಎಚ್ ವಿಶ್ವನಾಥ್, ಪಿ ಶೇಷಾದ್ರಿ, ಗುರುಪ್ರಸಾದ್ ಮುಂತಾದವರು ಭಾಗವಹಿಸಿದ್ದರು.

ಕಳೆದ ವರ್ಷ ಬಿಡುಗಡೆ ಆಗಿದ್ದ ಈ ಚಿತ್ರ ಲಾಕ್ ಡೌನ್ ನಂತರ ಮರುಬಿಡುಗಡೆ ಭಾಗ್ಯ ಕಂಡಿತ್ತು. ರಸಿಕ್ ಕುಮಾರ್, ಭುವನ್ ನಾರಾಯಣ್, ಅದಿತಿ ಮುಂತಾದವರ ತಾರಾಗಣ ಇರುವ ಈ ಚಿತ್ರ ಶೇಕಡಾ 50ರಷ್ಠು ಪ್ರೇಕ್ಷಕರು ಮಾತ್ರ ಬರಬಲ್ಲ ಸಮಯದಲ್ಲಿ 100 ದಿನಗಳನ್ನು ಪೂರೈಸಿರೋದು ವಿಶೇಷ.

ಯಾರೂ ಸಿನಿಮಾಗಳನ್ನು ಬಿಡುಗಡೆ ಮಾಡುವ ಧೈರ್ಯ ತೋರಿಸದೇ ಇದ್ದ ಸಮಯದಲ್ಲಿ ತಮ್ಮ ಚಿತ್ರ ಬಿಡುಗಡೆ ಆಗಿ ನೂರು ದಿನಗಳನ್ನು ಕಂಡಿದ್ದು ನನಗೆ ಖುಷಿ ತಂದಿದೆ. ನನ್ನ ಚಿತ್ರಕ್ಕೆ ಸಹಕಾರ ಕೊಟ್ಟ ಪ್ರೇಕ್ಷಕರು ಮತ್ತು ಮಾಧ್ಯಮದವರನ್ನು ನಾನು ಜೀವನ ಪೂರ್ತಿ ನೆನಪಿಟ್ಟುಕೊಳ್ಳುತ್ತೇನೆ ಎಂದು ನಿರ್ದೇಶಕನಿತ್ಯಾನಂದ ಪ್ರಭು ತಮ್ಮ ಸಂತೋಷ ಹಂಚಿಕೊಂಡಿದ್ದಾರೆ.

ಒಟ್ಟಿನಲ್ಲಿ ಸಿನಿಮಾ ನೋಡಲು ಪ್ರೇಕ್ಷಕರು ಹಿಂದೆ ಮುಂದೆ ನೋಡುತ್ತಿರುವ ಸಂದರ್ಭದಲ್ಲಿ 5 ಅಡಿ 7 ಅಂಗುಲ ಚಿತ್ರ ಶತದಿನೋತ್ಸವ ಆಚರಿಸಿ ಚಿತ್ರರಂಗದ ಮುಂದಿನ ದಾರಿಗೆ ಮುನ್ನುಡಿ ಬರೆದಂತಾಗಿದೆ ಎನ್ನುವುದಂತೂ ಸತ್ಯ.

Be the first to comment

Leave a Reply

Your email address will not be published. Required fields are marked *

Translate »
error: Content is protected !!