ಡಾ.ರಾಜ್‌ಕುಮಾರ್ ಪತ್ನಿ ಪಾರ್ವತಮ್ಮ ರಾಜ್‌ಕುಮಾರ್ ಹುಟ್ಟುಹಾಕಿದ ವಜ್ರೇಶ್ವರಿ ಕಂಬೈನ್ಸ್ ಭರ್ತಿ 50 ವರ್ಷ ಪೂರೈಸಿದೆ.
ವಜ್ರೇಶ್ವರಿ ಕಂಬೈನ್ಸ್ ನಡಿ ನಿರ್ಮಾಣವಾದ ತ್ರಿಮೂರ್ತಿ ಚಿತ್ರದ ಮೂಲಕ ಶುರುವಾದ ಪಯಣದಲ್ಲಿ ಹಲವು ಸೂಪರ್ ಹಿಟ್ ಸಿನಿಮಾಗಳು ನಿರ್ಮಾಣವಾಗಿದೆ. ಈ ಬ್ಯಾನರ್ ನಡಿ ಬಂದ ಕೊನೆಯ ಚಿತ್ರ ‘ರನ್ ಆಂಟನಿ’. ವಜ್ರೇಶ್ವರಿ ಕಂಬೈನ್ಸ್ ನಡಿ ನಿರ್ಮಾಣವಾದ ಡಾ. ರಾಜ್‌ಕುಮಾರ್ ನಟನೆಯ ‘ಸಂಪತ್ತಿಗೆ ಸವಾಲ್’ ಸಿನಿಮಾ ಭರ್ಜರಿ ಯಶಸ್ಸು ಕಂಡಿತ್ತು.
ವಜ್ರೇಶ್ವರಿ ಕಂಬೈನ್ಸ್ ಜೊತೆಗೆ ಪಾರ್ವತಮ್ಮ, ಪೂರ್ಣಿಮಾ ಎಂಟರ್‌ಪ್ರೈಸಸ್, ದಾಕ್ಷಾಯಿಣಿ ಕಂಬೈನ್ಸ್ ಹೆಸರಿನಲ್ಲಿ ನಿರ್ಮಾಣ ಸಂಸ್ಥೆ ಹುಟ್ಟುಹಾಕಿದ್ದರು. ಸಂಸ್ಥೆ 50 ವರ್ಷ ಪೂರೈಸಿರುವ ಸಂಭ್ರಮದಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಸ್ಪೆಷಲ್ ಟ್ರಿಬ್ಯೂಟ್ ವೀಡಿಯೋ ಹಂಚಿಕೊಂಡಿದ್ದಾರೆ.
“ನನ್ನ 5 ಜನ ಮಕ್ಕಳು ನನಗೆ 5 ಕಣ್ಣುಗಳು ಇದ್ದ ಹಾಗೆ. 4 ಮಕ್ಕಳು ಹುಟ್ಟಿದ ಬಳಿಕ ಸಂಸ್ಥೆ ಚಿತ್ರ ನಿರ್ಮಾಣಕ್ಕೆ ಬಂದೆ. ಪುನೀತ್ 25 ದಿನದ ಮಗುವಾಗಿದ್ದಾಗ ಅವನಿಂದಲೇ ಕ್ಯಾಮರಾ ಸ್ವಿಚ್ ಆನ್ ಮಾಡಿಸಿದ್ದೆ” ಎಂದು ಸಂದರ್ಶನವೊಂದರಲ್ಲಿ ಪಾರ್ವತಮ್ಮ ರಾಜ್‌ಕುಮಾರ್ ಹೇಳಿದ್ದಾರೆ.
‘ಆನಂದ್’, ‘ಶಂಕರ್ ಗುರು’, ‘ಓಂ’, ‘ನಂಜುಂಡಿ ಕಲ್ಯಾಣ’, ‘ಅಪ್ಪು’, ‘ಆಕಾಶ್’, ‘ಅಪ್ಪು’, ‘ಮೃತ್ಯುಂಜಯ’, ‘ಯಾರೇ ಕೂಗಾಡಲಿ’, ‘ದೇವತಾ ಮನುಷ್ಯ’, ‘ಆಕಸ್ಮಿಕ’, ‘ಹಾಲು ಜೇನು’ ‘ಜೀವನಚೈತ್ರ’ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳು ವಜ್ರೇಶ್ವರಿ ಕಂಬೈನ್ಸ್ ಸಂಸ್ಥೆಯಲ್ಲಿ ನಿರ್ಮಾಣವಾಗಿತ್ತು.





Be the first to comment