ಮಲ್ಟಿಸ್ಟಾರ್ ‘45’ ಟ್ರೈಲರ್ ಔಟ್

ಸ್ಯಾಂಡಲ್‌ವುಡ್‌ನ  ಮಲ್ಟಿಸ್ಟಾರರ್ ‘ 45 ‘ಚಿತ್ರದ  ಟ್ರೈಲರ್ ಬಿಡುಗಡೆಯಾಗಿದೆ.

ರಾಜ್ಯದ ಪ್ರಮುಖ ನಗರಗಳ ಥಿಯೇಟರ್‌ಗಳಲ್ಲಿ ಒಂದೇ ಸಮಯಕ್ಕೆ ಟ್ರೈಲರ್ ಸ್ಟ್ರೀಮಿಂಗ್ ಮಾಡಲಾಗಿದೆ. ಶಿವರಾಜ್‌ಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ ತಮ್ಮ ಪಾತ್ರಗಳನ್ನು ತಮ್ಮದೇ ಶೈಲಿಯಲ್ಲಿ ಪ್ರಸ್ತುತಪಡಿಸಿರುವುದು ಟ್ರೈಲರ್‌ನಲ್ಲಿ ಸ್ಪಷ್ಟವಾಗುತ್ತದೆ. ಚಿತ್ರದಲ್ಲಿ ಇದುವರೆಗೆ ಹೆಚ್ಚು ಸ್ಪರ್ಶಿಸದ ವಿಷಯವನ್ನು ತೆರೆ ಮೇಲೆ ತರುವ ಪ್ರಯತ್ನ ಕಾಣಿಸುತ್ತದೆ.

ಉಪೇಂದ್ರ ಪಾತ್ರಕ್ಕೆ ವಿಶೇಷ ತೂಕ ನೀಡಲಾಗಿದೆ.  ಅವರ ಧ್ವನಿಯಿಂದಲೇ ಟ್ರೈಲರ್ ಆರಂಭವಾಗುತ್ತದೆ. “ಹುಟ್ಟು ಮತ್ತು ಸಾವಿನ ನಡುವೆ ಇರುವ ಆ ಚಿಕ್ಕ ಗೆರೆನೇ ಜೀವನ” ಎಂಬ ಉಪೇಂದ್ರ ಡೈಲಾಗ್ ಚಿತ್ರದ ಮೂಲ ಎಳೆಯನ್ನೇ ಬಿಚ್ಚಿಡುತ್ತದೆ. ರಾಜ್ ಬಿ ಶೆಟ್ಟಿ ಇಲ್ಲಿ ಸಿಂಪಲ್ ಕಾಮನ್ ಮ್ಯಾನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶಿವರಾಜ್‌ಕುಮಾರ್ ಅವರ ಪಾತ್ರದ ಖದರ್ ಈ ಬಾರಿ ಸಂಪೂರ್ಣ ವಿಭಿನ್ನವಾಗಿ ಮೂಡಿ ಬಂದಿದೆ. ಟ್ರೈಲರ್‌ನ ಕೊನೆಯಲ್ಲಿ ಶಿವರಾಜ್‌ಕುಮಾರ್ ಮಹಿಳಾ ಪಾತ್ರದಲ್ಲಿ ಕಾಣಿಸಿಕೊಳ್ಳುವ ಅಚ್ಚರಿಯ ಟ್ವಿಸ್ಟ್  ಇದೆ.

ಚಿತ್ರದಲ್ಲಿ ಸುಧಾರಾಣಿ   ಪ್ರಮುಖ ಪಾತ್ರದಲ್ಲಿದ್ದಾರೆ. ತಮಿಳು ಚಿತ್ರರಂಗದ ಕೆಲ ಕಲಾವಿದರ ಪರಿಚಯವೂ ಟ್ರೈಲರ್‌ನಲ್ಲಿ ನೀಡಲಾಗಿದೆ.  ಪ್ರಮೋದ್ ಶೆಟ್ಟಿ ಅವರ ಪಾತ್ರದ ಝಲಕ್  ಕಾಣಿಸುತ್ತದೆ.

‘45’ ಚಿತ್ರದ ಟ್ರೈಲರ್ ಉಪ್ಪಿ ಸಿನಿಮಾಗಳ ಥರದ ಅನುಭವ ನೀಡುತ್ತಿದ್ದು, ಪ್ರೇಕ್ಷಕರ ನಿರೀಕ್ಷೆಯನ್ನು  ಹೆಚ್ಚಿಸಿದೆ.

—-

 

Be the first to comment

Leave a Reply

Your email address will not be published. Required fields are marked *

Translate »
error: Content is protected !!