’45’ ಟೈಟಲ್ ನನ್ನದು ಎಂದ ಮಿತ್ರ

ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ನಿರ್ದೇಶನದ ಚೊಚ್ಚಲ ಚಿತ್ರ ’45’ ಸಿನಿಮಾ ದ ಟೈಟಲ್  ನನ್ನದು ಎಂದು ನಟ ಮಿತ್ರ ಹೇಳಿದ್ದಾರೆ.

‘45 ಟೈಟಲ್ ಕೊಟ್ಟಿದ್ದೇ ನಾನು. ನನ್ನ ಬ್ಯಾನರ್ ಅಡಿಯಲ್ಲಿ ಸಿನಿಮಾ ನೋಂದಣಿ ಮಾಡಿಸಿದ್ದೆ. ರಮೇಶ್ ರೆಡ್ಡಿ ಅವರು ಕರೆ ಮಾಡಿ ನಮ್ಮ ಕಥೆಗೆ ಈ ಶೀರ್ಷಿಕೆ ಹೊಂದಾಣಿಕೆ ಆಗುತ್ತಿದೆ. ಟೈಟಲ್ ಬೇಕಿತ್ತು. ಅರ್ಜುನ್ ಜನ್ಯ ನಿರ್ದೇಶನ ಇದೆ ಎಂದು ವಿವರಿಸಿ ಹಣ ನೀಡೋಕೆ ಬಂದರು. ನಾನು ಬೇಡ ಎಂದೆ. ಥ್ಯಾಂಕ್ಸ್ ಕಾರ್ಡ್ ಹಾಕ್ತಾರೆ ಅಥವಾ ಸಂದರ್ಶನದಲ್ಲಿ ಹೇಳ್ತಾರೆ ಎಂದುಕೊಂಡಿದ್ದೆ. ಕೊನೆಪಕ್ಷ ಅರ್ಜುನ್ ಜನ್ಯ ನನೆಪಿಸಿಕೊಳ್ಳುತ್ತಾರೆ ಎಂದುಕೊಂಡಿದ್ದೆ. ಆದರೆ ಏನೂ ಮಾಡಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಪ್ರೀತಿಯಿಂದ ಟೈಟಲ್ ಬಿಟ್ಟು ಕೊಟ್ಟಿದ್ದೇನೆ. ಹಣ ನಿರೀಕ್ಷಿಸಿಲ್ಲ. ಬ್ಯುಸಿ ಇಂದ ಮರೆತು ಹೋಗಿರಬಹುದು. ನಿರ್ಮಾಪಕ ರಮೇಶ್ ರೆಡ್ಡಿ. ಸೌಜನ್ಯಕ್ಕೆ ಒಮ್ಮೆ ಹೆಸರನ್ನಾದರೂ ಹೇಳಬಹುದಿತ್ತು’ ಎಂದು ಮಿತ್ರ ಹೇಳಿದ್ದಾರೆ.

ಶಿವರಾಜ್​​ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ನಟನೆಯ ‘45’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿ ಈಗ ಚಿತ್ರ ಒಟಿಟಿಗೂ ಬಂದಿದೆ. ಈಗಚಿತ್ರದ ಟೈಟಲ್ ವಿಚಾರ ಸುದ್ದಿಗೆ ಗ್ರಾಸವಾಗಿದೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!