ಕೆನಡಾದಲ್ಲಿ ‘45’ ಮುಂಗಡ ಬುಕಿಂಗ್‌ ಹೌಸ್‌ಫುಲ್

ಶಿವರಾಜ್ ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಒಟ್ಟಿಗೆ ನಟಿಸಿರುವ ‘45’ ಸಿನಿಮಾ  ಕೆನಡಾದಲ್ಲಿ ಮುಂಗಡ ಬುಕಿಂಗ್‌ ಹೌಸ್‌ಫುಲ್ ಆಗಿದೆ.

ಭಾರತದಲ್ಲಿ ಡಿಸೆಂಬರ್ 25 ರಂದು ಸಿನಿಮಾ ಬಿಡುಗಡೆ ಆಗಲಿದೆ. ಕೆನಡಾದಲ್ಲಿ ಡಿಸೆಂಬರ್ 23 ಕ್ಕೆ  ತೆರೆಗೆ ಬರಲಿದೆ. ಕ್ರಿಸ್ಮಸ್ ರಜೆಗಳ ಹಿನ್ನೆಲೆ ಕೆನಡಾದಲ್ಲಿ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ದೊರಕುವ ನಿರೀಕ್ಷೆ ಇದೆ. ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವ ಕೆನಡಾದಲ್ಲಿ ಈಗಾಗಲೇ ಟಿಕೆಟ್ ಬುಕ್ಕಿಂಗ್ ಆರಂಭವಾಗಿದ್ದು, ಮುಂಗಡ ಬುಕಿಂಗ್‌ನಲ್ಲಿಯೇ ಹಲವಾರು ಚಿತ್ರಮಂದಿರಗಳು ಹೌಸ್‌ಫುಲ್ ಆಗಿವೆ.

ಮಾನವ, ದಾನವ ಮತ್ತು ದೇವರು ಎಂಬ ತತ್ವಾಧಾರಿತ ಕಥಾಹಂದರವನ್ನು ಒಳಗೊಂಡಿರುವ ‘45’ ಸಿನಿಮಾ ವಿದೇಶಗಳಲ್ಲಿ  ಭರ್ಜರಿ ಆರಂಭ ಪಡೆಯುವ ಸೂಚನೆ ನೀಡಿದೆ. 45’ ಸಿನಿಮಾವನ್ನು ಕನ್ನಡದ ಜೊತೆಗೆ ಇತರೆ ಭಾಷೆಗಳಲ್ಲಿಯೂ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.

ಈ ಸಿನಿಮಾ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಮೊದಲ ನಿರ್ದೇಶನ ಆಗಿದ್ದು,  ಚಿತ್ರದ ಮೇಲಿನ ನಿರೀಕ್ಷೆ  ಹೆಚ್ಚಾಗಿದೆ. ಟ್ರೈಲರ್ ಈಗಾಗಲೇ ಬಿಡುಗಡೆಯಾಗಿದ್ದು, ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.  ಶಿವರಾಜ್ ಕುಮಾರ್ ಅವರ ಮೋಹಿನಿ ಅವತಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!