ಒಟಿಟಿಯಲ್ಲಿ ‘45’, ‘ಮಾರ್ಕ್’ ಒಂದೇ ದಿನ ರಿಲೀಸ್

ಸುದೀಪ್ ನಟನೆಯ ‘ಮಾರ್ಕ್’ ಮತ್ತು ಶಿವರಾಜ್‌ಕುಮಾರ್, ರಾಜ್ ಬಿ ಶೆಟ್ಟಿ, ಉಪೇಂದ್ರ ಅಭಿನಯದ ’45’ ಚಿತ್ರಗಳು ಒಟಿಟಿಯಲ್ಲಿ ಒಂದೇ ದಿನ ರಿಲೀಸ್ ಆಗುತ್ತಿವೆ.

45’ ಹಾಗೂ ‘ಮಾರ್ಕ್’  ಒಂದೇ ದಿನ ಥಿಯೇಟರ್​​​ನಲ್ಲಿ ರಿಲೀಸ್ ಆಗಿದ್ದವು. ವಿಶೇಷ ಎಂದರೆ ಜನವರಿ 23ರಿಂದ  ಒಂದೇ ದಿನ ಈ ಚಿತ್ರಗಳು ಒಟಿಟಿಯಲ್ಲಿ ಪ್ರಸಾರ ಆರಂಭಿಸಲಿವೆ.

‘ಮಾರ್ಕ್’ ಚಿತ್ರ ಬಾಕ್ಸ್ ಆಫೀಸ್​​​ನಲ್ಲಿ 50 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಈ ಸಿನಿಮಾ  ತಮಿಳಿನಲ್ಲೂ ತೆರೆಗೆ ಬಂತು.   ‘ಮ್ಯಾಕ್ಸ್’ ಶೇಡ್​​ನಲ್ಲೇ ಬಂದ ಈ ಚಿತ್ರವನ್ನು ವಿಜಯ್ ಕಾರ್ತಿಕೇಯ ನಿರ್ದೇಶನ ಮಾಡಿದ್ದಾರೆ.

‘ಮಾರ್ಕ್​’ ಸಿನಿಮಾದಲ್ಲಿ ಸುದೀಪ್  ಪೊಲೀಸ್ ಪಾತ್ರ ಮಾಡಿದ್ದಾರೆ. ಎರಡು ದಿನಗಳಲ್ಲಿ ನಡೆಯುವ ಕಥೆಯನ್ನು ಸಿನಿಮಾ ಹೊಂದಿದೆ. ಥಿಯೇಟರ್​​​ನಲ್ಲಿ ಸಿನಿಮಾ ಮಿಸ್ ಮಾಡಿಕೊಂಡವರು ಜಿಯೋ ಹಾಟ್​​ಸ್ಟಾರ್ ನಲ್ಲಿ ಜನವರಿ 23ರಿಂದ ಸಿನಿಮಾ ವೀಕ್ಷಿಸಬಹುದಾಗಿದೆ.

ಶಿವರಾಜ್​​ಕುಮಾರ್, ರಾಜ್​ ಬಿ ಶೆಟ್ಟಿ ಹಾಗೂ ಉಪೇಂದ್ರ ನಟನೆಯ ‘45’ ಚಿತ್ರವನ್ನುಸಂಗೀತ ಸಂಯೋಜಕ ಅರ್ಜುನ್ ಜನ್ಯ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಗರುಡ ಪುರಾಣದ ಕಥೆಯನ್ನು ಹೇಳಲಾಗಿದೆ. ಈ ಚಿತ್ರ ಒಂದು ವರ್ಗದ ಜನರಿಗೆ ಇಷ್ಟ ಆಗಿದೆ. ಒಟಿಟಿಯಲ್ಲಿ ಹೇಗೆ ಗಮನ ಸೆಳೆಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!