400ರ ಸಂಚಿಕೆಯ ಸಂಭ್ರಮದಲ್ಲಿ “ಜೋಜೋ ಲಾಲಿ”

ಉದಯ ಟಿವಿ 24 ವರ್ಷಗಳಿಂದ ಪ್ರೇಕ್ಷಕರನ್ನುರಂಜಿಸುತ್ತಿದೆ. ವಿಭಿನ್ನ ಧಾರಾವಾಹಿಗಳಿಂದ ಜನಮಾನಸದಲ್ಲಿ ನೆಲೆಮಾಡಿದೆ. ಜೈ ಹನುಮಾನ್, ಬ್ರಹ್ಮಾಸ್ತ್ರ, ಕಣ್ಮಣಿ, ಕಾವೇರಿ, ಮಾನಸ ಸರೋವರ, ಮಾಯಾ, ನಂದಿನಿ, ಹೀಗೆ ಸಾಲು ಸಾಲು ಜನಪ್ರಿಯ ಧಾರಾವಾಹಿಗಳನ್ನ ನೀಡುತ್ತಾ ಮುನ್ನಡೆಯುತ್ತಿದೆ. ಅದರ ಪಟ್ಟಿಯಲ್ಲಿರೋ ಮತ್ತೊಂದುಧಾರಾವಾಹಿಜೋಜೋ ಲಾಲಿಇಂದು 400 ಸಂಚಿಕೆಗಳನ್ನ ಪೂರೈಸಿದೆ. ಹೆಸರೇ ಹೇಳೋ ಹಾಗೆ ಇದುತಾಯಿ ಮಗುವಿನ ಬಾಂಧವ್ಯದಕಥೆ. ಬಾಡಿಗೆತಾಯಿಯಿಂದ ಮಗುವನ್ನ ಪಡೆದುಕೊಳ್ಳುವ ದಂಪತಿಗಳು. ಮುಂದೆಅವರ ಬದುಕಲ್ಲಿ ಆಗುವ ಘಟನೆಗಳೇ ಜೋಜೋ ಲಾಲಿಯಕಥಾ ಸಾರಾಂಶ.ರುಕ್ಮಿಣಿ ಮಾಧವಆದರ್ಶ ದಂಪತಿಗಳು. ಅವರ ಬದುಕನ್ನ ಸರ್ವನಾಶ ಮಾಡುವ ಪಣತೊಟ್ಟು ನಿಂತೋಳು ರುಕ್ಮಿಣಿಅತ್ತಿಗೆ ಮಹೇಶ್ವರಿ. ಸನ್ನಿವೇಶಗಳ ಬಂದಿಯಾಗಿರಾಧಾ ಬಾಡಿಗೆತಾಯಿ ಆಗುತ್ತಾಳೆ. ತನ್ನ ಮಗು ರುಕ್ಮಿಣಿ ಮಡಿಲಲ್ಲಿರೋದುಗೊತ್ತಾಗಿ, ಮಗುವಿನ ವ್ಯಾಮೋಹದಿಂದಅವರ ಮನೆಯಲ್ಲೆ ಉಳಿದುಕೊಳ್ಳುತ್ತಾಳೆ. ಎಲ್ಲಾ ಸರಿಯಿದೆಅನ್ನುವಾಗಲೇ, ರಾಧಾಳನ್ನ ಅಸ್ತ್ರವಾಗಿಸಿಕೊಂಡು ಕಟ್ಟುಕಥೆಕಟ್ಟಿರುಕ್ಮಿಣಿ ಮಾಧವನ ಸಂಬಂಧವನ್ನ ಮುರಿಯುತ್ತಾಳೆ. ರಾಧಾ ಮಾಧವನ ನಡುವೆಅಕ್ರಮ ಸಂಬಂಧವಿದೆಯೆಂದು ನಂಬುವ ರುಕ್ಮಿಣಿ ಮಾಧವನಿಗೆ ವಿಚ್ಛೇಧನ ಪತ್ರ ಕಳಿಸುತ್ತಾಳೆ. ರುಕ್ಮಿಣಿ ಮಾಧವಒಂದಾಗುತ್ತಾರಾ?: ಬಾಡಿಗೆತಾಯಿಯಾದರಾಧಾತ್ಯಾಗಕ್ಕೆ ಬೆಲೆ ಸಿಗುತ್ತಾ? ವಂಚಿಕೆ ಮಹೇಶ್ವರಿ ಮೋಸಕ್ಕೆ ತೆರೆ ಬೀಳುತ್ತಾ? ಇವೆಲ್ಲದಕ್ಕೂಉತ್ತರಜೋಜೋ ಲಾಲಿಯ ಮುಂದಿನ ಸಂಚಿಕೆಗಳು ನೀಡಲಿವೆ.

ರುಕ್ಮಿಣಿ ಮಾಧವ ಏಕೆ ದೂರವಾದ್ರು? ಮಾಧವನ್ನ ನೋಡಿದ್ರೆ ಪಾಪ ಅನ್ನಿಸುತ್ತೆಅಂತ ಹಲವಾರುಜನ ಹೇಳೋದು ಕೇಳಿ ಖುಷಿಯಾಗುತ್ತೆ , ಸಾರ್ಥಕತೆಯ ಭಾವ ಮೂಡುತ್ತೆ ‘’ ಅನ್ನುತ್ತಾರೆಜೋಜೋಧಾರಾವಾಹಿಯ ನಾಯಕ ನಾರಾಯಣಸ್ವಾಮಿ. ‘ಮುಂಚೆ ಮಗುವಿಗಾಗಿ ಅಳುತ್ತಿದ್ದೆ, ಈಗ ಮಗು ಮತ್ತೆ ಮಾಧವನಿಗೋಸ್ಕರ ಅಳುತ್ತಿದ್ದೀನಿ ಎನ್ನುತ್ತಾರೆರುಕ್ಮಿಣಿ ಪಾತ್ರಧಾರಿಜ್ಯೋತಿರೈ.

ರಾಧಾಅನ್ನೋ ಪಾತ್ರವೇ ಬಹಳ ವಿಶೇಷ ನನಗೆ. ಅವಳು ಮಾಡುವತ್ಯಾಗ, ಅವಳ ತಾಳ್ಮೆ , ಅವಳ ಛಲ ಎಲ್ಲವೂ ವಿಶೇಷ , ಪಾತ್ರ ಮಾಡಿರೋದಕ್ಕೆ ಬಹಳ ತೃಪ್ತಿ ನನಗೆ ಸಿಕ್ಕಿದೇಎನ್ನುತ್ತಾರೆರಾಧಾ ಪತ್ರ ವಹಿಸಿರೋ ನಯನಾ ಶೆಟ್ಟಿ. ಮೊದಲ ಎಪಿಸೋಡ್ ನಿಂದಲೂ ಧಾರಾವಾಹಿಗೆ ಬರೋಯೋದುಒಂದುರೀತಿಯ ಖುಷಿ, ತಾಯಿ ಮಗುವಿನ ಸಂಬಂಧದದಧಾರಾವಾಹಿ, ಬರೀ ಭಾವನಾತ್ಮಕ ಮತ್ತು ವಿಷಾದದ ಮಾತುಗಳನ್ನೇ ಬರಿಬೇಕೇನೋಅಂದ್ಕೊಂಡೆಆದರೆ, ಪ್ರೀತಿಯ ಎಳೆ, ಭಗ್ನ ಪ್ರೇಮ, ದ್ವೇಷದತಾಪವೊಂದೆಡೆ, ಮಗು ಮತ್ತುತಾಯಿಯ ಮಮತೆಯ ಮಾತುಗಳು ಎಲ್ಲದ ವಿಭಾಗದಲ್ಲೂ ಬರೆಯಲೂ ಅವಕಾಶ ಮಾಡಿಕೊಡ್ತುಜೋಜೋ ಲಾಲಿ ಎನ್ನುತ್ತಾರೆ ‘’ ಚೈತ್ರಿಕಾಹೆಗಡೆ , ಬರಹಾಗಾರರು. ಯಾವುದೇಧಾರಾವಾಹಿ ಆದರೂ, ಕೂತೂಹಲ ಮೂಡಿಸೊಕಥೆ ಬಹಳ ಮುಖ್ಯ ಮಾಧವರುಕ್ಮಿಣಿಗೆಯಾಕಿಷ್ಟುಕಾಟಕೊಡ್ತಿರಾಅನ್ನೋ ಪ್ರಶ್ನೆಗೆ ‘’ ಮುಂದಿನ ತಿರುವುಗಳು ಎಲ್ಲದಕ್ಕೂಉತ್ತರಅಂತ ನಸು ನಕ್ಕು ಹೇಳುತ್ತಾರೆ ಶೇಖರ್, ಜೋಜೋ ಲಾಲಿಯಕಥೆಗಾರರುಒಳ್ಳೆಯದಿದ್ದ ಮೇಲೆ ಕೆಟ್ಟದ್ದುಇರಲೇಬೇಕು ,ಒಮ್ಮೊಮ್ಮೆ ಮಹೇಶ್ವರಿಅಟ್ಟಹಾಸ ನನಗೆ ಸಿಟ್ಟು ತರುತ್ತೆ, ಅಷ್ಟು ಹತ್ತಿರವಾಗಿದೆ ಧಾರಾವಾಹಿ ನನಗೆ ಅಂತ ಹೇಳುತ್ತಾರೆ ಶ್ರೀ ನಿವಾಸ್ , ಜೋಜೋ ನಿರ್ದೆಶಕರು . ಪ್ರೇಕ್ಷಕರನ್ನ ಸೆರೆಹಿಡಿದು, 400 ಕಂತುಗಳನ್ನ ಪೂರೈಸಿ ಮುನ್ನುಗುತ್ತಿದೆಜೋಜೋ ಲಾಲಿ, ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6:30ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತೆ

This Article Has 1 Comment
  1. Pingback: Agile DevOps

Leave a Reply

Your email address will not be published. Required fields are marked *

Translate »
error: Content is protected !!