ಚಿತ್ರ: 4 ಎನ್ 6
ನಿರ್ದೇಶನ: ದರ್ಶನ್ ಶ್ರೀನಿವಾಸ್
ನಿರ್ಮಾಣ: ಸಾಯಿ ಪ್ರೀತಿ
ತಾರಾಗಣ: ರಚನಾ ಇಂದರ್, ಭವಾನಿ ಪ್ರಕಾಶ್, ನವೀನ್ ಕುಮಾರ್, ಆದ್ಯ ಶೇಖರ್, ಅರ್ಜುನ್ ಇತರರು
ರೇಟಿಂಗ್: 3.5/5
ಕೆಲವೊಂದು ದಂದೆಕೋರ ಡಾಕ್ಟರ್ ಗಳ ಕೊಲೆಯ ಹಿಂದಿನ ಸತ್ಯ ಅನಾವರಣ ಮಾಡುವ ಚಿತ್ರ 4 ಎನ್ 6.
ಈ ವಾರ ತೆರೆಯ ಮೇಲೆ ಬಂದಿರುವ 4 ಎನ್ 6 ಚಿತ್ರದಲ್ಲಿ ಸಸ್ಪೆನ್ಸ್, ಥ್ರಿಲ್ಲರ್ ಜೊತೆಗೆ ಕೊಲೆ ಭೇದಿಸುವ ತನಿಖೆಯ ಕಥೆ ಇದೆ. ಸಸ್ಪೆನ್ಸ್ ಚಿತ್ರಗಳನ್ನು ನೋಡುವವರಿಗೆ ಇದು ಖುಷಿ ನೀಡುತ್ತದೆ.
ನೈಶ ಪಾತ್ರಧಾರಿ ರಚನಾ ಇಂದರ್ ಸಿನಿಮಾದಲ್ಲಿ ಫೋರೆನ್ಸಿಕ್ ಡಿಟೆಕ್ಟಿವ್ ಆಗಿ ಕಾಣಿಸಿಕೊಂಡಿದ್ದಾರೆ. ಡಾಕ್ಟರ್ ಒಬ್ಬರ ಕೊಲೆಯ ಸುತ್ತ ನಡೆಯುವ ಘಟನೆಯನ್ನು ರಚನಾ ತಮ್ಮ ಮನಸ್ಸಿನ ಆಲೋಚನೆಯ ದೃಷ್ಟಿಕೋನದಿಂದ ಕೇಸ್ ಪತ್ತೆ ಹಚ್ಚಲು ಮುಂದಾಗುತ್ತಾರೆ.
ಸಾಲು ಸಾಲು ನಡೆಯುವ ಮೂರು ಕೊಲೆ ಕೇಸ್ ಗಳ ಹಿಂದೆ ಫ್ಲಾಶ್ ಬ್ಯಾಕ್ ಕತೆ ತೆರೆದುಕೊಳ್ಳುತ್ತದೆ. ಮಗನ ಚಿಕಿತ್ಸೆಗೆ ತಾಯಿ ಪಡುವ ಕಷ್ಟ, ಡಾಕ್ಟರ್ ಗಳು ಮಾಡುವ ಅವಾಂತರ ಹೀಗೆ ಒಂದಷ್ಟು ದುರಂತಗಳು ಚಿತ್ರದಲ್ಲಿ ಕಾಣಿಸಿಕೊಳ್ಳುತ್ತವೆ. ಇಲ್ಲಿ ಕೊಲೆ ಮಾಡಿದ್ದು ಯಾರು? ಇದರ ಕ್ಲೈಮ್ಯಾಕ್ಸ್ ಏನು ಎನ್ನುವುದಕ್ಕೆ ಚಿತ್ರಮಂದಿರದಲ್ಲಿ ಚಿತ್ರ ನೋಡಬೇಕು.
ನಿರ್ದೇಶಕ ದರ್ಶನ್ ಶ್ರೀನಿವಾಸ್ ಅವರು ಮರ್ಡರ್ ಮಿಸ್ಟರಿಯ ಇನ್ವೆಸ್ಟಿಗೇಷನ್ ಥ್ರಿಲ್ಲರ್ ಕಥೆಯನ್ನು ಕಥಾವಸ್ತು ಮಾಡಿಕೊಂಡಿರುವುದು ಹೊಸ ಅನುಭವ ನೀಡುತ್ತದೆ. ನಿರ್ದೇಶಕರು ಚಿತ್ರಕಥೆಯನ್ನು ಇನ್ನಷ್ಟು ಕುತೂಹಲಕಾರಿಯಾಗಿ ತೋರಿಸಿದ್ದರೆ ಪ್ರೇಕ್ಷಕರಿಗೆ ಇನ್ನಷ್ಟು ರೋಚಕತೆ ಉಂಟಾಗುತ್ತಿತ್ತು.
ರಚನಾ ಇಂದರ್ ಅವರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸ್ ಇನ್ಸ್ಪೆಕ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಭವಾನಿ ಶಂಕರ್ ಖದರ್ ಆಗಿದ್ದಾರೆ. ನವೀನ್ ಕುಮಾರ್ ಹಾಗೂ ಆದ್ಯಶೇಖರ್ ನಮ್ಮ ಪಾತ್ರಕ್ಕೆ ಜೀವ ತುಂಬುವ ಯತ್ನ ಮಾಡಿದ್ದಾರೆ.
ಶರಣ್ ತೇಜ್ ಅವರ ಛಾಯಾಗ್ರಹಣ, ಸಾಯಿ ಸೋಮೇಶ್ ರವರ ಸಂಗೀತ ಚಿತ್ರಕ್ಕೆ ಪೂರಕವಾಗಿ ಮೂಡಿ ಬಂದಿದೆ.
ಸಸ್ಪೆನ್ಸ್, ಮರ್ಡರ್ ಮಿಸ್ಟ್ರಿ ಕಥೆಗಳನ್ನು ಇಷ್ಟಪಡುವವರಿಗೆ ಈ ಚಿತ್ರವನ್ನು ನೋಡಲು ಅಡ್ಡಿಯಿಲ್ಲ ಎಂದು ಹೇಳಬಹುದು.
___
Be the first to comment