3 Devi Movie Review : ನಿಗೂಢ ಕಾಡಿನಲ್ಲಿ ತ್ರಿದೇವಿಯರ ಸಾಹಸ

ಚಿತ್ರ: ತ್ರಿದೇವಿ

ನಿರ್ದೇಶನ: ಅಶ್ವಿನ್ ಎ ಮ್ಯಾಥ್ಯೂ
ತಾರಾ ಬಳಗ: ಶುಭಾ ಪೂಂಜಾ, ಜೋಸ್ನಾ, ಸಂಧ್ಯಾ, ಜೈದೇವ್ ಇತರರು

ರೇಟಿಂಗ್: 3.5/5

ಕಾಡಿನೊಳಗೆ ಮೂರು ಯುವತಿಯರು ಪ್ರವೇಶಿಸಿದಾಗ ಸಮಸ್ಯೆಗೆ ಸಿಲುಕಿ ಅಲ್ಲಿಂದ ಹೇಗೆ ಪಾರಾಗುತ್ತಾರೆ ಎನ್ನುವ ಥ್ರಿಲ್ಲರ್, ಸಸ್ಪೆನ್ಸ್, ಹಾರರ್ ಚಿತ್ರ ತ್ರಿದೇವಿ.

ಇದೊಂದು ಸಂಪೂರ್ಣ ಮಹಿಳಾ ಪ್ರಧಾನ ಚಿತ್ರ ಆಗಿದೆ. ಸಿನಿಮಾದ ನಾಯಕಿ, ಸಹ ನಿರ್ದೇಶಕಿ, ಮದುವೆ ಆಗಲು ಸಿದ್ಧವಾದ ಯುವತಿಯರು ತಮ್ಮ ಜೀವನದಲ್ಲಿ ಎದುರಾದ ಸಮಸ್ಯೆಗಳನ್ನು ಮೆಟ್ಟಿ ನಿಲ್ಲಲು ಮನೆ ಬಿಟ್ಟು ಹೊರ ಬರುತ್ತಾರೆ. ಬಳಿಕ ಅವರು ಕಾಡಿನೊಳಗೆ ಪ್ರವೇಶಿಸುತ್ತಾರೆ. ಕಾಡಿನಲ್ಲಿ ಹೆಣ್ಣು ಹುಲಿಯ ಆತ್ಮ ಸುತ್ತಾಡುತ್ತಿದ್ದು ಅದು ಅಲ್ಲಿಗೆ ಬಂದವರನ್ನು ಬಲಿ ಪಡೆಯುತ್ತದೆ ಎನ್ನುವ ಸುದ್ದಿ ಹರಡಿರುತ್ತದೆ. ಕಾಡಿಗೆ ಬಂದ ಯುವತಿಯರು ಯಾವ ರೀತಿ ಸಮಸ್ಯೆಯಿಂದ ಪಾರಾದರು ಎನ್ನುವುದು ಚಿತ್ರದ ಕಥೆ ಆಗಿದೆ.

ಚಿತ್ರವನ್ನು ನಿರ್ದೇಶಕರು ಮನರಂಜನಾತ್ಮಕವಾಗಿ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಇದೊಂದು ಅಪರೂಪದ ಪ್ರಯತ್ನವಾಗಿ ಕಾಣುತ್ತದೆ.

ನಾಯಕಿಯರ ಪಾತ್ರದಲ್ಲಿ ನಡೆಸಿರುವ ಶುಭ ಪೂಂಜಾ, ಜೋಸ್ನಾ ರಾವ್, ಸಂಧ್ಯಾ ಲಕ್ಷ್ಮಿ ನಾರಾಯಣ ಅವರು ತಮ್ಮ ಪಾತ್ರಗಳಲ್ಲಿ ಮಿಂಚಿದ್ದಾರೆ. ಶುಭಾ ಕೆಲವೊಂದು ಬಾರಿ ದೇವಿಯಂತೆ ಕಾಣಿಸುತ್ತಾರೆ. ಅವರು ಸಾಹಸಮಯ ಸನ್ನಿವೇಶದಲ್ಲಿ ಗಮನ ಸೆಳೆದಿದ್ದಾರೆ.

ಚಿತ್ರದ ಎಲ್ಲಾ ಕಲಾವಿದರು ತಮ್ಮ ಪಾತ್ರಕ್ಕೆ ಜೀವ ತುಂಬುವ ಮೂಲಕ ಭೇಷ್ ಎನಿಸಿಕೊಂಡಿದ್ದಾರೆ. ಚಿತ್ರದ ಹಿನ್ನೆಲೆ ಸಂಗೀತ, ಛಾಯಾಗ್ರಹಣ ಚೆನ್ನಾಗಿದೆ. ಚಿತ್ರಮಂದಿರಕ್ಕೆ ಮನೆ ಮಂದಿಯೆಲ್ಲ ಒಟ್ಟಾಗಿ ಹೋಗಿ ಮನರಂಜನೆ ಸವಿಯುವಂತೆ ಚಿತ್ರ ಮೂಡಿ ಬಂದಿದೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!