ಲೂಸ್ ಮಾದ ಯೋಗೇಶ್ ಅಭಿನಯದ “ಲಂಕೆ” ಚಿತ್ರ ಇಪ್ಪತ್ತೈದು ದಿನಗಳನ್ನು ಪೂರೈಸಿ, ಐವತ್ತನೇ ದಿನದತ್ತ ದಾಪುಗಾಲಿಡುತ್ತಿದೆ. ಈ ಸಂತಸವನ್ನು ಹಂಚಿಕೊಳ್ಳಲು ಚಿತ್ರತಂಡ ಮಾಧ್ಯಮಗೋಷ್ಠಿ ಏರ್ಪಡಿಸಿತ್ತು.
ನನ್ನ ಚಿತ್ರ ಬಿಡುಗಡೆಯ ಸಮಯದಲ್ಲಿ ಕೆಲವರು ಇದು ಒಂದುವಾರದ ಸಿನಿಮಾ ಎಂದಿದ್ದರು. ಅವರಿಗೆ ಉತ್ತರವಾಗಿ “ಲಂಕೆ” ಇಪ್ಪತ್ತೈದು ದಿನಗಳನ್ನು ಪೂರೈಸಿದೆ. ಐವತ್ತರ ಸಂಭ್ರಮವೂ ಹತ್ತಿರದಲ್ಲಿದೆ. ನಿರ್ಮಾಪಕರಿಗೆ ಹಾಕಿದ ಹಣ ಬಂದಿದೆ. ಲಾಭ ಬರುವ ನಿರೀಕ್ಷೆ ಇದೆ. ತೆಲುಗಿನ ಖ್ಯಾತನಾಮರೊಬ್ಬರು “ಲಂಕೆ”ಯ ರಿಮೇಕ್ ಹಕ್ಕು ಪಡೆದುಕೊಂಡಿದ್ದಾರೆ. ಆ ಕುರಿತು ಹೆಚ್ಚಿನ ಮಾಹಿತಿ ಮುಂದಿನ ದಿನಗಳಲ್ಲಿ ನೀಡುತ್ತೇನೆ. ನನ್ನ ಹಾಗೂ ಯೋಗಿ ಕಾಂಬಿನೇಶನ್ ನಲ್ಲಿ ನೂತನ ಚಿತ್ರ ಸಹ ಸದ್ಯದಲ್ಲೇ ಆರಂಭವಾಗಲಿದೆ. ಚಿತ್ರ ಯಶಸ್ಸಿಗೆ ಕಾರಣರಾದ ನನ್ನ ಇಡೀ ತಂಡಕ್ಕೆ, ಮಾಧ್ಯಮದವರಿಗೆ ಹಾಗೂ ಕನ್ನಡ ಕಲಾರಸಿಕರಿಗೆ ನನ್ನ ತಂಬು ಹೃದಯದ ಧನ್ಯವಾದ ಎಂದರು ನಿರ್ದೇಶಕ ರಾಮಪ್ರಸಾದ್.
ಶೇಕಡಾ ಐವತ್ತರಷ್ಟು ಚಿತ್ರಮಂದಿರಗಳಲ್ಲಿ ಭರ್ತಿಗೆ ಅವಕಾಶವಿದ್ದಾಗ ನಮ್ಮ ಚಿತ್ರ ಬಿಡುಗಡೆಯಾಯಿತು. ಯಾರು ಏನೇ ಹೇಳಿದರು, ನಮ್ಮ ಚಿತ್ರ ಗೆದ್ದೇ ಗೆಲ್ಲುತ್ತದೆ ಎಂಬ ವಿಶ್ವಾಸದಿಂದ ಚಿತ್ರ ಬಿಡುಗಡೆ ಮಾಡಿದ ನಿರ್ದೇಶಕರ ಧೈರ್ಯ ಮೆಚ್ಚಲೇಬೇಕು. ನಮ್ಮ ಚಿತ್ರಕ್ಕೆ ಅಭಿಮಾನಿಗಳು ನೀಡುತ್ತಿರುವ ಪ್ರೋತ್ಸಾಹಕ್ಕೆ ಹೃದಯ ತುಂಬಿ ಬಂದಿದೆ. ಸುಚೀಂದ್ರ ಪ್ರಸಾದ್ ಅವರಂತಹ ನಟರೊಂದಿಗೆ ನಟಿಸಿದ್ದು ಸಂತಸ ತಂದಿದೆ.. ನಮ್ಮ ಚಿತ್ರ ಇನ್ನೂ ಹೆಚ್ಚು ದಿನಗಳ ಕಾಲ ಓಡುವ ಭರವಸೆ ಇದೆ. ಎಲ್ಲರಿಗೂ ಧನ್ಯವಾದ ಎಂದರು ನಾಯಕ ಲೂಸ್ ಮಾದ ಯೋಗಿ.
ನಾನು ಕೆಲವು ಪತ್ರಿಕಾಗೋಷ್ಠಿಗಳಲ್ಲಿ ಅನಿವಾರ್ಯ ಕಾರಣದಿಂದ ಪಾಲ್ಗೊಳ್ಳಲು ಆಗಿರಲಿಲ್ಲ. ಈ ಸಂದರ್ಭದಲ್ಲಿ ಚಿತ್ರವೊಂದು ಇಪ್ಪತ್ತೈದು ದಿನ ಪೂರೈಸಿ ಮುನ್ನಡೆಯುತ್ತಿರುವು ಖುಷಿಯ ವಿಚಾರವೆಂದರು ನಟಿ ಕಾವ್ಯ ಶೆಟ್ಟಿ.
ನಿರ್ದೇಶಕ ರಾಮಪ್ರಸಾದ್ ನಿರ್ದೇಶನದ ಎಲ್ಲಾ ಚಿತ್ರಗಳಲ್ಲೂ ನಟಿಸಿದ್ದೇನೆ. ಆತ ಬಳಸಿಕೊಳ್ಳುವ ಮಾಧ್ಯಮ ವಿಶೇಷವಾಗಿರುತ್ತದೆ. ಯೋಗಿ, ಕಾವ್ಯ ಶೆಟ್ಟಿ ಅವರೊಂದಿಗೆ ಕೆಲವು ಚಿತ್ರಗಳಲ್ಲಿ ಈ ಹಿಂದೆ ನಟಿಸಿದ್ದೇನೆ. ಇದರಲ್ಲೂ ನಟಿಸಿದ್ದೇನೆ. ಈ ಸಂದರ್ಭಕ್ಕೆ “ಲಂಕೆ” ಯ ಗೆಲುವು ನಿಜಕ್ಕೂ ಖುಷಿ ತಂದಿದೆ ಎಂದರು ನಟ ಸುಚೀಂದ್ರ ಪ್ರಸಾದ್.
ಕಥೆ ಕೇಳಿದಾಗ ತುಂಬಾ ಹಿಡಿಸಿತು. ಹಾಗಾಗಿ ಪಾತ್ರ ಒಪ್ಪಿಕೊಂಡೆ. ನನ್ನ ಪಾತ್ರಕ್ಕೆ ಉತ್ತಮ ಮನ್ನಣೆ ದೊರೆತಿದೆ. ಇಂತಹ ಪಾತ್ರ ಕೊಟ್ಟ ನಿರ್ದೇಶಕರಿಗೆ ಆಭಾರಿ ಎಂದರು ಎಸ್ಟರ್ ನರೋನ.
ಚಿತ್ರದ ನಿರ್ಮಾಪಕರಾದ ಸುರೇಖ ರಾಮಪ್ರಸಾದ್ ಹಾಗೂ ಪಟೇಲ್ ಶ್ರೀನಿವಾಸ್ ಅವರ ಸಹೋದರ ಪಟೇಲ್ ನಂಜುಂಡ ಸ್ವಾಮಿ. ಸಂಕಲನಕಾರ ಶಿವರಾಜ್ ಮೇಹು, ಚಿತ್ರದಲ್ಲಿ ನಟಿಸಿರುವ ಸಂಗಮೇಶ್ ಉಪಾಸೆ, ಜಗದೀಶ್ ಕೊಪ್ಪ ಹಾಗೂ ಬೇಬಿ ಜನ್ಯ ತಮ್ಮ ಸಂತಸವನ್ನು ಮಾತಿನ ಮೂಲಕ ಮಾಧ್ಯಮದ ಮುಂದೆ ಹಂಚಿಕೊಂಡರು.
Be the first to comment