2025 ಮುಗಿಯುತ್ತಾ ಬರುತ್ತಿದ್ದು, ಕನ್ನಡ ಚಿತ್ರರಂಗದಲ್ಲಿ ಹಲವು ನಟಿಯರು ನಟನೆಯಲ್ಲಿ ಮಿಂಚಿ ಗಮನ ಸೆಳೆಯುವ ಯತ್ನ ಮಾಡಿದ್ದಾರೆ.
ಮೌನ ನಿರೀಕ್ಷಿತ ಪೆನ್ ಇಂಡಿಯಾ ಚಿತ್ರ ಕಾಂತರಾ 1ರಲ್ಲಿ ಕನಕವತಿ ಪಾತ್ರದಲ್ಲಿ ನಟಿಸಿದ ರುಕ್ಮಿಣಿ ವಸಂತ್ ಈ ವರ್ಷ ಟಾಪ್ ನಟಿ ಆಗಿ ಕರೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಇವರು ತಮಿಳಿನಲ್ಲಿ ಶಿವ ಕಾರ್ತಿಕೇಯನ್ ಜೊತೆಗೆ ಮದ್ರಾಸಿ, ವಿಜಯ್ ಸೇತುಪತಿ ಜೊತೆಗೆ ಆಸೆ ಚಿತ್ರಗಳಲ್ಲೂ ನಟಿಸಿ ಗಮನ ಸೆಳೆದಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಜೊತೆಗಿನ ಟಾಕ್ಸಿಕ್ ಚಿತ್ರ ಮುಂದಿನ ವರ್ಷ ತೆರೆಗೆ ಬರಲಿದೆ.
ಮಹಾನಟಿ ರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಬಂದ ಪ್ರಿಯಾಂಕ ಆಚಾರ್, ರಕ್ಷಿತಾ ಸಹೋದರ ರಾಣಾಗೆ ನಾಯಕನಾಗಿ ಏಳುಮಲೆ ಚಿತ್ರದಲ್ಲಿ ಪಾದಾರ್ಪಣೆ ಮಾಡಿದರು. ಈ ಮೂಲಕ ಅವರು ಭರವಸೆಯ ನಟಿ ಎನಿಸಿಕೊಂಡಿದ್ದಾರೆ.
2025ರ ಸೂಪರ್ ಹಿಟ್ ಚಿತ್ರ ಸೂ ಫ್ರಂ ಸೋ ಮೂಲಕ ಗಮನ ಸೆಳೆದವರು ಸಂಧ್ಯಾ ಅರಕೆರೆ. ರಂಗಭೂಮಿ ಹಿನ್ನೆಲೆಯ ಇವರು ತಮ್ಮ ಸಹಜ ನಟನೆಯ ಮೂಲಕ ಪ್ರೇಕ್ಷಕರಿಗೆ ಇಷ್ಟವಾಗಿದ್ದಾರೆ. ಕಣ್ಣಲ್ಲೇ ಮಾತನಾಡುವ ಸ್ವಭಾವ ಇರುವ ಇವರು ಭಾವ ಪ್ರಧಾನ ನಟನೆಯ ಮೂಲಕ ಗಮನ ಸೆಳೆದಿದ್ದಾರೆ.
ಎಕ್ಕ ಚಿತ್ರದ ಸಹಜ ಅಭಿನಯದಿಂದ ಗಮನಸೆಳೆದವರು ಸಂಪದಾ ಹುಲಿವಾನ. ಮುಂದಿನ ವರ್ಷ ಇವರು ನಟಿಸಿರುವ ಕರಾವಳಿ ಚಿತ್ರ ಬಿಡುಗಡೆ ಆಗಲಿದೆ. ಭರವಸೆಯ ನಟಿಯಾಗುವ ಎಲ್ಲಾ ಲಕ್ಷಣಗಳು ಇವರಲ್ಲಿ ಕಾಣುತ್ತಿದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ದಿ ಡೆವಿಲ್ ಚಿತ್ರದ ಮೂಲಕ ಹಿರಿತೆರೆಯಲ್ಲಿ ಮಿಂಚಿದವರು ರಚನಾ ರೈ. ಸ್ಟಾರ್ ನಟ, ಬಿಗ್ ಬಜೆಟ್ ನಡುವೆಯೂ ಇವರ ಪಾತ್ರಕ್ಕೆ ಮನ್ನಣೆ ಸಿಕ್ಕಿರುವುದು ಅವರ ಅಭಿನಯದಿಂದ. ಮುಂದೆ ಇವರು ಕನ್ನಡ ಚಿತ್ರರಂಗದಲ್ಲಿ ಮಿಂಚುವ ಎಲ್ಲಾ ಲಕ್ಷಣಗಳು ಇವೆ.
ಉಳಿದಂತೆ ಈ ವರ್ಷ ತೆರೆಗೆ ಬಂದ ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ, ಮಾರುತ ಚಿತ್ರಗಳ ನಾಯಕಿ ಬೃಂದಾ ಆಚಾರ್ಯ, ಜೂನಿಯರ್ ಚಿತ್ರದಲ್ಲಿ ಕಾಣಿಸಿಕೊಂಡ ಶ್ರೀಲೀಲಾ, ಮಾದೇವ ಚಿತ್ರದ ನಟಿ ಸೋನಾಲ್ ಮೊಂತೋರೋ, ಬಿಳಿ ಚುಕ್ಕಿ ಹಳ್ಳಿಹಕ್ಕಿ ಚಿತ್ರದ ಕಾಜಲ್ ಕುಂದರ್, ಎಕ್ಕ ಚಿತ್ರದ ಸಂಜನಾ ಆನಂದ್ ತಮ್ಮ ಅಭಿನಯದ ಮೂಲಕ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.





Be the first to comment