ಬೆಂಗಳೂರು : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮೂಲಕ ಚಲನಚಿತ್ರ ರಂಗದ ಸಾಧಕರಿಗೆ ಕೊಡಲಾಗುವ ಜೀವಮಾನ ಸಾಧನೆ ಮತ್ತು ಚಲನಚಿತ್ರದ ವಿವಿಧ ವಿಭಾಗಗಳಲ್ಲಿ ವಾರ್ಷಿಕ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ೨೦೧೮ನೇ ವರ್ಷದ ಜೀವಮಾನ ಸಾಧನೆ ಪ್ರಶಸ್ತಿಗಳಿಗೆ ಬಸಂತ್ ಕುಮಾರ್ ಪಾಟೀಲ್ ಅಧ್ಯಕ್ಷತೆಯಲ್ಲಿ ಸರ್ಕಾರ ಸಮಿತಿಯನ್ನು ರಚಿಸಿತ್ತು. ಪಿ.ಎಚ್.ವಿಶ್ವನಾಥ್, ಮಾರ್ಸ್ ಸುರೇಶ್, ರವೀಂದ್ರ ಭಟ್ ಸಮಿತಿಯ ಸದಸ್ಯರಾಗಿದ್ದರು. ಈ ಸಮಿತಿ ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆಮಾಡಿದ್ದು ಪಟ್ಟಿ ಕೆಳಗಿನಂತಿದೆ.
ರಾಜ್ಯ ಚಲನಚಿತ್ರ ಸಾಹಿತ್ಯ ವಾರ್ಷಿಕ ಪ್ರಶಸ್ತಿ ಈ ಬಾರಿ ಇಬ್ಬರು ಲೇಖಕರಿಗೆ ಹಂಚಿಕೆಯಾಗಿದ್ದು, ಎನ್.ಎಸ್.ಶಂಕರ್ ಅವರ ಚಿತ್ರಕಥೆ ಹಾಗೆಂದರೇನು? ಡಾ. ಶರಣು ಹುಲ್ಲೂರು ಅವರ ಅಂಬರೀಶ್ ವ್ಯಕ್ತಿ-ವ್ಯಕ್ತಿತ್ವ-ವರ್ಣರಂಜಿತ ಬದುಕು ಕೃತಿಗಳಿಗೆ ಪ್ರಶಸ್ತಿಯನ್ನು ಜಂಟಿಯಾಗಿ ನೀಡಲಾಗಿದೆ.
ಜೀವಮಾನ ಸಾಧನೆ ಪ್ರಶಸ್ತಿ
ಡಾ.ರಾಜ್ಕುಮಾರ್ ಪ್ರಶಸ್ತಿ: ಜೆ.ಕೆ.ಶ್ರೀನಿವಾಸ ಮೂರ್ತಿ
ಪುಟ್ಟಣ್ಣ ಕಣಗಾಲ್ ಪ್ರಶಸ್ತಿ: ಪಿ.ಶೇಷಾದ್ರಿ
ಡಾ.ವಿಷ್ಣುವರ್ಧನ್ ಪ್ರಶಸ್ತಿ: ಬಿ.ಎಸ್.ಬಸವರಾಜು
೨೦೧೮ರ ಸಾಲಿನ ವಿವಿಧ ಪ್ರಶಸ್ತಿಗಳು:
ಮೊದಲನೇ ಅತ್ಯುತ್ತಮ ಚಿತ್ರ: ಆ ಕರಾಳ ರಾತ್ರಿ
ಎರಡನೇ ಅತ್ಯುತ್ತಮ ಚಿತ್ರ: ರಾಮನ ಸವಾರಿ
ಮೂರನೇ ಅತ್ಯುತ್ತಮ ಚಿತ್ರ: ಒಂದಲ್ಲಾ ಎರಡಲ್ಲಾ
ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ: ಸಂತಕವಿ ಕನಕದಾಸರ ರಾಮಧಾನ್ಯ
ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು
ಅತ್ಯುತ್ತಮ ಮಕ್ಕಳ ಚಿತ್ರ: ಹೂವು ಬಳ್ಳಿ
ನಿರ್ದೇಶಕರ ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ: ಬೆಳಕಿನ ಕನ್ನಡಿ
ಅತ್ಯುತ್ತಮ ಕರ್ನಾಟಕ ಪ್ರಾದೇಶಿಕ ಭಾಷಾ ಚಿತ್ರ: ದೇಯಿ ಬೈದೇತಿ
ಅತ್ಯುತ್ತಮ ನಟ: ರಾಘವೇಂದ್ರ ರಾಜ್ ಕುಮಾರ್
ಅತ್ಯುತ್ತಮ ನಟಿ: ಮೇಘನಾ ರಾಜ್
ಅತ್ಯುತ್ತಮ ಪೋಷಕ ನಟ: ಬಾಲಾಜಿ ಮನೋಹರ್
ಅತ್ಯುತ್ತಮ ಪೋಷಕ ನಟಿ: ವೀಣಾ ಸುಂದರ್
ಅತ್ಯುತ್ತಮ ಕತೆ: ಹರೀಶ್ ಎಸ್
ಅತ್ಯುತ್ತಮ ಚಿತ್ರಕಥೆ: ಪಿ.ಶೇಷಾದ್ರಿ
ಅತ್ಯುತ್ತಮ ಸಂಭಾಷಣೆ: ಶಿರಿಷಾ ಜೋಶಿ
ಅತ್ಯುತ್ತಮ ಸಂಗೀತ ನಿರ್ದೇಶನ: ರವಿ ಬಸ್ರೂರು (ಕೆಜಿಎಫ್)
ಅತ್ಯುತ್ತಮ ಬಾಲನಟ: ಮಾಸ್ಟರ್ ಆರೆನ್
ಅತ್ಯುತ್ತಮ ಬಾಲನಟಿ: ಬೇಬಿ ಸಿಂಚನಾ (ಅಂದವಾದ ಸಿನಿಮಾ)
ಅತ್ಯುತ್ತಮ ಗೀತ ರಚನೆ:ಡಾ.ಬರಗೂರು ರಾಮಚಂದ್ರಪ್ಪ
ಅತ್ಯುತ್ತಮ ಕಿರುಚಿತ್ರ: ಪಡುವಾರಳ್ಳಿ
ಅತ್ಯುತ್ತಮ ಹಿನ್ನಲೆ ಗಾಯಕ: ಸಿದ್ದಾರ್ಥ್ ಬೆಳ್ಮಣ್ಣು
ಅತ್ಯುತ್ತಮ ಹಿನ್ನಲೆ ಗಾಯಕಿ: ಕಲಾವತಿ ದಯಾನಂದ
Pingback: Buy Sex Toys Online