2 ಮಿಲಿಯನ್ ವೀಕ್ಷಣೆ ಕಂಡ ‘ಲ್ಯಾಂಡ್​ಲಾರ್ಡ್’ ಹಾಡು

ದುನಿಯಾ ವಿಜಯ್ ಹಾಗೂ ರಚಿತಾ ರಾಮ್ ಜೋಡಿಯಾಗಿ ನಟಿಸಿರುವ ‘ಲ್ಯಾಂಡ್​ಲಾರ್ಡ್’ ಚಿತ್ರದ ‘ರೋಮಾಂಚಕ’ ಹಾಡು ನಾಲ್ಕು ದಿನಗಳಲ್ಲಿ 2 ಮಿಲಿಯನ್‌ಗಿಂತ ಹೆಚ್ಚು ವೀಕ್ಷಣೆ ಪಡೆದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆಗುತ್ತಿದೆ.

ಈ ಚಿತ್ರದ  ಹಾಡಿನಲ್ಲಿ ವಿಜಯ್ ಪುತ್ರಿ ರಿತನ್ಯ ವಿಜಯ್ ಹಾಗೂ ‘ಡೇರ್ ಡೆವಿಲ್ ಮುಸ್ತಫಾ’ ಖ್ಯಾತಿಯ ಶಿಶಿರ್ ಬೈಕಾಡಿ ಅಭಿನಯಿಸಿದ್ದಾರೆ. ಜನವರಿ 8ರಂದು ಧಾರವಾಡದಲ್ಲಿ ಈ ಹಾಡನ್ನು ಬಿಡುಗಡೆ ಮಾಡಲಾಗಿದೆ. ಇದು ರಿತನ್ಯ ನಟಿಸುತ್ತಿರುವ ಮೊದಲ ಸಿನಿಮಾ.

ರಿತನ್ಯ  ಸಿನಿಮಾದಲ್ಲಿ ಹಳ್ಳಿ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಭಾಗ್ಯ’ ಎಂಬ ಪಾತ್ರದ ಮೂಲಕ ಅವರು ಕನ್ನಡ ಚಿತ್ರರಂಗಕ್ಕೆ  ಎಂಟ್ರಿ ಕೊಡುತ್ತಿದ್ದಾರೆ. ಈ ಹಾಡಿನ ಅವರ ಲುಕ್ ಮತ್ತು ಅಭಿನಯಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.

‘ಆನಂದ್ ಆಡಿಯೋ’ ಮೂಲಕ ಬಿಡುಗಡೆಗೊಂಡಿರುವ  ‘ರೋಮಾಂಚಕ’ ಹಾಡಿಗೆ ನಾಗಾರ್ಜುನ ಶರ್ಮಾ ಸಾಹಿತ್ಯ ಬರೆದಿದ್ದಾರೆ. ಸಂಜಿತ್ ಹೆಗ್ಡೆ ಮತ್ತು ಹರ್ಷಿಕಾ ದೇವನಾಥ್ ಅವರ ಮಧುರ ಗಾಯನ ಇದೆ.  ಮೇಲೋಡಿ ಹಾಡುಗಳ ಮೂಲಕ ಜನರ ಮನ ಗೆದ್ದಿರುವ ಅಜನೀಶ್ ಲೋಕನಾಥ್ ಅವರು ಸಂಗೀತ ನೀಡಿದ್ದಾರೆ.

‘ಲ್ಯಾಂಡ್​ಲಾರ್ಡ್’ ಜನವರಿ 23ರಂದು ಬಿಡುಗಡೆಗೊಳ್ಳಲಿದೆ. ಜಡೇಶ್ ಕೆ. ಹಂಪಿ ನಿರ್ದೇಶನದ  ಚಿತ್ರಕ್ಕೆ ಕೆ.ವಿ. ಸತ್ಯಪ್ರಕಾಶ್,  ಹೇಮಂತ್ ಗೌಡ ಬಂಡವಾಳ ಹೂಡಿದ್ದಾರೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!