‘2.0’ ಚಿತ್ರದ ಕಮಾಲ್; ನಾಲ್ಕೇ ದಿನಕ್ಕೆ 400 ಕೋಟಿ ರೂ. ಗಳಿಕೆ!

ಕಥೆ ಉತ್ತಮವಾಗಿರದಿದ್ದರೂ ಸಿನಿಮಾ ಇಷ್ಟೊಂದು ಗಳಿಕೆ ಮಾಡಿದ್ದು ಹೇಗೆ? ಅದಕ್ಕೂ ಉತ್ತರವಿದೆ. ‘2.0’ ಚಿತ್ರ ಭಾರಿ ನಿರೀಕ್ಷೆ ಹುಟ್ಟುಹಾಕಿತ್ತು. ಹಾಗಾಗಿ ಸಿನಿಮಾ ನೋಡಲು ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಮಂದಿರಕ್ಕೆ ಬಂದಿದ್ದರು. ಈ ಚಿತ್ರದಲ್ಲಿ ಕಥೆಗಿಂತ ಗ್ರಾಫಿಕ್ಸ್​ ಕೆಲಸಗಳೇ ಹೈಲೈಟ್​. ಅದರ ಜತೆಗೆ 3ಡಿ ಅನುಭವ ಬೇರೆ. ಹಾಗಾಗಿ ಈ ಚಿತ್ರ ಅನಾಯಾಸವಾಗಿ 400 ಕೋಟಿ ರೂ. ಗಳಿಕೆ ಮಾಡಿಕೊಂಡಿದೆ ಎಂಬುದು ಸಿನಿಮಾ ತಜ್ಞರ ಅಭಿಪ್ರಾಯ.

ಈ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ನಾಲ್ಕೇ ದಿನಕ್ಕೆ ಬರೋಬ್ಬರಿ​ 400 ಕೋಟಿ ರೂ. ಕಲೆಕ್ಷನ್ ಮಾಡಿದೆ.

ಅಕ್ಷಯ್​ ಕುಮಾರ್​, ರಜನಿಕಾಂತ್​, ಆ್ಯಮಿ ಜಾಕ್ಸನ್​ ಮೊದಲಾದವರು ಬಣ್ಣ ಹಚ್ಚಿರುವ ಈ ಚಿತ್ರಕ್ಕೆ ಮೊದಲ ದಿನ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ‘ಸಿನಿಮಾದಲ್ಲಿ ಕಥೆ ಏನು ಇಲ್ಲ’ ಎಂದು ಹೇಳಿಕೊಂಡಿದ್ದರು. ಆದಾಗ್ಯೂ ಈ ಚಿತ್ರ ನಾಲ್ಕೇ ದಿನಕ್ಕೆ ವಿಶ್ವಾದ್ಯಂತ 4,00 ಕೋಟಿ ರೂ. ಕಲೆಕ್ಷನ್​ ಮಾಡಿದೆ. ಬಾಲಿವುಡ್​ ಒಂದರಿಂದಲೇ ‘2.0’ಗೆ 100 ಕೋಟಿ ರೂ. ಸಂದಾಯವಾಗಿದೆ. ಈ ಮೂಲಕ ಭಾರತೀಯ ಚಿತ್ರರಂಗ ಇತಿಹಾಸದಲ್ಲಿ ‘2.0’ ಹೊಸ ದಾಖಲೆ ಬರೆದಿದೆ.

This Article Has 2 Comments
  1. Pingback: Casino

  2. Pingback: legit dumps shop 2021

Leave a Reply

Your email address will not be published. Required fields are marked *

Translate »
error: Content is protected !!