ಹೊಸಬರ ’19 ಏಜ್‍ಈಸ್ ನಾನ್ಸೆನ್ಸ್?’ ಚಿತ್ರವುಹೆಸರೇ ಹೇಳುವಂತೆ ಹತ್ತೋಂಬತ್ತರ ಹದಿಹರೆಯದ ವಯಸ್ಸಿನವರಿಗೆ ತಾವು ಏನು ಮಾಡಿದರೂ ಸರಿ ಅಂದುಕೊಳ್ಳುತ್ತಾರೆ. ಪೋಷಕರಿಗೆ ಮಕ್ಕಳು ಮಾಡುವುದು ನಾನ್ಸೆನ್ಸ್ ಅನಿಸುತ್ತದೆ.
ಗತಕಾಲದಲ್ಲಿ ಹೆಣ್ಣು ಮಕ್ಕಳು ಋತಿಮತಿ ಆಗುವ ಮುಂಚೆ ಮದುವೆ ಮಾಡುತ್ತಿದ್ದರು.ಗಂಡು ಹೆಣ್ಣು ಎಂಬ ತಾರತಮ್ಯವಿತ್ತು.ಈಗ ಕಾಲ ಬದಲಾಗಿದೆ. ವಯಸ್ಸು ನೋಡಿಕೊಂಡು ಮುಂದಕ್ಕೆ ಹೆಜ್ಜೆಇಡುತ್ತಾರೆ. ಇಬ್ಬರು ಸರಿಸಮಾನರು. ಹುಡುಗ ವಿಧುರನಾದರೆ ಮತ್ತೋಂದುತಾಳಿ ಕಟ್ಟುವಾಗ, ವಿಧುವೆಗೆಯಾಕೆ ಈ ನಿರ್ಭಂದ?.ತಂದೆತಾಯಿ ಹೇಳಿಕೊಟ್ಟಿದ್ದನ್ನು ಮಕ್ಕಳು ಮಾಡಬೇಕೆಂದು ಹೇಳುತ್ತಾರೆ.
ಇದನ್ನು ಪ್ರಶ್ನೆ ಮಾಡಿದಾಗಅವರಿಂದಸರಿಯಾದಉತ್ತರ ಸಿಗುವುದಿಲ್ಲ.ಇಂತಹ ಅಂಶಗಳನ್ನು ಒಳಗೊಂಡ ಕೌಟಂಬಿಕತ್ರಿಕೋನ ಪ್ರೇಮಕತೆಇರುವುದು ವಿಶೇಷ. ರಾಮನಗರ, ಬೆಂಗಳೂರು ಸುತ್ತಮುತ್ತ ಮೂವತ್ತೋಂದು ದಿವಸಗಳಲ್ಲಿ ಚಿತ್ರೀಕರಣ ನಡೆದಿದೆ.ರಚನೆ,ಚಿತ್ರಕತೆ,ಸಂಭಾಷಣೆ ಮತ್ತು ನಿರ್ದೇಶನದಜವಬ್ದಾರಿಯನ್ನುಎಂ.ಗಿಣಿ ಹೊತ್ತುಕೊಂಡಿದ್ದಾರೆ. 19ರ ವಯಸ್ಸಿನ ಮನುಷ್‍ಕಾಲೇಜು ಹುಡುಗನಾಗಿ ನಾಯಕ. ಬೀದಿನಾಟಕಗಳಲ್ಲಿ ಅಭಿನಯಿಸಿದ ಅನುಭವಇವರಿಗಿದೆ. ಚೆನ್ನೈ ಮೂಲದಮಧುಮಿತತುಂಟಾಟದ ಹುಡುಗಿಯಾಗಿ ನಾಯಕಿ.ಲಕ್ಷೀಮಂಡ್ಯಾಉಪನಾಯಕಿ, ಕಾವ್ಯಪ್ರಕಾಶ್ ನಾಯಕಿತಾಯಿ.
ಇವರೊಂದಿಗೆ ಮೇಸ್ತ್ರೀ ಚಿತ್ರದಲ್ಲಿ ನಟಿಸಿದ್ದ ಬಾಲು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಚಿತ್ರಮಂದಿರದಿಂದ ಹೂರಬರುವಜನರುಇವರನ್ನು ನೋಡಿದಾಗಗೌರವ ಸೂಚಿಸುತ್ತಾರಂತೆ.ಡಾ.ನಾಗೇಂದ್ರಪ್ರಸಾದ್, ಅಜಯ್‍ವೇದಾಂತಿ ಮತ್ತು ನಿರ್ದೆಶಕರು ರಚಿಸಿರುವ ಐದು ಗೀತೆಗಳಿಗೆ ಎಸ್.ಕೆ.ಕುಟ್ಟಿ ಸಂಗೀತ ಸಂಯೋಜಿಸಿದ್ದಾರೆ.
ಛಾಯಾಗ್ರಹಣ ಪಿ.ಜಿ.ವೆಟ್ರಿ, ಸಂಕಲನ ಗಣೇಶ್‍ನೀರ್ಚಾಲ್, ನೃತ್ಯ ಪವರ್‍ಶಿವು, ಸಾಹಸ ಕೌರವ್‍ವೆಂಕಟೇಶ್‍ಅವರದಾಗಿದೆ. ಕಲ್ಲಿನ ವ್ಯಾಪರ ಮಾಡುವಎಸ್.ಲೋಕೇಶ್ ಮಗನ ಸಲುವಾಗಿ ಬಂಡೆಯಂತೆಧೈರ್ಯದಿಂದನಿರ್ಮಾಣ ಮಾಡಿರುವ ಸಿನಿಮಾವು ಸುಮಾರು 80 ಕೇಂದ್ರಗಳಲ್ಲಿ ಶುಕ್ರವಾರದಂದು ಚಿತ್ರಮಂದಿರದಲ್ಲಿ ಅಲಂಕರಿಸಲಿದೆ.
Be the first to comment