ಚಿತ್ರ : 1975
ನಿರ್ದೇಶನ: ವಸಿಷ್ಠ ಬಂಟನೂರು
ತಾರಾಗಣ: ವಿಜಯ್ ಶೆಟ್ಟಿ, ಮಾನಸ, ಚಕ್ರವರ್ತಿ ಚಂದ್ರಚೂಡ್, ವೆಂಕಟೇಶ್ ಪ್ರಸಾದ್ ಇತರರು.
ರೇಟಿಂಗ್: 3/5
ಮೆಡಿಕಲ್ ಕಾಲೇಜಿನ 3 ವಿದ್ಯಾರ್ಥಿಗಳ ಕೊಲೆಯ ಸುತ್ತ ಸಾಗುವ ಸಿನಿಮಾ 1975.
ಚಿತ್ರದಲ್ಲಿ ಸಸ್ಪೆನ್ಸ್ , ಥ್ರಿಲ್ಲರ್, ಮರ್ಡರ್ ಮಿಸ್ಟ್ರಿ ಕಥೆಯ ಮಿಶ್ರಣದ ಮೂಲಕ ಸಿನಿಮಾವನ್ನು ನಿರೂಪಿಸುವ ಯತ್ನವನ್ನು ನಿರ್ದೇಶಕ ವಸಿಷ್ಠ ಬಂಟನೂರು ಮಾಡಿದ್ದಾರೆ. ಜೊತೆಗೆ ಇಲ್ಲಿ ವಿಭಿನ್ನ ಪ್ರೇಮ ಕಥೆಯನ್ನು ಕೂಡ ನಿರ್ದೇಶಕರು ಪ್ರೇಕ್ಷಕರ ಮುಂದೆ ಅನಾವರಣ ಮಾಡಿದ್ದಾರೆ.
ವೈದ್ಯಕೀಯ ವಿದ್ಯಾರ್ಥಿಗಳಾದ ಜಾರ್ಜ್, ಸೂರಜ್ ಹಾಗೂ ಜನಿಫರ್ ಕೊಲೆಯ ಸುತ್ತ ಚಿತ್ರ ಸುತ್ತುತ್ತದೆ. ಈ ವಿದ್ಯಾರ್ಥಿಗಳ ಕೊಲೆ ಮಾಡಿದವರು ಯಾರು? ಇದಕ್ಕೆ ಕಾರಣ ಏನು ಎನ್ನುವುದನ್ನು ನಿರ್ದೇಶಕರು ಸಸ್ಪೆನ್ಸ್ ಆಗಿ ನಿರೂಪಿಸುವ ಯತ್ನ ಮಾಡಿದ್ದಾರೆ.
ಚಿತ್ರದಲ್ಲಿ ವಿಜಯಶೆಟ್ಟಿ ಹಾಗೂ ಮಾನಸ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸುವ ಯತ್ನ ಮಾಡಿದ್ದಾರೆ. ಚಕ್ರವರ್ತಿ ಚಂದ್ರಚೂಟ್ ಅವರು ಪೊಲೀಸ್ ಅಧಿಕಾರಿಯಾಗಿ ಇಡೀ ಚಿತ್ರವನ್ನು ಆವರಿಸಿಕೊಂಡಿದ್ದಾರೆ. ಉಳಿದಂತೆ ವೆಂಕಟೇಶ್ ಪ್ರಸಾದ್, ಉಮೇಶ್, ಕೋಶನ್ ಗೌಡ ಸೇರಿದಂತೆ ಎಲ್ಲಾ ಕಲಾವಿದರು ತಮ್ಮ ಪಾತ್ರಗಳಿಗೆ ಜೀವ ತುಂಬ ಯತ್ನ ಮಾಡಿದ್ದಾರೆ.
ಪ್ರಸನ್ನ ಗುರಲಕೆರೆ ಅವರ ಛಾಯಾಗ್ರಹಣ, ಸಂದೇಶ್ ಬಾಬಣ್ಣ ಅವರ ಸಂಗೀತ ಚಿತ್ರದ ಕಥೆಗೆ ಪೂರಕವಾಗಿ ಕೆಲಸ ಮಾಡಿದೆ.
ಚಿತ್ರದಲ್ಲಿ ಕೊಲೆಯ ತನಿಖೆಯ ಜೊತೆಗೆ ಮಾದಕ ವಸ್ತುಗಳ ಜಾಲ ಮತ್ತಿತ್ತರ ವಿಷಯಗಳನ್ನು ನಿರ್ದೇಶಕರು ಮನರಂಜನಾತ್ಮಕವಾಗಿ ಹೇಳುವ ಮೂಲಕ ಎಲ್ಲರೂ ಚಿತ್ರವನ್ನು ನೋಡುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
_____
Be the first to comment