“100” ವೀಕ್ಷಿಸಿ ಗೃಹ ಸಚಿವರ ಮೆಚ್ಚುಗೆ

ನಟ ಹಾಗು ನಿರ್ದೇಶಕ ರಮೇಶ್ ಅರವಿಂದ್ ನಿರ್ದೇಶನದ 100 ಸಿನಿಮಾ‌ವನ್ನು ಗೃಹ ಸಚಿವ ಅರಗ ಜ್ಞಾನೇಂದ್ರ ವೀಕ್ಷಣೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.

ಸಚಿವ ಅರಗ ಜ್ಞಾನೇಂದ್ರ ಜೊತೆಗೆ ಐಎಎಸ್ ಅಧಿಕಾರಿ ಶಾಲಿನಿ ರಜನೀಶ್ ಕೂಡ ಸಿನಿಮಾ‌ ವೀಕ್ಷಿಸಿದರು. ಈ ವೇಳೆ ಸಿಓಡಿ ಡಿಜಿ ಅಧಿಕಾರಿಗಳು ಉಪಸ್ಥಿತರಿದ್ದರು.

ಈ ವೇಳೆ ಮಾತನಾಡಿದ ಸಚಿವರು, “ಸಿನಿಮಾ‌ ನೋಡಿ ಬಹಳ ಸಂತೋಷ ಆಯಿತು. ಸೋಷಿಯಲ್ ಮೀಡಿಯಾದಲ್ಲಿ ಯುವ ಜನಾಂಗ ಮುಳಗಿರುತ್ತೆ. ಇದರಿಂದ ಏನೆಲ್ಲ ತೊಂದರೆ ಆಗುತ್ತೆ ಅಂತಾ ಬಹಳ ಚೆನ್ನಾಗಿ ರಮೇಶ್ ಅವರು ನಿರ್ದೇಶನ ಮಾಡಿದ್ದಾರೆ. ಸಿನಿಮಾ ಇಂದು ಮನರಂಜನಾ ಮಾಧ್ಯಮ ಅಲ್ಲ. ಅಪರಾಧ ಜಗತ್ತನ್ನ ಮಟ್ಟ ಹಾಕೋದಿಕ್ಕೆ ಈ ಸಿನಿಮಾ ಬಹಳ ಸಹಕಾರಿಯಾಗಲಿ” ಎಂದು ಹೇಳಿದರು.

ಐಎಎಸ್ ಅಧಿಕಾರಿ ಶಾಲಿನಿ ರಜನೀಶ್ ಮಾತನಾಡಿ, “ಗೃಹ ಮಂತ್ರಿ ಜೊತೆಗೆ 100 ಸಿನಿಮಾ ನೋಡಿದೆ. ಇವತ್ತಿನ ಸೋಷಿಯಲ್ ಮೀಡಿಯಾದಿಂದ ಯುವ ಜನಾಂಗ ಹೇಗೆ ಸಮಸ್ಯೆಗಳಿಗೆ ಸಿಲುಕಿಕೊಳ್ಳುತ್ತೆ ಅನ್ನೋದನ್ನ 100 ಸಿನಿಮಾದಲ್ಲಿ ಬಹಳ ಚೆನ್ನಾಗಿ ತೋರಿಸಿದ್ದಾರೆ” ಎಂದು ತಿಳಿಸಿದರು.

ಡಿಜಿ (ಸಿಐಡಿ) ಮಾತನಾಡಿ, “ಸೋಷಿಯಲ್ ಮೀಡಿಯಾ ಒಂದು ವರ. ಅದನ್ನ ಶಾಪವಾಗಿ ಮಾಡಬೇಡಿ” ಎಂದರು.

100 ಚಿತ್ರ ನವೆಂಬರ್ 19ರಂದು ತೆರೆಗೆ ಬರುತ್ತಿದ್ದು, ಪ್ರೇಕ್ಷಕರಲ್ಲಿ ಕುತೂಹಲ ಉಂಟು ಮಾಡಿದೆ. ಸೂರಜ್ ಪ್ರೊಡಕ್ಷನ್ಸ್ ನಲ್ಲಿ ಎಂ.ರಮೇಶ್ ರೆಡ್ಡಿ, ಉಮಾ ನಿರ್ಮಾಪಕರಾಗಿರುವ 100 ಚಿತ್ರದಲ್ಲಿ ರಮೇಶ್ ಅರವಿಂದ್ ಅಲ್ಲದೇ, ಪೂರ್ಣ, ರಚಿತಾ ರಾಮ್, ರಾಜು ತಾಳಿಕೋಟೆ, ಬೇಬಿ ಸ್ಮಯಾ, ವಿಶ್ವಕರ್ಣ, ಪ್ರಕಾಶ್ ಬೆಳವಾಡಿ, ಮಾಲತಿ ಸುಧೀರ್, ಮತ್ತಿತರರು ನಟಿಸಿದ್ದಾರೆ.

ರವಿ ಬಸ್ರೂರು ಸಂಗೀತ ನಿರ್ದೇಶನ, ಸತ್ಯ ಹೆಗಡೆ ಕ್ಯಾಮೆರಾ, ಶ್ರೀನಿವಾಸ್ ಕಲಾಲ್ ಸಂಕಲನ, ಧನಂಜಯ ನೃತ್ಯ ಸಂಯೋಜನೆ, ಗುರು ಕಶ್ಯಪ್ ಸಂಭಾಷಣೆ ಈ ಚಿತ್ರಕ್ಕಿದೆ. ಜಾಲಿ ಬಾಸ್ಟಿನ್, ರವಿವರ್ಮ ಆಕ್ಷನ್ ಸೀನ್ ಕಂಪೋಸ್ ಮಾಡಿದ್ದಾರೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!