ಮೊಬೈಲ್ ಅಡಿಕ್ಷನ್ ತರುವ ಅನಾಹುತಗಳ ಬಗ್ಗೆ ಬೆಳಕು ಚೆಲ್ಲುವ 100 ಚಿತ್ರ ಯಶಸ್ವಿಯಾಗಿ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ.
ನವೆಂಬರ್ 19ರಂದು ತೆರೆಗೆ ಬಂದಿರುವ ರಮೇಶ್ ಅರವಿಂದ್ ನಟನೆ, ನಿರ್ದೇಶನದ ಚಿತ್ರ ಪ್ರೇಕ್ಷಕರನ್ನು ಮೋಡಿ ಮಾಡುವಲ್ಲಿ ಯಶಸ್ವಿಯಾಗಿದೆ.
100 ಚಿತ್ರ ಮೊಬೈಲ್ ನಿಂದ ಆಗುವ ಸಮಸ್ಯೆಗಳ ಕಂಟೆಂಟ್ ಹೊಂದಿದೆ. ಸಾಮಾಜಿಕ ಜಾಲತಾಣದ ಮತ್ತೊಂದು ಕರಾಳ ಮುಖವನ್ನು ಸಸ್ಪೆನ್ಸ್ ಥ್ರಿಲ್ಲರ್ ಮಾದರಿಯಲ್ಲಿ 100 ಚಿತ್ರದ ಮೂಲಕ ರಮೇಶ್ ಕಟ್ಟಿ ಕೊಡುವ ಯತ್ನ ಮಾಡಿದ್ದಾರೆ.
ಅಮ್ಮ, ಹೆಂಡತಿ, ತಂಗಿ ಮತ್ತು ಮುದ್ದಾದ ಹೆಣ್ಣು ಮಗುವಿನ ಕುಟುಂಬದ ಜವಾಬ್ದಾರಿ ಹೊತ್ತಿರುವ ವ್ಯಕ್ತಿಯಾಗಿ, ಸಮಾಜವನ್ನು ಕಾಪಾಡುವ ಪೊಲೀಸ್ ಅಧಿಕಾರಿಯಾಗಿ, ವೃತ್ತಿ ಮತ್ತು ಜವಾಬ್ದಾರಿಯ ನಡುವೆ ಸಿಲುಕುವ ನಾಯಕನ ತೊಳಲಾಟದ ಕಥೆಯನ್ನು ಥ್ರಿಲ್ಲರ್ ಮಾದರಿಯಲ್ಲಿ ಈ ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಲಾಗಿದೆ.
ಚಿತ್ರದಲ್ಲಿ ಫ್ಯಾಮಿಲಿ ಸಬ್ಜೆಕ್ಟ್ ಮತ್ತು ಥ್ರಿಲ್ಲರ್ ಕಥನ ಒಂದಕ್ಕೊಂದು ಪೂರಕವಾಗಿ ಸಾಗುತ್ತವೆ. ಸಿನಿಮಾದಲ್ಲಿ ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ಬಗ್ಗೆ ಗಮನ ಹರಿಸಲಾಗಿದೆ. ಸಾಮಾಜಿಕ ಜಾಲತಾಣಗಳು ಎಲ್ಲರ ಬದುಕಿನಲ್ಲಿಎಂಟ್ರಿಯಾಗಿ ಸೃಷ್ಟಿಸಿದ ಅನಾಹುತಗಳ ಬಗ್ಗೆ ಹೆಚ್ಚಿನವರಿಗೆ ಅರಿವಿಲ್ಲ. ಆದರೆ ಸ್ವಲ್ಪ ಯಾಮಾರಿದರೂ ಕುಟುಂಬದ ನೆಮ್ಮದಿ ನಾಶವಾಗುವ ಜೊತೆಗೆ ಆಗುವ ಅನಾಹುತದ ಘಟನೆಗಳ ಸುತ್ತ100 ಸಿನಿಮಾ ಬೆಳಕು ಚೆಲ್ಲುತ್ತದೆ.
ಸೂರಜ್ ಪ್ರೊಡಕ್ಷನ್ಸ್ ನಲ್ಲಿ ಎಂ.ರಮೇಶ್ ರೆಡ್ಡಿ, ಉಮಾ ನಿರ್ಮಾಪಕರಾಗಿರುವ 100 ಚಿತ್ರದಲ್ಲಿ ರಮೇಶ್ ಅರವಿಂದ್ ಅಲ್ಲದೇ, ಪೂರ್ಣ, ರಚಿತಾ ರಾಮ್, ರಾಜು ತಾಳಿಕೋಟೆ, ಬೇಬಿ ಸ್ಮಯಾ, ವಿಶ್ವಕರ್ಣ, ಪ್ರಕಾಶ್ ಬೆಳವಾಡಿ, ಮಾಲತಿ ಸುಧೀರ್, ಮತ್ತಿತರರು ನಟಿಸಿದ್ದಾರೆ. ರವಿ ಬಸ್ರೂರು ಸಂಗೀತ ನಿರ್ದೇಶನ, ಸತ್ಯ ಹೆಗಡೆ ಕ್ಯಾಮೆರಾ, ಶ್ರೀನಿವಾಸ್ ಕಲಾಲ್ ಸಂಕಲನ, ಧನಂಜಯ ನೃತ್ಯ ಸಂಯೋಜನೆ, ಗುರು ಕಶ್ಯಪ್ ಸಂಭಾಷಣೆ ಈ ಚಿತ್ರಕ್ಕಿದೆ. ಜಾಲಿ ಬಾಸ್ಟಿನ್, ರವಿವರ್ಮ ಆಕ್ಷನ್ ಸೀನ್ ಕಂಪೋಸ್ ಮಾಡಿದ್ದಾರೆ.
Be the first to comment